ಹೊನ್ನಾಳಿ ಜೂನ್ 26 ತಾಲೂಕು ಗೊಲ್ಲರಹಳ್ಳಿ ಗ್ರಾಮದಲ್ಲಿ ಇಂದು ಮೋದಿಕೇರ್ ಕಂಪನಿಯ ಡಿಸ್ಟ್ರಿಬ್ಯೂಟ್ ಪಾಯಿಂಟ್( ಡಿಪಿ) ಅಂಗಡಿ ಯು ನೂತನವಾಗಿ ಪ್ರಾರಂಭವಾಯಿತು .ಇದರ ಉದ್ಘಾಟನೆಯನ್ನು ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ರವರು ಟೇಪ ಕಟ್ಟಮಾಡುವುದರ ಮುಖೇನ ಚಾಲನೆಯನ್ನು ಕೊಡಲಾಯಿತು.
.
ಡಿ ಜಿ ಶಾಂತನಗೌಡ್ರು ನಂತರ ಮಾತನಾಡಿ ಮೋದಿಕೇರ್ ಪ್ರಾಡಕ್ಟ್ ಮನುಷ್ಯರ ಆರೋಗ್ಯಕ್ಕೆ ಬೇಕಾಗುವಂತಹ ಒಳ್ಳೆ ಗುಣಮಟ್ಟದ ಔಷಧಿಗಳು ಹಾಗೂ ರೈತರ ಬೆಳೆಗಳಿಗೆ ಬೇಕಾಗುವಂತಹ ಒಳ್ಳೆಯ ಗುಣಮಟ್ಟದ ಆರ್ಗ್ಯಾನಿಕ್ ಔಷಧಿಗಳು ಸಿಗುತ್ತವೆ ಎಂದು ಹೇಳುತ್ತಾ ನಾನು ಕೂಡ ಈ ಮೋದಿ ಕೇರ್ ಆರೋಗ್ಯ ಔಷಧಿಯನ್ನು ನಮ್ಮ ಮನೆಯಲ್ಲಿ ಸಹ ಬಳಕೆ ಮಾಡುತ್ತೇನೆ ಹಾಗಾಗಿ ಇದನ್ನು ಸಾರ್ವಜನಿಕರು ಈ ಅಂಗಡಿಗೆ ಬಂದು ಆರ್ಗ್ಯಾನಿಕ್ ಔಷಧಗಳನ್ನು ಪ್ರತಿಯೊಬ್ಬರು ಬಳಸಿದಾಗ ನಮ್ಮ ದೇಹದ ಆರೋಗ್ಯ ಸಮತೋಲನವನ್ನು ಕಾಪಾಡುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಡಿ ಜಿ ಶಾಂತನ ಗೌಡ್ರು ಮಾಜಿ ಶಾಸಕರು ಹೊನ್ನಾಳಿ ಮೋದಿಕೇರ್ ಡಿಪಿ ಅಂಗಡಿಯ ಮಾಲೀಕರಾದ ಅಶೋಕ ಕೆಜಿ ಮತ್ತು ಶ್ರೀಮತಿ ಜಿಬಿ ರಾಧಾ ,ಮೋದಿಕೇರ್ ಡೈರೆಕ್ಟರ್ XXX ಡೈಮಂಡ್ ಡೈರೆಕ್ಟರ್ ಆದ ಮೇನಕ ಮೇಡಂ ಮತ್ತು ಕಿಶೋರ್ ಸರ್ ಹಾಗೂ ಮೋದಿಕೇರ್ ಕಂಪನಿ ಆಡಳಿತ ಮಂಡಳಿಯ ಡೈರೆಕ್ಟರ್ ಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ನಾಗರಾಜ ಬಿ ಎಚ್ ಮತ್ತು ಕುಮಾರಣ್ಣ ನೀಲಕಂಠಪ್ಪ ಬಿದರಗಡ್ಡೆ ಗೊಲ್ಲರಹಳ್ಳಿ ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಊರಿನ ಸಾರ್ವಜನಿಕರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು .