ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2022-23ನೇ
ಸಾಲಿಗೆ ಉದ್ಯೋಗಿನಿ ಯೋಜನೆಯಡಿ ದಾವಣಗೆರೆ ಜಿಲ್ಲೆಯ ವಿಧಾನಸಭಾ
ಕ್ಷೇತ್ರವಾರು ಜಿಲ್ಲೆಗೆ ಒಟ್ಟು ಭೌತಿಕ 32 ವರ್ಗವಾರು ಗುರಿಯನ್ನು
ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಭೌತಿಕ 02, ದಮನಿತ
ಮಹಿಳೆಯರಿಗೆ 04 ಮತ್ತು ಹೆಚ್.ಐ.ವಿ.ಸೋಂಕಿತ ಮಹಿಳೆಯರಿಗೆ
ಭೌತಿಕ 04 ಗುರಿಯನ್ನು ನಿಗದಿಪಡಿಸಿದ್ದು, ಅರ್ಹ ಮಹಿಳೆಯರಿಂದ
ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಉದ್ಯೋಗಿನಿ ಯೋಜನೆಯಡಿ ಆದಾಯೋತ್ಪನ್ನ
ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕುಗಳ
ಸಹಯೋಗದೊಂದಿಗೆ ಸಾಲದ ವ್ಯವಸ್ಥೆ ಹಾಗೂ ನಿಗಮದಿಂದ
ಸಹಾಯಧನವನ್ನು ನೀಡಲಾಗುವುದು. 18 ರಿಂದ 55
ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ
ಯೋಜನಾಧಿಕಾರಿಗಳ ಕಚೇರಿಯಲ್ಲಿ ಜು.06 ರೊಳಗೆ ಅರ್ಜಿ ಪಡೆದು
ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ದಾಖಲಾತಿಗಳೊಂದಿಗೆ ಜೂ.25
ಸಂಜೆ 5.30 ರೊಳಗಾಗಿ ಸಂಬಂಧಪಟ್ಟ ಶಿಶು ಅಭಿವೃದ್ಧಿ
ಯೋಜನಾಧಿಕಾರಿಗಳ ಕಚೇರಿಗಳಿಗೆ ಅರ್ಜಿ ಸಲ್ಲಿಸಬಹುದು. ಕೊನೆ
ದಿನಾಂಕದ ನಂತರ ಬಂದಂತಹ ಹಾಗೂ ಅಪೂರ್ಣ ಮಾಹಿತಿ ಇರುವ
ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಪ್ರಾಥಮಿಕ ಪರಿಶೀಲನೆ ಮಾಡಿ ಅರ್ಹ ಅರ್ಜಿಗಳನ್ನು ಆಯ್ಕೆ
ಸಮಿತಿಯಲ್ಲಿ ಪರಿಶೀಲಿಸಿ ಆಯ್ಕೆಯಾದ ಅರ್ಜಿಗಳನ್ನು ಅರ್ಜಿದಾರರ ಸೇವಾ
ವಲಯದಲ್ಲಿ ಬರುವ ಬ್ಯಾಂಕಿನ ಶಾಖೆಗಳಿಗೆ ಸಾಲ ಮಂಜೂರಾತಿಗಾಗಿ
ಶಿಫಾರಸ್ಸು ಮಾಡಲಾಗುವುದು. ಬ್ಯಾಂಕಿನಿಂದ ಸಾಲ ನೀಡಲು ಒಪ್ಪಿದಲ್ಲಿ ಇಡಿಪಿ
ತರಬೇತಿ ಏರ್ಪಡಿಸಿ ಸಹಾಯಧನ ಬಿಡುಗಡೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ 08192-296268 ಗೆ ಕಚೇರಿ
ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.