ಹೊನ್ನಾಳಿ ಜುಲೈ 2 ತಾಲೂಕಿನ ಚಿಕ್ಕೆರಹಳ್ಳಿ ಗ್ರಾಮದ ರಮೇಶಪ್ಪ ಎಂಬುವರಿಗೆ 2003 ರಲ್ಲಿ ಅಕ್ರಮ ಸಕ್ರಮದಡಿಯಲ್ಲಿ 1.20 ಗುಂಟೆ ಜಮೀನನ್ನು ಕಾನೂನು ಪ್ರಕಾರ ಹಣ ಕಟ್ಟಿಸಿಕೊಂಡು ಖಾತೆ ಮತ್ತು ಪಹಣಿ ಮಾಡಿಕೊಡಲಿಕ್ಕೆ ತಹಸಿಲ್ದಾರ್ ಅವರು ಮಾಡಿದ್ದ ಆದೇಶವನ್ನು ಬುಧವಾರದಂದು ಸ್ಥಳೀಯ ಶಾಸಕರ ಮಾತನ್ನು ಕಟ್ಟಿಕೊಂಡು ಅರ್ಜಿದಾರರು ಅನುಭವದಲ್ಲಿಲ್ಲ ಎಂದು ಸುಳ್ಳಿಗೆ ಹೇಳಿ ಭೂಮಿ ಕೇಂದ್ರದಿಂದ ವಾಪಸ್ ತರಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಅವರು ಆರೋಪಿಸಿದ್ದರು. ಅದಕ್ಕೆ ಉತ್ತರವಾಗಿ ತಾಲೂಕು ಬಗುರು ಕುಂ ಕಮಿಟಿ ಅಧ್ಯಕ್ಷರಾದ ನಾಗರಾಜ್ ಮಾದನಹಳ್ಳಿ ಅವರು ನಂತರ ಮಾತನಾಡಿ 2000 ಇಸವಿಯಲ್ಲಿ ನಾನು ಗುರುಶಾಂತಪ್ಪ ವ್ಯಕ್ತಿಯಿಂದ ಎರಡು ಎಕರೆ ಜಮೀನನ್ನ ಖರೀದಿಸಿದ್ದೆ ಆದರೆ 2003 ರಲ್ಲಿ ಮಾಜಿ ಶಾಸಕರಾದ ಡಿಜಿ ಶಾಂತ ನಗೌಡ್ರವರು ತಮ್ಮ ಕಾರ್ಯಕರ್ತರು ಅನ್ನುವ ಕಾರಣದಿಂದ ರಮೇಶಪ್ಪನವರಿಗೆ 1 ಎಕರೆ 20 ಗುಂಟೆ ಇವರ ಸಹೋದರರಾದ ಶೇಖರಪ್ಪನವರಗೂ ಸಹ 1 ಎಕರೆ 20 ಗುಂಟೆ ಜಮೀನನ್ನ ಅಕ್ರಮ ಸಕ್ರಮದ ಅಡಿಯಲ್ಲಿ ಹಣವನ್ನು ಪಾವತಿಸಿಕೊಂಡು ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಆಪಾದಿಸಿದರು. ಅದೇ ರೀತಿ ಕುಂದೂರು ಗ್ರಾಮದ ಶೇಖರಪ್ಪ ಎನ್ನುವ ವ್ಯಕ್ತಿಯು ಸರ್ವೇ ನಂಬರ್ 33/27 ಮತ್ತು 33/26 ರಲ್ಲಿ 2 ಎಕರೆ 26 ಗುಂಟೆ ಇವರ ಸಂಬಂಧಿ ಎರಡು ಎಕರೆ 26 ಗುಂಟೆ ಒಟ್ಟಾಗಿ (5.12 )ಜಮೀನಿನ ಹೊಂದಿ ಸೀಲಿಂಗ್ ಮೀರಿದ್ದರು ಸಹ ಪಕ್ಕದ ಸುಮಾರು 5 ಎಕರೆ ಜಮೀನನ್ನು ಸಹ ಅಕ್ರಮವಾಗಿ ಹೊಡೆಯುತ್ತಿದ್ದು ಪಕ್ಕದವರಿಗೆ ನೀವು ಹೆಂಗ್ ಜಮೀನನ್ನು ಉಳಿಮೆ ಮಾಡುತ್ತೀರಿ ಎಂದು ಎದುರಿಸುತ್ತಿದ್ದಾರೆ ಹಾಗಾಗಿ ಮಾಜಿ ಶಾಸಕರು ಡಿ ಜಿ ಶಾಂತಂ ಗೌಡ್ರವರು ಖುದ್ದಾಗಿ ಭೇಟಿಯಾಗಿ ಸ್ಥಳವನ್ನು ಪರಿಶೀಲಿಸಿ ನೋಡಲಿ ಎಂದು ಹೇಳಿದರು. ನಮ್ಮ ಶಾಸಕರಾದ ಎಂಪಿ ರೇಣುಕಾಚಾರ್ಯರವರು 50. 53ನೇ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಕಾನೂನು ರೀತಿಯಲ್ಲಿ ಯಾರು ಅನುಭವದಲ್ಲಿ ಇರುತ್ತಾರೋ ಅವರಿಗೆ ನ್ಯಾಯಯುತವಾಗಿ ಸಿಗಲೆಂದು ಪುನಃ ಸರ್ವೇ ಕಾರ್ಯವನ್ನು ಮಾಡಲಿಕ್ಕೆ ಅಧಿಕಾರಿಗಳಿಗೆ ತಿಳಿಸಿದ್ದಾರೆ ವಿನಹ ಬೇರೆ ಯಾವುದೇ ದುರುದ್ದೇಶ ಇಲ್ಲ ಎಂದರು.
ಉಪಸ್ಥಿತಿಯಲ್ಲಿ ಬಗುರುಕುಂ ಕಮಿಟಿಯ ತಾಲೂಕ್ ಅಧ್ಯಕ್ಷರಾದ ನಾಗರಾಜ್ ಮಾದೇನಹಳ್ಳಿ .ಮಾಜಿ ತಾಲೂಕ ಪಂಚಾಯಿತಿಯ ಸದಸ್ಯರಾದ ತಿಪ್ಪೇಶ್ ಣ್ಣ ಶಿವಪ್ಪ ಬಸಪ್ಪ ಕುಂದೂರ್ ,ಸಿದ್ದಪ್ಪ, ಹನುಮಂತಪ್ಪ, ವಿಜಯಕುಮಾರ್, ಮಂಜುನಾಥ್ ಸಹ ಭಾಗಿ ಯಾಗಿದ್ದರು.