ಹೂನ್ನಾಳಿ:- ಜೂನ್ 29 ಹೊನ್ನಾಳಿ ತಾಲೂಕಿಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆಗಮಿಸಿದ ಮಂಜುನಾಥ ಸ್ವಾಮಿ ರವರಿಗೆ ತಾಲೂಕಿನ ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರುಗಳಿಂದ ಹೃದಯ ಪೂರ್ವಕ ಸ್ವಾಗತ ಕೋರಲಾಯಿತು.
ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಸ್ವಾಮಿ ರವರು ದಾವಣಗೆರೆ ಜಿಲ್ಲೆಯಲ್ಲಿ ವಿಷಯ ಪರಿವಿಕ್ಷಕರಾಗಿ ನಂತರ ಬಡ್ತಿ ಹೂಂದಿ ಬ್ಯಾಡಗಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಮತ್ತೆ ದಾವಣಗೆರೆಯಲ್ಲಿ ಡಿವೈಪಿಸಿ ,ಅ ನಂತರ ಜಿಲ್ಲೆಯ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳಾಗಿ ತುಂಬಾ ಅನುಭವವುಳ್ಳವರಿಗಿದ್ದಾರೆ.ಇಂತಹವರು ಒಬ್ಬರು ಶಿಕ್ಷಣಾಧಿಕಾರಿಗಳಾಗಿ ಬಂದಿರೂದ್ರಿಂದ ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಆಡಳಿತ ದೂರಕಲಿ ಎಂದು ಹಾರೈಸುತ್ತಾ ಸ್ವಾಗತ ಕೋರಲಾಯಿತು, ಮುಖ್ಯೋಪಾಧ್ಯಾಯರುಗಳಾದ ಶಕೀಲ್ ಅಹ್ಮದ್, ಮಂಜಾನಾಯಕ, ಪ್ರಕಾಶ್, ಮಹೇಂದ್ರ, ಮಹಾಂತೆಶ್, ಬಸವರಾಜ, ಚಂದ್ರನಯಕ, ಶಿವಮೂರ್ತಿ, ಸುಧಾ ಕೆ ಎಂ, ಶಶಿಕಲಾ,ಮತ್ತು ಸಹ ಶಿಕ್ಷಕರು ಉಪಸ್ಥಿತರಿದ್ದರು.