ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ
ರೇಣುಕಾಚಾರ್ಯ ರವರು ಜೂ.25 ರಂದು ಬೆ. 10.30 ಕ್ಕೆ ಹೊನ್ನಾಳಿ
ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಸ್ಥಳೀಯ
ಕಾರ್ಯಕ್ರಮದಲ್ಲಿ ಭಾಗವಹಿಸುವರು, ಮ.2.30 ಗಂಟೆಗೆ
ಕೊಡತಾಳ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ ಮತ್ತು ರಸ್ತೆ
ತಡೆಗೋಡೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು.
ನಂತರ 03.30 ಕ್ಕೆ ಸವಳಂಗ ಗ್ರಾಮದಲ್ಲಿ ಸಿ.ಸಿ. ರಸ್ತೆ, ಅಂಗನವಾಡಿ
ಕಟ್ಟಡ ಉದ್ಘಾಟನೆ ಹಾಗೂ ಜಾಕ್‍ವೆಲ್ ಶಂಕುಸ್ಥಾಪನೆ ನೆರವೇರಿಸುವರು.
ಸಂಜೆ 05 ಗಂಟೆಗೆ ಹೊನ್ನಾಳಿಯಲ್ಲಿ ಸಾರ್ವಜನಿಕರ
ಕುಂದುಕೊರತೆಗಳ ಅಹ್ವಾಲುಗಳನ್ನು ಸ್ವೀಕರಿಸುವುದು
ಮತ್ತು ವಾಸ್ತವ್ಯ ಮಾಡುವರು.
ಜೂ.26 ರಂದು ಬೆ.10 ಗಂಟೆಗೆ ಹೊನ್ನಾಳಿ ಸರ್ಕಾರಿ ಪದವಿ ಪೂರ್ವ
ಕಾಲೇಜಿನ ಆರ್ಚ್ ಮತ್ತು ಕಾಂಪೌಂಡ್ ನಿರ್ಮಾಣ ಕಾಮಗಾರಿ ಉದ್ಘಾಟನೆ
ನೆರವೇರಿಸುವರು, ಬೆ.10.30 ಕ್ಕೆ ಚಿನ್ನಿಕಟ್ಟೆ ಗ್ರಾಮದಲ್ಲಿ ಸರ್ಕಾರಿ
ಶಾಲೆಯ ಶೌಚಾಲಯ ಉದ್ಘಾಟನೆ ಮತ್ತು ಫೀಡರ್ ನಾಲಾ
ಶಂಕುಸ್ಥಾಪನೆ ನೆರವೇರಿಸುವರು, ಬೆ.11.30 ಕ್ಕೆ ಹಳೆಜೋಗ
ಗ್ರಾಮದಲ್ಲಿ ಸಿ.ಸಿ. ಚರಂಡಿ ಉದ್ಘಾಟನೆ ಮತ್ತು ಫೀಡರ್ ಕೆನಾಲ್ ಕಾಮಗಾರಿ
ಶಂಕುಸ್ಥಾಪನೆÉ ನೆರವೇರಿಸುವುದು. ನಂತರ ಮ.12.30 ಕ್ಕೆ
ಹೊಟ್ಯಾಪುರ ಗ್ರಾಮದಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ
ಭಾಗವಹಿಸುವರು, ಮ.02.30 ಸೋಗಿಲು ಗ್ರಾಮದಲ್ಲಿ ಸಿ.ಸಿ. ರಸ್ತೆ
ಉದ್ಘಾಟನೆ ನೆರವೇರಿಸುವರು, ಮ.03.30 ಗಂಟೆಗೆ ಮಾಚೇನಹಳ್ಳಿ
ಗ್ರಾಮದಲ್ಲಿ ಮಾಚೇನಹಳ್ಳಿ ಗ್ರಾಮದಿಂದ ಲಕ್ಕಿನಕೊಪ್ಪ
ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ
ನೆರವೇರಿಸುವರು.ನಂತರ ಸಂಜೆ.04.30 ಕ್ಕೆ
ಸೂರಗೊಂಡನಕೊಪ್ಪ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ
ಶಂಕುಸ್ಥಾಪನೆ ನೆರವೇರಿಸುವರು, ರಾತ್ರಿ.07.00 ಗಂಟೆಗೆ
ಹೊನ್ನಾಳಿಗೆ ಪ್ರಯಾಣ ಮತ್ತು ವಾಸ್ತವ್ಯ ಮಾಡುವರು.
ಜೂ.27 ರಂದು ಬೆ.11 ಗಂಟೆಗೆ ಕೊಡಚಗೊಂಡನಹಳ್ಳಿ
ಗ್ರಾಮದಿಂದ ಬಸವನಹಳ್ಳಿ ರಸ್ತೆಯವರೆಗೆ ರಸ್ತೆ ಅಭಿವೃದ್ಧಿ
ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು, ಬೆ.11.30 ಕ್ಕೆನ್ಯಾಮತಿ
ಮುಖ್ಯರಸ್ತೆಯಿಂದ ಕಂಕನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿ
ಕಾಮಗಾರಿ ಶಂಕಸ್ಥಾಪನೆ ನೆರವೇರಿಸುವರು. ನಂತರ ಮ.12
ಗಂಟೆಗೆ ಫಲವನಹಳ್ಳಿ ಗ್ರಾಮದಿಂದ ದಾಸರಗಡಿ ಗುಡ್ಡಕ್ಕೆ
ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಫಲವನಹಳ್ಳಿ
ಮುಖ್ಯ್ಯರಸ್ತೆಯಿಂದ ದೊಡ್ಡೆತ್ತಿನಹಳ್ಳಿ ರಸ್ತೆಯವರೆಗೆ ರಸ್ತೆ
ಅಭಿವೃದ್ಧಿ ಕಾಮಗಾರಿ ಶಂಕಸ್ಥಾಪನೆ ನೆರವೇರಿಸುವರು, ಮ.12.30 ಕ್ಕೆ
ದೊಡ್ಡೇರಿ ಗ್ರಾಮದ ಎಸ್.ಎಚ್. ರಸ್ತೆಯಿಂದ ಮಂಜಪ್ಪನ
ಜಮೀನಿನವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕಸ್ಥಾಪನೆ
ನೆರವೇರಿಸುವರು, ಮ.02.45 ಗಂಟೆಗೆ ಗುಡ್ಡೆಹಳ್ಳಿ ಗ್ರಾಮದಲ್ಲಿ
ಕೆರೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು,
ಮ.03.15 ಕ್ಕೆ ಮಲ್ಲಿಗೇನºಳ್ಳಿ ಗ್ರಾಮದಿಂದ ಸ್ಮಶಾನದ
ರಸ್ತೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕಸ್ಥಾಪನೆ
ನೆರವೇರಿಸುವರು, ಮ.03.45 ಕ್ಕೆ ಕೆಂಚಿಕೊಪ್ಪ ಗ್ರಾಮದಲ್ಲಿ
ಹೊಲಗಳಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕಸ್ಥಾಪನೆ
ನೆರವೇರಿಸುವರು, ನಂತರ ಸಂಜೆ.04.15 ಗಂಟೆಗೆ ಮಾದೇನಹಳ್ಳಿ
ಗ್ರಾಮದ ಐಯ್ಯನಕೆರೆಯಿಂದ ಗುಡ್ಡದವರೆಗೆ ರಸ್ತೆ ಅಭಿವೃದ್ಧಿ
ಕಾಮಗಾರಿ ಶಂಕಸ್ಥಾಪನೆ ನೆರವೇರಿಸುವರು, ಸ.04.45 ಕ್ಕೆ
ದೊಡ್ಡೇರಹಳ್ಳಿ ಗ್ರಾಮದ ದನದ ಗುಡ್ಡಕ್ಕೆ ಹೋಗುವ ರಸ್ತೆ
ಅಭಿವೃದ್ಧಿ ಕಾಮಗಾರಿ ಶಂಕಸ್ಥಾಪನೆ ನೆರವೇರಿಸುವರು, ಸಂ.06.30 ಕ್ಕೆ
ಹೊನ್ನಾಳಿಗೆ ಪ್ರಯಾಣ ಮತ್ತು ಹೊನ್ನಾಳಿಯಲ್ಲಿ ಸಾರ್ವಜನಿಕರ
ಕುಂದುಕೊರತೆಗಳ ಆಹ್ವಾನಗಳನ್ನು ಸ್ವೀಕರಿಸುವುದು.
ನಂತರ ಹೊನ್ನಾಳಿಯಲ್ಲಿ ವಾಸ್ತವ್ಯ ಮಾಡುವರು.
ಜೂ.28 ರಂದು ಬೆಳಿಗ್ಗೆ10.30 ಗಂಟೆಗೆ ಸೂರಗೊಂಡನಕೊಪ್ಪ
ಗ್ರಾಮದಲ್ಲಿ ಬಂಜಾರ ಫಲಾನುಭವಿಗಳಿಗೆ ಕರ್ನಾಟಕ ತಾಂಡಾ
ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಸೌಲಭ್ಯ ವಿತರಣಾ ಹಾಗೂ
ಎಸ್.ಎಸ್.ಎಲ್.ಸಿ./ಪಿ.ಯು.ಸಿ. ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರ
ಸಮಾರಂಭದಲ್ಲಿ ಭಾಗವಹಿಸುವರು, ನಂತರ ಮ.03 ಗಂಟೆಗೆ
ಹೊನ್ನಾಳಿ ತಾಲ್ಲೂಕು ಪಂಚಾಯತಿ ಸಾಮಥ್ರ್ಯಸೌಧದಲ್ಲಿ ಜಲಜೀವನ್
ಮಿಷನ್ ಯೋಜನೆಯ ಕಾಮಗಾರಿಗಳ ಅನುಷ್ಠಾನದ ಬಗ್ಗೆ
ಸಂಬಂಧಪಟ್ಟ ಅಧಿಕಾರಿಗಳು/ನೌಕರರು ಮತ್ತು ಗುತ್ತಿಗೆದಾರರ
ಸಭೆ ನಡೆಸುವರು. ಸಂಜೆ.04.30 ಕ್ಕೆ ಸೂರಗೊಂಡನಕೊಪ್ಪದಲ್ಲಿ
ನಡೆಯುವ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ
ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು, ರಾತ್ರಿ.07.00
ಗಂಟೆಗೆ ಹೊನ್ನಾಳಿಗೆ ಪ್ರಯಾಣ ಮತ್ತು ವಾಸ್ತವ್ಯ ಮಾಡುವರು.
ಜೂ.29 ರಂದು ಬೆ.11 ಗಂಟೆಗೆ ದಾವಣಗೆರೆ ನಗರದಲ್ಲಿ
ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು, ನಂತರ
ಮ.03 ಗಂಟೆಗೆ ಕೂಲಂಬಿ ಗ್ರಾಮದಲ್ಲಿ ಕತ್ತಲಗೆರೆ ರಸ್ತೆಯಿಂದ
ಕೂಲಂಬಿ-ಕೆಂಗಲಹಳ್ಳಿ ರಸ್ತೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ
ಮತ್ತು ನೆಲಹೊನ್ನೆ ರಸ್ತೆಯಿಂದ ಕುಂದೂರು-ನೆಲಹೊನ್ನೆ
ರಸ್ತೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ
ನೆರವೇರಿಸುವರು, ಸಂಜೆ.04 ಗಂಟೆಗೆ ಮುಕ್ತೇನಹಳ್ಳಿ
ಗ್ರಾಮದಲ್ಲಿ ಮುಕ್ತೇನಹಳ್ಳಿ ಗ್ರಾಮದಿಂದ ಸಂಕಲೀಪುರ
ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಕೆಂಗಲಹಳ್ಳಿ
ಗ್ರಾಮದಿಂದ ಹಳೆಬನ್ನಿಕೋಡು ರಸ್ತೆಯವರೆಗೆ ರಸ್ತೆ ಅಭಿವೃದ್ಧಿ
ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು ನಂತರ ರಾ.ತ್ರಿ 10
ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ
ಕರ್ತವ್ಯಾಧಿಕಾರಿ ಕೆ.ರುದ್ರೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.