ದಾವಣಗೆರೆ ಜಿಲ್ಲೆ ನ್ಯಾಮತಿ ಜು 01 ತಾಲೂಕಿನ ಬೆಳಗುತ್ತಿ- ಮಲ್ಲಿಗೆನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 21ವರ್ಷಗಳಿಂದ ಕನ್ನಡ ಭಾಷಾ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿ ದಿನಾಂಕ:-30-06.-2022 ನೇ ಗುರುವಾರದಂದು ವಯೊನಿವೃತ್ತಿ ಹೊಃದಿ ನಂತರ ಮಾತನಾಡಿದ ಅವರು ನನ್ನ ಶಿಕ್ಷಕ ವೃತ್ತಿಯ ಜೀವನಕ್ಕೆ ನಿವೃತ್ತಿಯಿಂದ ನನ್ನ ಮನಸ್ಸಿಗೆ ತುಂಬಾ ನೋವು ಉಂಟಾಗಿದೆ. ಆದರೆ ನನಗೆ 60 ವರ್ಷ ವಯಸ್ಸಾಗಿದೆ ಅನ್ನುವ ಕಾರಣ ಇಟ್ಟುಕೊಂಡು ಸರ್ಕಾರದ ಆದೇಶದಂತೆ ನಿಯಮವನ್ನು ಪಾಲಿಸಿಕೊಂಡು ನಾನು ನಿವೃತ್ತಿಯಾಗಬೇಕಾಗಿದೆ .ಆದರೆ ವಿದ್ಯಾರ್ಥಿಗಳು ಭಯ ಪಡಬಾರದು ನಾನು ಈ ವರ್ಷದ ವಾರ್ಷಿಕ ಶೈಕ್ಷಣಿಕ ವರ್ಷ ಆಗುವವರೆಗೂ ನಮ್ಮ ಶಾಲೆಗೆ ನಿಮ್ಮೊಂದಿಗೆ ಪಾಠ ಪಠ್ಯೇತರ ಚಟುವಟಿಕೆಗಳಿಗೆ ಭಾಗವಹಿಸುತ್ತೇನೆ ಎಂದು ಮಕ್ಕಳಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದರು . ನಾನು ಸರ್ಕಾರಿ ಉದ್ಯೋಗಿ ಯಾಗಿರುವುದು ನನ್ನ ಸೌಭಾಗ್ಯ ಈ ಸೇವೆಯನ್ನು ದೇವರ ಸೇವೆ ಎಂದು ತಿಳಿದು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಶಿವಲಿಂಗಪ್ಪ ನವರು ತಿಳಿಸಿದರು.
ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಸರ್ಕಾರದ ಯಾವುದಾದರೊಂದು ಕೆಲಸಕ್ಕೆ ಸೇರಿಸಬೇಕೆಂಬ ಆಸೆ ಮತ್ತು ಕನಸನ್ನು ಕಟ್ಟಿಕೊಳ್ಳುತ್ತಾರೆ, ಇದರ ಜೊತೆಗೆ ತಮ್ಮ ಮಕ್ಕಳು ಓದುವ ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳಿಗೆ ಶಿಕ್ಷಣದ ಕಡೆ ಹೆಚ್ಚು ಗಮನ ಕೊಡಬೇಕೆಂದು ಮುಖ್ಯ ಅತಿಥಿಗಳಾದ SDMCಅಧ್ಯಕ್ಷರಾದ.ಜಿ. ಕುಬೇರಪ್ಪ.ನವರು ಅಲ್ಲಿ ಸೇರಿರುವ ಮಕ್ಕಳಿಗೆ ತಿಳಿಸಿದರು. ಈ ಸಮಾರಂಭದಲ್ಲಿ :- ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ತೀರ್ಥ ಲಿಂಗಪ್ಪ. ಸಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್ಡಿಎಂಸಿ ಉಪಾಧ್ಯಕ್ಷರಾದ ಸುಮಾ, ಸದಸ್ಯರುಗಳಾದ ವೀರೇಶಪ್ಪ ಗದಿಗೆಪ್ಪ ವಿರುಪಾಕ್ಷಪ್ಪ ,ಉಷಾ ,ಜ್ಯೋತಿ ಸಹ ಶಿಕ್ಷಕರುಗಳಾದ ಬಸವರಾಜಪ್ಪ. ಸೋಮಶೇಖರಪ್ಪ,ಮಲಿಗೇನಳ್ಳಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಪರಮೇಶಣ್ಣ ಮತ್ತು ನಾಗರಾಜ್
.ಚನ್ನಮಲ್ಲಿಕಾರ್ಜುನ. ವಿಶ್ವನಾಥ್ ಸಿಎಂ, ಭರತ್.ಯೋಗೀಶ್ವರ್.ಸುಮಲತಾ, ಕೋಮಲ ಶಾಲಾ ಸಿಬ್ಬಂದಿ ವರ್ಗ ಅಡಿಗೆ ಸಿಬ್ಬಂದಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು.