ಹೊನ್ನಾಳಿ ಜೂನ್ 23 ಪಟ್ಟಣದಲ್ಲಿರುವ ಜನತಾ ಶಿಕ್ಷಣ ಸಂಸ್ಥೆ( ರಿ)
ಹಿರೇಕೆರೂರು ಹೊನ್ನಾಳಿ ಉರ್ದು ಪ್ರೌಢಶಾಲೆಯು ನವೀಕರಣಗೊಂಡ ಹಿನ್ನೆಲೆಯಲ್ಲಿ ಶಾಲಾ ಕೊಠಡಿಗಳ ಉದ್ಘಾಟನೆಯನ್ನು ತಾಲೂಕು ಉಪವಿಭಾಗಾಧಿಕಾರಿಗಳಾದ ಸನ್ಮಾನ್ಯ ಶ್ರೀ ಹುಲಮನಿ ತಿಮ್ಮಣ್ಣ ಅವರಿಂದ ಉದ್ಘಾಟನೆಯನ್ನು ಮಾಡಲಾಯಿತು.
ಸ್ವಾಗತ ಭಾಷಣ ಹಾಗೂ ಪ್ರಾಸ್ತಾವಿಕ ನುಡಿಯನ್ನು ಉರ್ದು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶಕೀಲ್ ಅಹಮದ್ ರವರು ನಡೆಸಿಕೊಟ್ಟರು.
ಕ್ಷೇತ್ರ ಸಮನ್ವಯಾಧಿಕಾರಿ ಯಾದ ತಿಪ್ಪೇಶಪ್ಪ ರವರು ನಂತರ ಮಾತನಾಡಿ ಹೊನ್ನಾಳಿ ತಾಲೂಕಿನಲ್ಲಿ 3 ಉರ್ದು ಶಾಲೆಗಳು ಇದ್ದು ಅದರಲ್ಲಿ ಎರಡು ಸರ್ಕಾರಿ ಉರ್ದು ಶಾಲೆಗಳು ಹಾಗೂ ಒಂದು ಅನುದಾನಿತ ಜನತಾ ಉರ್ದು ಶಾಲೆಯು ಸುಸಜ್ಜಿತವಾದ ಕೊಠಡಿ ಹೊಂದಿದೆ .ಉರ್ದು ಮಕ್ಕಳಿಗೆ ಒಳ್ಳೆ ಶಿಕ್ಷಣವನ್ನು ಈ ಸಂಸ್ಥೆಯು ಮಾಡಿಕೊಡುತ್ತಾ ಉತ್ತಮ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿಗಳಾದ ಹುಲ್ಮನಿ ತಿಮ್ಮಣ್ಣ ನವರು ನಂತರ ಮಾತನಾಡಿ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ನಿಸಾರ್ ಅಹಮದ್ ಅವರು ಹಚ್ಚೇವು ಕನ್ನಡದ ದೀಪ ಸಾಹಿತ್ಯ ಬರೆದು ಪದ್ಯದ ರೂಪದಲ್ಲಿ ಕನ್ನಡ ಮತ್ತು ಉರ್ದು ಭಾಷೆ ಸಾಹಿತ್ಯ ಒಳಗೊಂಡಂತೆ ಹಿಂದೂ ಮತ್ತು ಮುಸ್ಲಿಂ ಬಾಂಧವರು ಅಣ್ಣ ತಮ್ಮ ರೀತಿಯಲ್ಲಿ ನಾವು ಬದುಕನ್ನು ಕಟ್ಟಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು. ಇದರ ಜೊತೆಗೆ ಉರ್ದು ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಹೊನ್ನಾಳಿಯಲ್ಲಿ ಜನತಾ ಉರ್ದು ಪ್ರೌಢ ಶಾಲೆಯು ನಿಮಗೆ ಶಿಕ್ಷಣವನ್ನು ಪಡೆಯಲಿಕ್ಕೆ ಅನುಕೂಲ ಮಾಡಿಕೊಟ್ಟಿದೆ ಹಾಗಾಗಿ ಬೆಳಕಿಲ್ಲದ ದಾರಿಯಲ್ಲಿ ನಡೆಯ ಬಲ್ಲೆ ,ಕನಸಿಲ್ಲದ ದಾರಿಯಲ್ಲಿ ನಡೆಯಲಾರೆ ,ಇದರ ಅರ್ಥ ಪ್ರತಿಯೊಂದು ವಿದ್ಯಾರ್ಥಿಗಳು ಶಿಕ್ಷಣ ಪಡೆಯಬೇಕು ಎಂಬ ದೊಡ್ಡ ಕನಸಿರಬೇಕು. ನೀವು ಓದುವ ಸಮಯದಲ್ಲಿ ಸ್ನೇಹಿತರು ಯಾರಾದರೂ ಇದ್ದರೆ ಅದು ಪುಸ್ತಕ ಮಾತ್ರ ಎಂದು ತಿಳಿಸುತ್ತಾ ತಾವು ಓದುವ ಸಂದರ್ಭದಲ್ಲಿ ದೊಡ್ಡ ಕನಸುಗಳು ಇದ್ದರೆ ತಾವು ಏಸಿ ತಸಿಲ್ದಾರ್, ಕೆ ಎ ಎಸ್, ಐಎಎಸ್ ,ಐಪಿಎಸ್ ಇನ್ನು ಮುಂತಾದ ಉನ್ನತ ಹುದ್ದೆಯನ್ನು ಶ್ರಮಪಟ್ಟು ಶಿಕ್ಷಣವನ್ನು ಪಡೆದುಕೊಂಡಾಗ ಪಿಎಸ್ಐ ಆಗಿರಬಹುದು ಇನ್ನು ಮುಂತಾದ ದೊಡ್ಡ ಮಟ್ಟದ ಅಧಿಕಾರವನ್ನು ಸುಮಾರು 8 ವರ್ಷಗಳ ಕಾಲ ಸತತವಾಗಿ ಒಂದೇ ಗುರಿಯನ್ನು ಇಟ್ಟುಕೊಂಡು ವಿದ್ಯಾಭ್ಯಾಸವನ್ನು ಮಾಡಿದರೆ ನಾವು ಗುರಿಯನ್ನು ಸಾಧಿಸಬಹುದು ಎಂದು ಮಕ್ಕಳಿಗೆ ಪಾಠವನ್ನು ಹೇಳಿಕೊಟ್ಟರು.
ಜನತಾ ಪ್ರೌಢಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಅಲ್ತಾಜ್ ಎಂಎಚ್ ಕಡೆಮನಿ ವಕೀಲರು ನಂತರ ಮಾತನಾಡಿ ಉಪವಿಭಾಗಾಧಿಕಾರಿಗಳು ಕ್ಷೇತ್ರ ಅಧಿಕಾರಿಗಳು ಅಕ್ಷರ ದಾಸೋಹ ಅಧಿಕಾರಿಗಳು ಇಂದಿನ ದಿವಸ 20 21 /22 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ನಮ್ಮ ಸಂಸ್ಥೆ ಮತ್ತು ಶಾಲೆಗೆ ಹೆಸರನ್ನು ತಂದು ಕೊಟ್ಟಿದ್ದಾರೆ ಇವತ್ತು ನನ್ನ ಸಂತೋಷದ ಸುದಿನ ದಿನ ,ಪ್ರತಿಯೊಂದು ನಮ್ಮ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಈ ವಿದ್ಯಾರ್ಥಿಗಳ ತರಹ ಅತಿ ಹೆಚ್ಚು ಅಂಕ ಪಡೆದು ಶಾಲೆಗೆ ಮತ್ತು ತಮ್ಮ ತಂದೆ ತಾಯಿಯವರಿಗೆ ಹೆಸರು ತಂದುಕೊಡುವುದರ ಜೊತೆಗೆ ಉನ್ನತಮಟ್ಟದ ಶಿಕ್ಷಣ ಪಡೆದು ಅಧಿಕಾರಿಯಾಗಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಜನತಾ ಪ್ರೌಢಶಾಲೆಯ ಅಧ್ಯಕ್ಷರಾದ ಅಲ್ತಾಜ್ ಎನ ಎಚ್ ಕಡೆಮನಿ ವಕೀಲರು, ಉಪವಿಭಾಗಾಧಿಕಾರಿ ಗಳಾದ ಹುಲ್ಮನಿ ತಿಮ್ಮಣ್ಣ, ತಿಪ್ಪೇಶಪ್ಪ ಎಂ ಕ್ಷೇತ್ರ ಸಮನ್ವಯಾಧಿಕಾರಿ ಗಳು ಹೊನ್ನಾಳಿ ,ರುದ್ರಪ್ಪ ಕೆಆರ್ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಹೊನ್ನಾಳಿ ಸೈಯದ್ ಅಲಿ, ಮಹಮ್ಮದ್ ರಫಿ, ಮಹಮ್ಮದ್ ಗೌಸ್ ಲೋಹರ್, ನಜೀರ್ ಅಹ್ಮದ್, ಅಬ್ದುಲ್ ಹುಸೇನ್ ಎಸ್ಎಸ್ ಮುಲ್ಲಾ, ಮಹಮ್ಮದ್ ಖಾನ್ ಎಚ್ ಕಡಿಮನಿ, ಹೊನ್ನೂರಸಾಬ್ ,ಮುಖ್ಯೋಪಾಧ್ಯಾಯರಾದ ಶಕೀಲ್ ಆಹ್ಮದ್, ಎಲ್ಲಾ ಶಾಲಾ ಶಿಕ್ಷಕರು ಶಿಕ್ಷಕಿಯರು ಮತ್ತು ಮಕ್ಕಳು ಎಲ್ಲಾ ಶಾಲಾ ಸಿಬ್ಬಂದಿ ವರ್ಗ ಸಹ ಭಾಗಿಯಾಗಿದ್ದರು.