ಹೊನ್ನಾಳಿ:
ಪೌಷ್ಟಿಕ ಆಹಾರ ವಿತರಣೆ ನಮ್ಮ ಆದ್ಯತೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಆರ್. ರುದ್ರಪ್ಪ ಹೇಳಿದರು.
ತಾಲೂಕಿನ ಮಲೆಕುಂಬಳೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿ, ಅಡುಗೆ ಕೊಠಡಿ ಪರಿಶೀಲಿಸಿ ಅವರು ಮಾತನಾಡಿದರು.
ಅಡುಗೆ ಕೋಣೆ ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಆಹಾರ ತಯಾರಿಕೆಯ ಎಲ್ಲಾ ಹಂತಗಳಲ್ಲೂ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಶುದ್ಧ ಆಹಾರವನ್ನು ಮಕ್ಕಳಿಗೆ ಬಡಿಸಬೇಕು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳ ಮಕ್ಕಳಲ್ಲಿ ಈ ಹಿಂದೆ ಪೌಷ್ಟಿಕಾಂಶಗಳ ಕೊರತೆ ಕಂಡುಬರುತ್ತಿತ್ತು. ಆದರೆ, ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ ನೀಡಲು ಪ್ರಾರಂಭಿಸಿದಂದಿನಿಂದ ಮಕ್ಕಳ ಆರೋಗ್ಯ ಸುಧಾರಿಸುತ್ತಿದೆ. ಮಕ್ಕಳು ಅತ್ಯುತ್ಸಾಹದಿಂದ ಕಲಿಕೆಯಲ್ಲಿ ತೊಡಗುತ್ತಿದ್ದಾರೆ. ಅಕ್ಷರ ದಾಸೋಹ ಯೋಜನೆಯ ಯಶಸ್ಸಿಗೆ ಇದೇ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.
ಎಸ್ಡಿಎಂಸಿ ಅಧ್ಯಕ್ಷ ಸಿ. ಶ್ರೀಕಾಂತ್, ಮಲೆಕುಂಬಳೂರು ಗ್ರಾಪಂ ಪಿಡಿಒ ವಿಜಯ್‍ಗೌಡರ್, ಶಾಲೆಯ ಮುಖ್ಯ ಶಿಕ್ಷಕ ಟಿ.ಎಚ್. ನಾಗರಾಜ್ ಇದ್ದರು.