ನ್ಯಾಮತಿ ಸಮುದಾಯ ಆಸ್ಪತ್ರೆ ಮುಂಭಾಗದಲ್ಲಿ ವಾಹನಗಳು ಹಾರನ್ ಮಾಡದಂತೆ ಸೂಚಿಸುವ ಪೊಲೀಸ್‍ಇಲಾಖೆಯ ನಾಮ ಫಲಕವನ್ನು ಸಿಪಿಐ ಟಿ.ವಿ.ದೇವರಾಜ ಮಂಗಳವಾರ ಉದ್ಘಾಟಿಸಿದರು. ಪಿಎಸ್‍ಐ ಪಿ.ವಿ.ರಮೇಶ, ಕಸಾಪ ಪದಾಧಿಕಾರಿಗಳು ಇದ್ದಾರೆ.
ಶಾಲಾ-ಕಾಲೇಜು, ಆಸ್ಪತ್ರೆ ಮುಂಭಾಗದಲ್ಲಿ ಶಬ್ದಮಾಲಿನ್ಯ ಮಾಡಬೇಡಿ
ನ್ಯಾಮತಿ:
ಪಟ್ಟಣದ ಒಳಗಡೆ ಸಂಚರಿಸುವಾಗ ಶಾಲಾ-ಕಾಲೇಜುಗಳು, ಆಸ್ಪತ್ರೆಯು ಮುಂಭಾಗದಲ್ಲಿ ಸಂಚರಿಸುವ ವಾಹನ ಚಾಲಕರು ಹಾರನ್ ಮಾಡದಂತೆ ಹೊನ್ನಾಳಿ ಇನ್ಸ್‍ಪೆಕ್ಟರ್ ಟಿ.ವಿ.ದೇವರಾಜ ಚಾಲಕರಿಗೆ ಸೂಚನೆ ನೀಡಿದರು.
ಸಮುದಾಯ ಆಸ್ಪತ್ರೆ ಮುಂಭಾಗ ಸಂಚರಿಸುವ ಬಸ್‍ಗಳು, ಇತರೆ ವಾಹನಗಳು ಕರ್ಕಶ ಹಾರನ್ ಮಾಡುತ್ತಿರುವುದರಿಂದ, ಆಸ್ಪತ್ರೆಯ ರೋಗಿಗಳಿಗೆ, ಬಾಣಂತಿ ಹಸುಗೂಸುಗಳಿಗೆ ಮತ್ತು ಸಾರ್ವಜನಿಕರಿಗೆ ಉಂಟಾಗುತ್ತಿರುವ ಕಿರಿಕಿರಿ ತಪ್ಪಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು, ಪತ್ರಕರ್ತರ ಸಂಘ ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಯಿತು ಎಂದರು.
ಪಿಎಸ್‍ಐ ಪಿ.ವಿ.ರಮೇಶ, ಕಾನ್‍ಸ್ಟೇಬಲ್ ಮಂಜುಪ್ಪ, ಚನ್ನೇಶ ಇದ್ದರು.
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಪೊಲೀಸ್ ಇಲಾಖೆಗೆ ಕರ್ನಾಟಕ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಂ.ಹಾಲಾರಾಧ್ಯ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಜಿ.ನಿಜಲಿಂಗಪ್ಪ, ಕೋಶಾಧ್ಯಕ್ಷ ಕೆ.ಎಂ.ಬಸವರಾಜ, ಸದಸ್ಯರಾದ ರಾಮೇಶ್ವರ ಚಂದ್ರೇಗೌಡ, ಜಿ. ಕುಬೇರಪ್ಪ, ಸರಗಂಟಿ ರಾಜಪ್ಪ, ಎ.ಕೆ.ರಾಮಯ್ಯ, ಮೆಡಿಕಲ್‍ ಗಣೇಶ ಅವರುಧನ್ಯವಾದ ಅರ್ಪಿಸಿದರು.

Leave a Reply

Your email address will not be published. Required fields are marked *