ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ
ಯೋಜನೆಯಡಿಯಲ್ಲಿ 2019 ರ ಮೂರು ಹಂಗಾಮುಗಳಲ್ಲಿ
ರೈತರು ಸಲ್ಲಿಸಿದ್ದ ಪ್ರಸ್ತಾವನೆಗಳು ಹಾಗೂ ಬೆಳೆ ಸಮೀಕ್ಷೆಯ
ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿ ತಾಳೆ ನೋಡಲಾಗಿದೆ.  ವಿಮಾ
ಸಂಸ್ಥೆಯವರು ಪ್ರಸ್ತಾವನೆಗಳನ್ನು ಪರಿಶೀಲಿಸಿ ಜಿಲ್ಲೆಯ 2066 ಜನ
ರೈತರ ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದಾರೆ.  ತಿರಸ್ಕøತಗೊಂಡ
ರೈತರ ಪ್ರಸ್ತಾವನೆಗಳ ಮಾಹಿತಿಯನ್ನು ಎಲ್ಲಾ ರೈತ ಸಂಪರ್ಕ
ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.  ಆದುದರಿಂದ
2019ರ ಮೂರು ಹಂಗಾಮುಗಳಲ್ಲಿ ವಿಮೆ ಮಾಡಿಸಿರುವ ರೈತರು
ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು,
ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ
ಆಕ್ಷೇಪಣೆಗಳನ್ನು ಜುಲೈ.15 ರ ಒಳಗೆ ಸಲ್ಲಿಸನಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ
ಕಛೇರಿಗಳನ್ನು ಸಂಪರ್ಕಿಸಬಹುದು ದಾವಣಗೆರೆ ಜಂಟಿ ಕೃಷಿ
ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *