ವಿಶೇಷ ಚೇತನ ಮಕ್ಕಳಿಗಾಗಿ ವಿತರಿಸಲಾದ ಬೋಧನಾ ಕಲಿಕಾ
ಸಾಮಗ್ರಿಯ ಕೀಟ್‍ಗಳನ್ನು ಪೆÇೀಷಕರು ಸರಿಯಾದ
ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ವಿಕಲಚೇತನ
ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಡಾ.ಕೆ.ಕೆ.
ಪ್ರಕಾಶ್ ಹೇಳಿದರು.
ಶುಕ್ರವಾರ ನಗರದ ದೇವರಾಜ್ ಅರಸ್ ಬಡಾವಣೆಯ
ವಿಕಲಚೇತನರ ಕೌಶಲ್ಯಾಭಿವೃದ್ಧಿ, ಪುನರ್ವಸತಿ ಮತ್ತು
ಸಬಲೀಕರಣ ಸಂಯುಕ್ತ ಪ್ರಾದೇಶಿಕ ಕೇಂದ್ರದಲ್ಲಿ ಅಡಿಪ್
ಯೋಜನೆಯಡಿ ಸಾಧನ ಸಲಕರಣೆಗಳ ವಿತರಣೆ
ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಬೋಧನಾ ಕಲಿಕಾ ಸಾಮಗ್ರಿಗಳ ಕಿಟ್
ಪಡೆಯುವುದು ಕಷ್ಟಕರವಾಗಿತ್ತು, ಆದರೆ ಪ್ರಸ್ತುತ
ದಿನಗಳಲ್ಲಿ ನೋಂದಣಿ ಮಾಡಿಸಿಕೊಂಡ ಎಲ್ಲರಿಗೂ ಕೂಡ ಸರ್ಕಾರದ
ವತಿಯಿಂದ ಪೂರ್ಣ ಪ್ರಮಾಣದಲ್ಲಿ ಕಿಟ್‍ಗಳು ಒದಗಿಸಲಾಗುತ್ತಿದೆ.
ವಿಕಲಚೇತನ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದಿಂದ ಉತ್ತಮ
ಸೌಲಭ್ಯಗಳುಳ್ಳ ಸಿ.ಆರ್.ಸಿ ಕೇಂದ್ರವನ್ನು ನಿರ್ಮಾಣ
ಮಾಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ನೂತನ ಸಿ.ಆರ್.ಸಿ
ಕೇಂದ್ರದ ಮೂಲಕ ವಿಕಲಚೇತನರಿಗೆ ಅನೇಕ ರೀತಿಯ ವಿವಿಧ
ಕೌಶಲ್ಯಗಳು ಹಾಗೂ ಅವರ ಪೆÇೀಷಕರಿಗೆ ಮಕ್ಕಳ ಹಾರೈಕೆ
ಮತ್ತು ಪಾಲನೆ ಕುರಿತು ತರಬೇತಿ ನೀಡಲಾಗುವುದು ಎಂದರು.
ಮಾಜಿ ಶಾಸಕ ಬಸವರಾಜ್ ನಾಯ್ಕ್ ಮಾತನಾಡಿ, ದಿವ್ಯಾಂಗ
ವಿಕಲಚೇತನ ಮಕ್ಕಳು ದೇವರಿಗೆ ಸಮಾನವಿದ್ದಂತೆ,
ಪ್ರಪಂಚದಲ್ಲಿ ದೈಹಿಕವಾಗಿ ಸದೃಢವಾಗಿರುವ ಮನುಷ್ಯರು
ಮೋಸ ಮಾಡಿ ಬದುಕುತ್ತಿರುವ ಕಾಲಘಟ್ಟದಲ್ಲಿ ದಿವ್ಯಾಂಗ ಮಕ್ಕಳಿಗೆ
ಮೋಸ ಎಂದರೆ ಏನು ಎನ್ನುವ ಪರಿಜ್ಞಾನದ ಅರಿವಿಲ್ಲ. ಹಾಗಾಗಿ ಇಂತಹ
ಮಕ್ಕಳನ್ನು ಪಡೆದ ಪೆÇೀಷಕರೇ ಧನ್ಯರು ಎಂದು
ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉಚಿತವಾಗಿ ಒಟ್ಟು 20 ಬೋಧನಾ ಕಲಿಕಾ
ಸಾಮಗ್ರಿಗಳ ಕಿಟ್ ಹಾಗೂ 4 ವೀಲ್ ಚೇರ್ ಅನ್ನು ದಿವ್ಯಾಂಗ ಮಕ್ಕಳಿಗೆ
ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಡಾ.ಜ್ಞಾನವೆಲ್, ಸಿ.ಆರ್.ಸಿ ಕೇಂದ್ರದ
ನಿರ್ದೇಶಕ ಮೋಹಂತ್, ಸಭಾಪತಿ, ಸುರೇಶ್ ಕೆಸರ್, ಸುಲ್ತಾನ್,
ಹೊನ್ನೂರು ಗ್ರಾ.ಪಂ ಅಧ್ಯಕ್ಷೆ ರೂಪ ಸೇರಿದಂತೆ ದಿವ್ಯಾಂಗ
ವಿಕಲಚೇತನರು ಹಾಗೂ ಪೆÇೀಷಕರು, ಸಿ.ಆರ್.ಸಿ ಕೇಂದ್ರದ
ಸಿಬ್ಬಂದಿಗಳು ಭಾಗವಹಿಸಿದ್ದರು.