ಹೊನ್ನಾಳಿ ಜೂನ್ 25 ತಾಲೂಕು ಬೆನಕನಹಳ್ಳಿ ಗ್ರಾಮದಲ್ಲಿ ಇಂದು ಕೆ ಕರೆಗೌಡಪ್ಪ ಅಧ್ಯಕ್ಷರು ತಾಲೂಕು ಸಾಧು ವೀರಶೈವ ಲಿಂಗಾಯತ ಸಮಾಜ ಇವರು ಶಿವೈಕ್ಯರಾಧ ಪ್ರಯುಕ್ತ ಮೃತರ ಆತ್ಮ ಶಾಂತಿಗಾಗಿ ಕೈಲಾಸ ಶಿವಗಣರಾಧನೆ ಹಾಗೂ ಸರ್ವ ಶರಣ ಸಮ್ಮೇಳನವನ್ನು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ ಶ್ರೀ ಶ್ರೀ 1108 ಜಗದ್ಗುರು ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿರವರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಚಾಲನೆಯನ್ನು ಕೊಡಲಾಯಿತು.
ವಚನ ಗಾಯನ ಕತ್ತಿಗೆ ಯುವರಾಜ್ ಸಂಗಡಿಗರವರಿಂದ ನಡೆಸಿಕೊಡಲಾಯಿತು.
ಪ್ರಾಸ್ತಾವಿಕ ನುಡಿಯನ್ನು ನಿವೃತ್ತ ಶಿಕ್ಷಕರಾದ ಕೋಟಿ ಹಾಳ್ ತೀರ್ಥಪ್ಪ ಅವರು ನಡೆಸಿಕೊಟ್ಟರು.
ಶಾಸಕ ಎಂ ಪಿ ರೇಣುಕಾಚಾರ್ಯ ರವರು ನಂತರ ಮಾತನಾಡಿ ಕೆ ಕರೆ ಗೌಡಪ್ಪ ಆದರ್ಶ ಗುಣಗಳನ್ನು ಅವರು ಮಕ್ಕಳು ಅನುಸರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.


ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶರಣೆ ಶ್ರೀಮತಿ ಶೀಲಾ ಗದ್ದಿಗೇಶ ಅವರು ಮಾತನಾಡಿ ನಾವುಗಳು ಕೆ ಕರೆ ಗೌಡಪ್ಪ ಶಿವೈಕ್ಯ ರಾಗುವುದಕ್ಕಿಂತ ಮುಂಚೆ ನಾವೆಲ್ಲರೂ ಸಮಾಜದ ವತಿಯಿಂದ 75ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಬೇಕು ಅಂತ ಅಂದುಕೊಂಡಿದ್ದೆವು ಆದರೆ ದುರ್ದೈವದ ಸಂಗತಿಯೆಂದರೆ ನಾವು ಅವರ ಅಕಾಲಿಕ ಮರಣದಿಂದ ನಮಗೆ ತುಂಬಾ ನೋವಾಗಿದೆ ಆದರೆ ಅವರು ಬಹಳ ಸರಳ ವ್ಯಕ್ತಿ ಅವರು ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದರು ಎಂದು ಭಾವುಕರಾದರು.
ಮಾಜಿ ಶಾಸಕರಾದ ಡಿಜಿ ಶಾಂತನಗೌಡ್ರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಕೆ ಕರೆ ಗೌಡಪ್ಪನವರು ಶಿವಮೊಗ್ಗದ ಮಾಂಗಲ್ಯ ಕಲ್ಯಾಣ ಮಂಟಪಕ ಮದುವೆ ಕಾರ್ಯಕ್ರಮಕ್ಕೆ ಹೋದಾಗ ಮೊಬೈಲಿನಲ್ಲಿ ಮಾತನಾಡುತ್ತಾ ರಸ್ತೆಯನ್ನು ದಾಟುವಾಗ ಯಾವುದು ಅಪರಿಚಿತ ವಾಹನದಿಂದ ಅವರ ತಲೆಗೆ ಪೆಟ್ಟು ಬಿದ್ದು ಅವರಿಗೆ ಸಾವು ಸಂಭವಿಸಿತು ಎಂದರು. ಈ ಉದಾಹರಣೆಯನ್ನು ಇಟ್ಟುಕೊಂಡು ಅಲ್ಲಿ ಸೇರಿರುವ ಶರಣ- ಶರಣಿಯರಿಗೆ ನೀವುಗಳು ಹಳ್ಳಿಯಲ್ಲಿ ಬೆಳಗಿನ ಜಾವ ವಾಕಿಂಗ್ ಮಾಡುವಾಗ ಬಲಭಾಗದಲ್ಲಿ ಚಲಿಸಿ ಕಾನೂನು ರೀತಿಯಲ್ಲಿ ತಪ್ಪಿದ್ದರೂ ಸಹ ಎಡಭಾಗದಲ್ಲಿ ಚಲಿಸುವಾಗ ನಾವು ಮುಂದುಗಡೆ ನಡೆದುಕೊಂಡು ಹೋಗುತ್ತೇವೆ ಹಿಂದಗಡೆ ಬರುವ ವಾಹನಗಳು ಮಂಜು ಕವಿದ ವಾತಾವರಣ ಇರುವುದರಿಂದ ಅವರುಗಳಿಗೆ ಸರಿಯಾಗಿ ಕಾಣಿಸುವುದಿಲ್ಲ ಹಾಗಾಗಿ ಅಪಘಾತಗಳು ತುಂಬಾ ಆಗುತ್ತವೆ ಮತ್ತು ನೀವುಗಳು ಯಾವುದೇ ವಾಹನವನ್ನು ಓಡಿಸುವಾಗ ಮೊಬೈಲ್ ಅನ್ನು ಎತ್ತಬೇಡಿ ನೀವು ನಿಮ್ಮ ಕುಟುಂಬವನ್ನು ರಕ್ಷಿಸುವ ಜವಾಬ್ದಾರಿ ನಿಮ್ಮದಾಗಿರುತ್ತದೆ ಎಂದು ತಿಳಿಸಿದರು. ಮಹಾತ್ಮ ಗಾಂಧೀಜಿ ಅವರು ಏನನ್ನ ದೇಶಕ್ಕೆ ಕೊಟ್ಟರು ಎಂದು ಯಾರಾದರೂ ಕೇಳಿದರೆ ಅವರ ಜೀವನವೇ ದೇಶಕ್ಕೆ ಕೊಟ್ಟರು ಎಂದು ಹೇಳಿ ,ಅದೇ ರೀತಿ ನಮ್ಮ ದೇಶಕ್ಕೆ ರಾಜ್ಯಕ್ಕೆ ಮತ್ತು ನಮ್ಮ ಸಮಾಜಕ್ಕೆ ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ರವರು ತಮ್ಮ ದೇಹವನ್ನೇ ಸಮಾಜಕ್ಕೆ ಮುಡುಪಾಗಿಟ್ಟಿದ್ದಾರೆ ನಾವು ಇಂತಹ ಸ್ವಾಮಿಗಳನ್ನ ಪಡೆಯಲಿಕ್ಕೆ ಪುಣ್ಯ ಮಾಡಿದ್ದೇವೆ ಎಂದರು.


ಅಧ್ಯಕ್ಷೀಯ ಭಾಷಣವನ್ನು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಕೆ ಕರೆಗೌಡ್ರವರ ಸಾವನ್ನ ನೆನಪಿಸಿಕೊಂಡು ಸಮಾಜದಲ್ಲಿ ಪ್ರತಿಯೊಬ್ಬರು ಮೊಬೈಲ್ ಎಲ್ಲಿ ಇಡಬೇಕು ಅಲ್ಲೇ ಇಡಬೇಕು, ನಾಯಿ ಬಾಲವನ್ನು ಅಲ್ಲಾಡಿಸಬೇಕು ವಿನಹ :ಬಾಲ ನಾಯಿಯ ಆ ದೇಹವನ್ನು ಅಲ್ಲಾಡಿಸಬಾರದು. ಹಾಗೇನೆ ಮೊಬೈಲನ್ನು ಅವಶ್ಯಕತೆ ಇದ್ದಾಗ ನೀವು ನೋಡಬೇಕು ವಿನಹ, ನಿಮ್ಮನ್ನು ಮೊಬೈಲ್ ಅಲ್ಲಾಡಿಸಬಾರದು ಎಂದು ಮಾರ್ಮಿಕವಾಗಿ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಗಂಟೆಯನ್ನು ತಿಳಿಸಿದರು. ಪ್ರಪಂಚದಲ್ಲಿರುವ ಯಾವ ಪ್ರಾಣಿಯು ಕೂಡ ಸಾಯಲಿಕ್ಕೆ ಇಷ್ಟಪಡುವುದಿಲ್ಲ ಸಾವಿಗಿಂತ ಜೀವನ ನಡೆಸುವುದೇ ಕಷ್ಟ ಎಂದು ತಿಳಿಸುತ್ತಾ ಅನಾಹುತಗಳು ಎರಡು ತರಹ ,ಒಂದು ನೀವೇ ಮಾಡಿಕೊಳ್ಳುವುದು. ಇನ್ನೊಂದು ಅದೇ ಬರುವುದು .ಹಾಗಾಗಿ ನಾವುಗಳು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಂಡು ನಾವೆಲ್ಲರೂ ಜೀವನವನ್ನು ಎಚ್ಚರಿಕೆಯಿಂದ ಸಾಗಿಸುವಾಗ ನಾವುಗಳು ಅದೃಷ್ಟ ಅನ್ನುವುದು ಬದುಕಿನಲ್ಲಿ ಬರುತ್ತದೆ ಬಂದಾಗ ನಾವುಗಳು ಏನನ್ನಾದರೂ ಸಾಧಿಸುತ್ತೇವೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಇರಬೇಕು ಎಂದು ಮಾತನ್ನು ಮುಗಿಸಿದರು.


ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಸಾಧು ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷರಾದ ಕೋಡಿಕೊಪ್ಪ ಶಿವಣ್ಣನವರು, ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು, ಹಾಲಿ ಶಾಸಕ ಎಂ ಪಿ ರೇಣುಕಾಚಾರ್ಯ, ಶಿವ ಬ್ಯಾಂಕಿನ ಅಧ್ಯಕ್ಷರು ನಾಗೇಂದ್ರಪ್ಪ ಬಿದರಗಡ್ಡೆ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶಿಲಾಗದ್ದಿಗೇಶ, ಎಚ್ ಎ ಗದ್ದಿಗೇಶಣ್ಣ, ಇಂಜಿನಿಯರ್ ಜಯಣ್ಣ, ಶರಣ ಕೆ ಈಶ್ವರಪ್ಪ ಮತ್ತು ಸಹೋದರರು ಹಾಗೂ ಶ್ರೀಮತಿ ಉಷಾ ಶ್ರೀ ಲಿಂಗರಾಜ್ ಮತ್ತು ಮಕ್ಕಳು ಹಾಗೂ ಶಾಂತ ಶ್ರೀ ರವಿ ಜಿ ಎನ್ನ ಮತ್ತು ಮಕ್ಕಳು ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ವೀರಣ್ಣ ಪಿ ,ಡಿಎಸ್ ಪ್ರದೀಪ್ ಗೌಡ್ರು ,ಬೆನಕನಹಳ್ಳಿ ಗ್ರಾಮದ ಹಿರಿಯರು ಮತ್ತು ಕಿರಿಯರು ಶರಣ ಶರಣೆಯರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *