ಹೊನ್ನಾಳಿ ಜೂನ್ 27 ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರ ದೇಶದ ಭದ್ರತೆ ಮತ್ತು ಯುವಕರ ಭವಿಷ್ಯಕ್ಕೆ ಮಾರಕವಾಗಿರುವ “ಅಗ್ನಿಪಥ್ ಯೋಜನೆಯ ವಿರುದ್ಧ .ಟಿ ಬಿ ಸರ್ಕಲ್ ವೃತ್ತದಿಂದ ತಾಲೂಕು ಕಚೇರಿಯವರೆಗೆ ಪಾದಯಾತ್ರೆ ಮೂಲಕ ಕೇಂದ್ರ ಸರಕಾರದ ವಿರುದ್ಧ ಘೋಷಣೆಯನ್ನು ಕೂಗುತ್ತಾ ತಾಲ್ಲೂಕು ಕಚೇರಿಯ ಮುಂದೆ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
ಜಿಲ್ಲಾಧ್ಯಕ್ಷ ಎಚ್ ಬಿ ಮಂಜಪ್ಪ ನಂತರ ಮಾತನಾಡಿ, ಕೇಂದ್ರ ಸರ್ಕಾರವು ಅಧಿಕಾರ ಬರುವಕಿಂತ ಮುಂಚೆ ಈ ದೇಶದಲ್ಲಿ 2 ಕೋಟಿ ಜನರಿಗೆ ಉದ್ಯೋಗವನ್ನು ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಅಗ್ನಿಪತ್ -ಯೋಜನೆ ತರುವುದರ ಜೊತೆಗೆ ದೇಶದಲ್ಲಿ ಯುವಕರಿಗೆ 4ವರ್ಷ ತರಬೇತಿಯನ್ನು ಕೊಟ್ಟು ಉದ್ಯೋಗಾವಕಾಶವನ್ನು ವಂಚಿತರನ್ನಾಗಿ ಮಾಡುತ್ತಿದ್ದಾರೆ, ಹಾಗಾಗಿ ಯಾರು ಇವರ ವಿರುದ್ಧ ಮಾತನಾಡುತ್ತಾರೆ ಅವರ ವಿರುದ್ಧ ಕೇಂದ್ರ ಸರ್ಕಾರವು ED ಸಂಸ್ಥೆಯ ದುರುಪಯೋಗ ಮಾಡಿಕೊಂಡು ಪ್ರತಿಪಕ್ಷದ ನಾಯಕರುಗಳಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಆಪಾದಿಸಿದರು.
ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾದ ಲತಾ ಎಂಪಿ ಮಲ್ಲಿಕಾರ್ಜುನ ಅವರು ನಂತರ ಮಾತನಾಡಿ ಅಗ್ನಿಪಥ ಯೋಜನೆ ಅನ್ನುವುದು ಒಂದು ಸಣ್ಣ ಯೋಜನೆ .ನರೇಂದ್ರ ಮೋದಿ ಸರ್ಕಾರ ದೇಶದಲ್ಲಿರುವ ಯುವಕರುಗಳಿಗೆ ಕೆಟ್ಟ ಭಾವನೆಯ ವಿಷ ಬೀಜವನ್ನು ಬಿತ್ತಿ ಹಾಳು ಮಾಡುತ್ತಿದ್ದಾರೆ ಎಂದು ಹೇಳುತ್ತಾ ಅಗ್ನಿಪಥ ಯೋಜನೆಯು ದೇಶದಲ್ಲಿ ಅಗ್ನಿಯಾಗಿ ಉರಿಯುತ್ತಿದೆ ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಬಿ ಮಂಜಪ್ಪ ,ಹೊನ್ನಾಳಿ ತಾಲೂಕು ಕಾಂಗ್ರೆಸ್ ಪಕ್ಷದ ಉಸ್ತುವಾರಿ ಯಾದ ಲತಾ ಎಂಪಿ ಮಲ್ಲಿಕಾರ್ಜುನ್ ,ಸಾಸವಿಹಳ್ಳಿ ಬ್ಲಾಕ್ ಮಾಜಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಚ್ ಎ ಗದ್ದಿಗೇಶಣ್ಣ , ಆರ್ ನಾಗಪ್ಪ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಹನುಮಂತಪ್ಪ ಕುಳಗಟ್ಟೆ, ಹೊಳಲೂರು ಶೇಖರಣ್ಣ, ಶಿವಾನಂದ್ ಬೆಲೆ ಮಲ್ಲೂರು, ಮೇಲಪ್ಪ ,ಯುವ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಮಧು ಗೌಡ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಅಣ್ಣಪ್ಪ ಎಚ್ ಬಿ, ಮಲ್ಲೇಶ್ ಸುಣಗಾರ ,ದಿಡಗೂರು ರುದ್ರೇಶ್, ಕೊಡತಾಲ್ ರುದ್ರೇಶ್. ಎಪಿಎಂಸಿ ಮಾಜಿ ಅಧ್ಯಕ್ಷ ಬೀರಪ್ಪ, ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ, ಎನ್ ಎಸ್ ಯು ಐ ಅಧ್ಯಕ್ಷ ಮನೋಜ್ ವಾಲಜ್ಜಿ ಇನ್ನು ಮುಂತಾದ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಸಹ ಭಾಗಿಯಾಗಿದ್ದರು.