ಹೊನ್ನಾಳಿ : ಭಾರತೀಯ ಜನಸಂಘದ ಸಂಸ್ಥಾಪಕರು, ದೇಶಕಂಡ ಧೀಮಂತ ಮುತ್ಸದ್ದಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದ ದಿನವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಸುರೇದ್ರ ನಾಯ್ಕ ಅವರ ಸಹೋದರ ರವಿ ಅವರ ವಿವಾಹ ಕಾರ್ಯಕ್ರಮದಲ್ಲಿ ನವದಂಪತಿಗಳು ಹಾಗೂ ಪಕ್ಷದ ಮುಖಂಡರೊಂದಿಗೆ ಶ್ಯಾಮ್ ಸುಂದರ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದರು.
ಡಾ|| ಶ್ಯಾಮ ಪ್ರಸಾದ್ ಮುಖರ್ಜಿ ಅವರು ಶ್ರೇಷ್ಠ ವಿದ್ವಾಂಸರು, ಶ್ರೇಷ್ಟ ರಾಜನೀತಿ ತಜ್ಞರು, ಅಸಾಧಾರಣ ಸಂಸದೀತ ಪಟುವಾಗಿದ್ದ ಅವರು ಭಾರತೀಯ ರಾಜಕೀಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದರು.
ಭಾರತದ ಏಕತೆ, ಅಖಂಡತೆಗೆ ಅವರಿಗಿದ್ದ ಪ್ರೇಮ, ಕಾಳಜಿ, ಪ್ರತಿಯೊಬ್ಬ ಭಾರತೀಯನಿಗೆ ಅವರ ಮೇಲೆ ಅಪಾರ ಗೌರವ ಮೂಡುವಂತೆ ಮಾಡಿತ್ತು ಎಂದರು.
ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಆಂದೋಲನದ ಕಷ್ಟಕರ ಸ್ಥಿತಿಯಲ್ಲಿ ಭಾರತೀಯ ರಾಷ್ಟ್ರೀಯತೆ ವಕ್ತಾರರಾಗಿದ್ದು ಶ್ಯಾಮ್ ಪ್ರಸಾದ್ ಅವರು, ಭಾರತೀಯ ಕೈಗಾರಿಕಾ ನೀತಿಗೆ ಅಡಿಪಾಯ ಹಾಕಿಕೊಟ್ಟರು ಎಂದರು.
ದೇಶದ ಪರಿಸ್ಥಿತಿ ಅಧೋಗತಿಗೆ ಇಳಿದಾಗ ರಾಜಕೀಯ ಅಸ್ಥಿರತೆ ಆಡಳಿತ ದೋಷ ಕಂಡಾಗ ಅವಿರತವಾಗಿ ದುಡಿದು ಭಾರತೀಯ ಜನಸಂಘ ಎಂಬ ಹೊಸ ಪಕ್ಷಕ್ಕೆ ನಾದಿ ಹಾಡಿದರು ಎಂದರು.
ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ಆತ್ಮ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಆದರ್ಶಗಳನ್ನು ಅವರ ಬಲಿದಾನ ದಿನವಾದ ಇಂದು ನೆನೆಯೋಣ ಎಂದರು.
ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಅವರ ತ್ಯಾಗ ಬಲಿದಾನ ವ್ಯರ್ಥವಾದಂತೆ ದೇಶದ ಅಖಂಡತೆಯನ್ನು ಉಳಿಸಿ ದೇಶವನ್ನು ಕಟ್ಟು ಬೆಳೆಸುವ ಪ್ರಯತ್ನವನ್ನು ಎಲ್ಲರೂ ಮಾಡೋಣ ಎಂದರು.
ಈ ಸಂದರ್ಭ ದಿಶಾಕಮಿಟಿ ನಿರ್ದೇಶಕರಾದ ನೆಲವೊನ್ನೆ ಮಂಜುನಾಥ್, ಜಿಲ್ಲಾಪ್ರದಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್,ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಅರಕೆರೆ,ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷ ಸುರೇಂದ್ರ ನಾಯ್ಕ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಎಲ್.ರಂಗನಾಥ್,ಎಸ್.ಪಿ.ರವಿಕುಮಾರ್,ಯುವಮೋರ್ಚ ತಾಲೂಕು ಅಧ್ಯಕ್ಷ ವಿಕಾಸ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರಿದ್ದರು.

Leave a Reply

Your email address will not be published. Required fields are marked *