ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಕೋರಿ ಯೋಗೀಶ್ ಕುಳಗಟ್ಟೆ ಭಾನುವಾರ ಚುನಾಯಿತರಾದರು.
ಈ ಹಿಂದಿನ ಅಧ್ಯಕ್ಷ ಎಚ್.ಸಿ. ಮೃತ್ಯುಂಜಯ ಪಾಟೀಲ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕೋರಿ ಯೋಗೀಶ್ ಕುಳಗಟ್ಟೆ ಮತ್ತು ಟಿ. ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದರು. ಮತದಾನ ಪ್ರಕ್ರಿಯೆ ಬಳಿಕ ಕೋರಿ ಯೋಗೀಶ್ ಕುಳಗಟ್ಟೆ ಚುನಾಯಿತರಾದರು. ಚುನಾವಣಾಧಿಕಾರಿಗಳಾದ ಆರ್.ಎಸ್. ತಿಪ್ಪೇಸ್ವಾಮಿ, ಬಿ.ಎಸ್. ಮುದ್ದಣ್ಣ, ಸಹಾಯಕ ಚುನಾವಣಾಧಿಕಾರಿ ಎಚ್.ಸಿ. ಮೃತ್ಯುಂಜಯ ಪಾಟೀಲ್ ಕೋರಿ ಯೋಗೀಶ್ ಕುಳಗಟ್ಟೆ ಅವರನ್ನು ಸಂಘದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಎಂದು ಘೋಷಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಎಚ್.ಎಂ. ಅರುಣ್‍ಕುಮಾರ್, ಎನ್.ಕೆ. ಆಂಜನೇಯ, ಯು.ಬಿ. ಜಯಪ್ಪ, ಪತ್ರಕರ್ತರಾದ ಚನ್ನೇಶ ಬಿ.ಇದರಮನಿ, ಎಚ್.ಕೆ. ಮಲ್ಲೇಶ್, ಹರೀಶ್ ಸಾಗೋನಿ, ಎಲ್.ಸಿ. ರಾಘವೇಂದ್ರರಾವ್, ಪೊಲೀಸ್ ಸಿಬ್ಬಂದಿ ಕೆ.ಎಚ್. ನಾಗರಾಜ್, ಯೋಗೀಶ್ ಗಾಳಿ, ರಾಜು ದೊಡ್ಡಮನಿ, ಪ್ರಕಾಶ್, ಜಗದೀಶ್ ಇತರರು ಇದ್ದರು.
ಸಿಪಿಐ ಟಿ.ವಿ. ದೇವರಾಜ್, ಪಿಎಸ್ಸೈ ಬಸವರಾಜ ಬಿರಾದಾರ ಚುನಾವಣೆಯ ಮತದಾನ ಪ್ರಕ್ರಿಯೆ ವೇಳೆ ಸಂಘದ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕೃತಜ್ಞತೆ: ಸಂಘದ ನೂತನ ಅಧ್ಯಕ್ಷ ಕೋರಿ ಯೋಗೀಶ್ ಕುಳಗಟ್ಟೆ ಮಾತನಾಡಿ, 1932ರಲ್ಲಿ ಸ್ಥಾಪನೆಯಾಗಿ, ಇದೀಗ ಒಂಭತ್ತು ದಶಕಗಳನ್ನು ಪೂರೈಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷನನ್ನಾಗಿ ತಮ್ಮನ್ನು ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಭಾನುವಾರ ಚುನಾಯಿತರಾದ ಕೋರಿ ಯೋಗೀಶ್ ಕುಳಗಟ್ಟೆ ಅವರಿಗೆ ಚುನಾವಣಾಧಿಕಾರಿಗಳಾದ ಆರ್.ಎಸ್. ತಿಪ್ಪೇಸ್ವಾಮಿ, ಬಿ.ಎಸ್. ಮುದ್ದಣ್ಣ, ಸಹಾಯಕ ಚುನಾವಣಾಧಿಕಾರಿ ಎಚ್.ಸಿ. ಮೃತ್ಯುಂಜಯ ಪಾಟೀಲ್ ಅಭಿನಂದನೆ ಸಲ್ಲಿಸಿದರು.