ಸಮಾಜದ ಯಾವುದೇ ಅತ್ಯುತ್ತಮ ಸೇವೆ ಸಲ್ಲಿಸಿರುವ
ವ್ಯಕ್ತಿಗಳಿಗೆ 2022ನೇ ಸಾಲಿನ ಪದ್ಮಶ್ರೇಣಿಯ
ಪ್ರಶಸ್ತಿಗಳಾದ “ಪದ್ಮ ವಿಭೂಷಣ” ಮತ್ತು
“ಪದ್ಮಶ್ರೀ” ಪ್ರಶಸ್ತಿಗಳನ್ನು ಗಣರಾಜ್ಸೋತ್ಸವ ದಿನದ ಹಿಂದಿನ
ದಿನದಂದು ಕೇಂದ್ರ ಸರ್ಕಾರದಿಂದ ಪ್ರಕಟಿಸಲಾಗುತ್ತದೆ.
ಕಲೆ, ಸಮಾಜ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ
ತಾಂತ್ರಿಕ, ತಂತ್ರಜ್ಞಾನ ಮತ್ತು ಇತರೆ ಗೌರವಾನ್ವಿತ ವ್ಯತ್ತಿ,
ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ,
ನಾಗರೀಕ ಸೇವೆ, ಕ್ರೀಡೆ, ಅಥ್ಲೆಟಿಕ್ಸ್, ಸಹಾಸ ಕ್ರೀಡೆ ಮತ್ತು ಯೋಗ
ಹಾಗೂ ಇತರೆ ಕ್ಷೇತ್ರಗಳು ಮಾನವ ಹಕ್ಕುಗಳ ಸಂರಕ್ಷಣೆ,
ಭಾರತ ಸಂಸ್ಕøತಿಯ ಪ್ರಚಾರ, ಪರಿಸರ ಸಂರಕ್ಷಣೆ ಮತ್ತು
ವನ್ಯಮೃಗ ಸಂರಕ್ಷಣೆ ಒಳಗೊಂಡ ಕ್ಷೇತ್ರಗಳಲ್ಲಿ
ಶ್ರೇಷ್ಠತೆಗಳಿಸಿ ಅಸಾಧಾರಣ ಕೊಡುಗೆ ನೀಡಿರುವ ವ್ಯಕ್ತಿಗಳಿಗೆ
ಪ್ರಶಸ್ತಿಯನ್ನು ನೀಡಲಾಗುತ್ತಿದೆ.
2022ನೇ ಸಾಲಿನ ಪದ್ಮಶ್ರೇಣಿ ಪ್ರಶಸ್ತಿಗಾಗಿ ಅರ್ಜಿಯನ್ನು
ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ
ನಮೂನೆಯನ್ನು ದಾವಣಗೆರೆ ಯುವ ಸಬಲೀಕರಣ ಮತ್ತು
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯ ಜಿಲ್ಲಾ
ಕ್ರೀಡಾಂಗಣ ಕಛೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು
ಜೂ.28 ರ ಒಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ
ಸಂಖ್ಯೆ: 08192-237480 ಯನ್ನು ಸಂಪರ್ಕಿಸಬಹುದಾಗಿದೆಂದು ಪ್ರಕಟಣೆ
ತಿಳಿಸಿದೆ.