ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ರವರು ಜು.೦೨ ರಂದು ಬೆ.೧೦ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ಕಛೇರಿಯಲ್ಲಿ ಡಾ|| ಫಕೀರಪ್ಪ ಗುರುಬಸಪ್ಪ ಹಳಕಟ್ಟಿ, ಇವರ ಜನ್ಮ ದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಬೆ.೧೧.೩೦ ಕ್ಕೆ ಹೊನ್ನಾಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.೦೧ ಕ್ಕೆ ದೊಡ್ಡೇರಹಳ್ಳಿ ಕ್ರಾಸ್‌ನ ಹತ್ತಿರ ಕತ್ತಿಗೆ-ಮಾರಿಕೊಪ್ಪ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸುವರು, ಮ.೦೩ ಕ್ಕೆ ಕೆಂಗಲಹಳ್ಳಿ ಗ್ರಾಮದಲ್ಲಿ ಕೂಲಂಬಿ-ಕೆAಗಲಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ಮತ್ತು ಯರೇಹಳ್ಳಿ ಜಂಗಲ್ ರಸ್ತೆ ಕಾಮಗಾರಿ ಉದ್ಘಾಟನೆ ನೆರವೇರಿಸುವರು. ಸಂ.೦೪.೩೦ ಕ್ಕೆ ಹೊನ್ನಾಳಿಗೆ ಪ್ರಯಾಣ ಮತ್ತು ಹೊನ್ನಾಳಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸುವರು. ನಂತರ ರಾ.೦೭.೧೫ ಕ್ಕೆ ಶಿವಮೊಗ್ಗಕ್ಕೆ ಪ್ರಯಾಣ ನಂತರ ರಾತ್ರಿ.೦೯.೧೫ಕ್ಕೆ ಹೊನ್ನಾಳಿಗೆ ಆಗಮಿಸಿ ವಾಸ್ತವ್ಯ ಹೂಡುವರು.
ಜು.೦೩ ರಂದು ಬೆ.೧೧ ಗಂಟೆಗೆ ಹೆಚ್.ಕಡದಕಟ್ಟೆ ನಾಡಕಛೇರಿ ಕಾಮಗಾರಿಗೆ ಶಂಕುಸ್ಥಾಪನೆ, ಬೆ.೧೧.೩೦ ಕ್ಕೆ ಹೊನ್ನಾಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಮಾನು, ಕಾಂಪೌAಡ್ ಮತ್ತು ಶೌಚಾಲಯ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು, ಮ.೧೨ ಗಂಟೆಗೆ ಹೊನ್ನಾಳಿಯ ಟಿ.ಬಿ. ವೃತ್ತದಲ್ಲಿ ಟ್ಯಾಕ್ಸಿ ಸ್ಟಾಂಡ್ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು, ಮ.೧೨.೪೫ ಕ್ಕೆ ಗೊಲ್ಲರಹಳ್ಳಿ- ಹರಿಹರ ಹೊನ್ನಾಳಿ ರಸ್ತೆಯಿಂದ ಬೇಲಿಮಲ್ಲೂರು ಗಡಿ ದಾರಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು. ಮ.೦೨.೧೫ ಕ್ಕೆ ನರಸಗೊಂಡನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ನೆರವೇರಿಸುವರು, ಸಂ.೦೪.೩೦ ಕ್ಕೆ ಹೊನ್ನಾಳಿಗೆ ಪ್ರಯಾಣ ಮತ್ತು ಹೊನ್ನಾಳಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹ್ವಾಲುಗಳನ್ನು ಸ್ವೀಕರಿಸುವರು. ಮತ್ತು ಹೊನ್ನಾಳಿಯಲ್ಲಿ ವಾಸ್ತವ್ಯ.
ಜು.೦೪ ರಂದು ಬೆ.೧೧ ಗಂಟೆಗೆ ಕುಳಗಟ್ಟೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ನೆರವೇರಿಸುವರು, ಬೆ.೧೧.೪೫ ಕ್ಕೆ ಕ್ಯಾಸಿನಕೆರೆ ಗ್ರಾಮದಲ್ಲಿ ರಸ್ತೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು. ಮ.೧೨.೪೫ ಕ್ಕೆ ಹುಣಸಘಟ್ಟ ಗ್ರಾಮದಲ್ಲಿ ಹಾಲಿನ ಡೈರಿ ಉದ್ಘಾಟನೆ ನೆರವೇರಿಸುವರು, ಮ ೧.೪೫ ಕ್ಕೆ ತ್ಯಾಗದಕಟ್ಟೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ನೆರವೇರಿಸುವರು, ಮ.೦೨.೪೫ ಕ್ಕೆ ಹನಗವಾಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ನೆರವೇರಿಸುವರು. ಮ.೦೩.೪೫ ಕ್ಕೆ ಹೊನ್ನಾಳಿಗೆ ಪ್ರಯಾಣ ನಂತರ ರಾ.೦೯ ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.