ಸಮಾಜದಲ್ಲಿ ನಡೆಯುವ ಅಸಮಾನತೆ, ದೌರ್ಜನಗಳನ್ನು
ತಡೆಯಲು ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ಹೇಳಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ
ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ
ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಡಾ|| ಫಕೀರಪ್ಪ
ಗುರುಬಸಪ್ಪ ಹಳಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ಅವರ
ಭಾವಚಿತ್ರಕ್ಕೆ ಪುμÁ್ಪರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಇಂದು ನಮಗೆ ವಚನಗಳು ಇಷ್ಟೊಂದು ಸುಲಭವಾಗಿ
ಸಿಗುತ್ತಿವೆ ಅಂದರೆ ಅದಕ್ಕೆ ಮೂಲ ಕಾರಣ ಡಾ|| ಫಕೀರಪ್ಪ
ಗುರುಬಸಪ್ಪ ಹಳಕಟ್ಟಿ ರವರು. ಶರಣರು ತಮ್ಮ ಜೀವನದ
ಅನುಭವಗಳನ್ನು ವೇದ-ಉಪನಿಷತ್ತುಗಳನ್ನು
ಜನಸಾಮಾನ್ಯರಿಗೆ ತಿಳಿಯುವಂತೆ ವಚನಗಳ ಮೂಲಕ
ರಚಿಸುತ್ತಿದ್ದರು. ಸಮಾಜದಲ್ಲಿ ನಡೆಯುವ ದೌರ್ಜನಗಳನ್ನು
ತಡೆಯಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ತಿಳಿದ
ಹಳಕಟ್ಟಿಯವರು ಸಾಕಷ್ಟು ಸಂಶೋಧನೆ ನಡೆಸಿ
ವಚನಗಳನ್ನು ಸಂರಕ್ಷಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಒಂದು ಗುಂಪು ವಚನ
ಸಂಗ್ರಹಗಳನ್ನು ನಾಶಮಾಡುತ್ತಿದ್ದಾಗ ಬಹಳಷ್ಟು ಶರಣರು
ವಿವಿಧ ಜಾಗಗಳಲ್ಲಿ ಅವನ್ನ ಜೋಪಾನವಾಗಿಸಿದ್ದರು, ಅಂತಹ ಎಲ್ಲಾ
ಸಂಗ್ರಹಗಳನ್ನು ಒಂದೆಡೆ ಜೋಡಿಸುವ ಕಾರ್ಯವನ್ನು
ಹಳಕಟ್ಟಿಯವರು ನಿರ್ವಹಿಸಿದರೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಸುಮತಿ
ಜಯಪ್ಪ ಉಪನ್ಯಾಸ ನೀಡಿ, ಬಾಲ್ಯದಿಂದಲೂ ತಂದೆಯ ಸಾಹಿತ್ಯ
ವಲಯದಲ್ಲಿ ತಮ್ಮನ್ನು ಒಗ್ಗೂಡಿಸಿಕೊಂಡು ಬೆಳೆದವರು
ಹಳಕಟ್ಟಿಯವರು, ಅವರ ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ,
ಅನಾರೋಗ್ಯ, ಸಾಲು ಸಾಲು ಸಾವುಗಳಾದರೂ ಕೂಡ ಧೃತಿಗೆಡದೆ
ಅವರು ಓಲೆಗರಿ, ಹಸ್ತಪ್ರತಿಗಳಲ್ಲಿದ್ದ ವಚನ ಸಾಹಿತ್ಯಗಳನ್ನು
ಸಂಗ್ರಹಿಸಿ, ವಿಶ್ಲೇಷಿಸಿ ಅವುಗಳನ್ನು ಪ್ರಕಟಿಸುವ ಕಾರ್ಯದಲ್ಲಿ
ತಮ್ಮನ್ನು ತೊಡಗಿಸಿಕಂಡಿದ್ದರೆಂದರು.
ಒಂದು ಸೈಕಲ್‍ನ ಸಹಾಯದಿಂದ ಹಲವಾರು ಕಡೆ ಸುತ್ತಾಡಿ
ಸಂಗ್ರಹಿತ ತಾಳೆಗರಿಗಳನ್ನು ಹಸ್ತಪ್ರತಿಗಳನ್ನು,
ಕೊಂಡುಕೊಂಡು ಬಂದು ಸಂರಕ್ಷಿಸಿದರು. 1923 ರಲ್ಲಿ ಬೆಳಗಾವಿಯ
ಮಹಾವೀರ ಮುದ್ರಣಾಲಯದಲ್ಲಿ ಇವರ ವಚನ ಸಾಹಿತ್ಯ ಸಂಪುಟ-1
ಪ್ರಕಟವಾಯಿತು. 1925 ರಲ್ಲಿ ತಮ್ಮ ಸ್ವ ಗೃಹದಲ್ಲಿಯೇ ಹಿತಸಾಹಿತ್ಯ
ಮುದ್ರಣಾಲಯ ಸ್ಥಾಪಿಸಿ ಸುಮಾರು 175 ಕೃತಿಗಳು ಹಾಗೂ ಹರಿಹರ
ಕವಿಯವರ 42 ರಗಳೆಗಳನ್ನು ಮುದ್ರಣ ಮಾಡಿ ಪ್ರಸಾರ
ಮಾಡಿದರು, ಕರ್ನಾಟಕ ವಿಶ್ವವಿದ್ಯಾಲಯ ವತಿಯಿಂದ ಇವರಿಗೆ 1956 ರಲ್ಲಿ
ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು.
ಕಾಯಕವೇ ಕೈಲಾಸ ಎಂಬಂತೆ ಬಸವಣ್ಣನವರ ಮಾರ್ಗದಲ್ಲಿ
ಬೆಳೆದು ಜೀವನ ಸಾಗಿಸಿದ ಮಹನೀಯರು ತಮ್ಮ ವಚನ ಸಾಹಿತ್ಯದ
ಮೂಲಕ ಸಾಮಾಜಿಕ, ಸಹಕಾರ, ಕ್ಷೇತ್ರಗಳಲ್ಲಿ ಅನೇಕ ರೀತಿಯ
ಸೇವೆ ಸಲ್ಲಿಸಿ 250ಕ್ಕೂ ಹೆಚ್ಚು ವಚನಕಾರರ ಪರಿಚಯಿಸಿದ ಕೀರ್ತಿ ಅವರಿಗೆ
ಸಲ್ಲಿಸುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.
ಎ.ಚನ್ನಪ್ಪ ಮಾತನಾಡಿ, ವಚನ ಸಾಹಿತ್ಯದ ದಿನಾಚರಣೆಯು ಒಂದು
ಜ್ಞಾನದ ದಿನಾಚರಣೆ ಯಾಗಿದೆ, ಸರ್ಕಾರ ಆಚರಿಸುವ ಜಯಂತಿಗಳ
ಹಿಂದೆ ಒಂದೊಂದು ಉದ್ದೇಶಗಳು ಇರುತ್ತವೆ, ಎಲ್ಲಾ ಮಹನೀಯರ
ಪರಿಚಯಿಸುವ ನಿಟ್ಟಿನಲ್ಲಿ ಜನ್ಮದಿನಾಚರಣೆಯನ್ನು
ಆಚರಿಸಲಾಗುತ್ತದೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಾಮದೇವಪ್ಪ ಮಾತನಾಡಿ,
25 ಸಾವಿರಕ್ಕೂ ಹೆಚ್ಚು ವಚನಗಳನ್ನು ಡಾ|| ಫಕೀರಪ್ಪ
ಗುರುಬಸಪ್ಪ ಹಳಕಟ್ಟಿ ರಚಿಸಿದ್ದಾರೆ. ಕರ್ನಾಟಕ ಸರ್ಕಾರ ಇವರ
ಏಳು ವಚನ ಸಂಪುಟಗಳನ್ನು ಮುದ್ರಣ ಮಾಡಿ ಪ್ರಸಾರ ಮಾಡಿದೆ.
ಎಲ್ಲರೂ ವಚನ ಸಾಹಿತ್ಯಗಳನ್ನು ಜೀವನದಲ್ಲಿ
ಅಳವಡಿಸಿಕೊಳ್ಳಬೇಕು ಎಂದರು.
ಇದೇ ವೇಳೆ ವಚನ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಶಸ್ತಿಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಮೇಯರ್
ಜಯಮ್ಮ ಗೋಪಿನಾಯ್ಕ್, ಅಪರ ಜಿಲ್ಲಾಧಿಕಾರಿ ಎನ್.ಪಿ ಲೋಕೇಶ್,
ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಕನ್ನಡ ಮತ್ತು
ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಎಲ್ಲಾ
ತಾಲ್ಲೂಕಿನ ತಹಶೀಲ್ದಾರ್‍ಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು
ಸೇರಿದಂತೆ ಇತರÀರು ಹಾಜರಿದ್ದರು.