ಹುಣಸಘಟ್ಟ: ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಗ್ರಾಮದ ಕೋಟೆ ಆಂಜನೇಯ ಸಮುದಾಯ ಭವನದಲ್ಲಿ ಜುಲೈ 5ರ ಮಂಗಳವಾರ ಬೆಳಿಗ್ಗೆ 10.30 ಕ್ಕೆ ಡಾ. ಬಿಆರ್ ಅಂಬೇಡ್ಕರ್ ಯುವಕ ಸಂಘ ಹೋಬಳಿ ಘಟಕದ ವತಿಯಿಂದ 2021-2022 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಉಪನ್ಯಾಸಕ ಮತ್ತು ಅಂಬೇಡ್ಕರ್ ಯುವಕ ಸಂಘದ ಪೋಷಕ ಎಂ ಸಿ ಮೋಹನ್ ಕುಮಾರ್ ಹೇಳಿದರು.
ಭಾನುವಾರ ಸಾಸ್ವೆಹಳ್ಳಿ ಕೋಟೆ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಂಗಳವಾರ ಬೆಳಿಗ್ಗೆ ನಡೆಯಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆಯನ್ನು ಡಿ ಎಸ್ ಎಸ್ ರಾಜ್ಯ ಘಟಕ ಸಂಚಾಲಕ ಶಿವಮೊಗ್ಗ ಎಂ ಗುರುಮೂರ್ತಿ ನೆರವೇರಿಸಲಿದ್ದಾರೆ. ಹೊನ್ನಾಳಿ ತಾಲೂಕು ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ತಾಲೂಕು ದಂಡಾಧಿಕಾರಿ ಹೆಚ್ ಜೆ ರಶ್ಮಿ ಹಾಗೂ ಪಿ ಎಸ್ ಐ ಬಸವನ ಗೌಡ ಬಿರಾದಾರ್ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಕ ಸಂಘ ಹೋಬಳಿ ಘಟಕದ ಅಧ್ಯಕ್ಷ ಎಚ್ ಕೆ ಹಾಲೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಿಪಿ ಚಂದ್ರಪ್ಪ, ಜಿಲ್ಲಾ ಬಹುಜನ ಸಮಾಜದ ಅಧ್ಯಕ್ಷ ಡಿ ಹನುಮಂತಪ್ಪ, ಸಾಮಾಜಿಕ ಚಳುವಳಿಯ ನಾಯಕ ಪಾವಗಡದ ಕೆಂಚರಾಯ ಸೇರಿದಂತೆ ಅನೇಕ ಸಮಾಜದ ಸುಧಾರಕರು ಚಿಂತಕರು ಜಾನಪದ ಕಲಾವಿದರುಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್ ಯುವಕ ಸಂಘ ಹೋಬಳಿ ಘಟಕದ ಅಧ್ಯಕ್ಷ ಹೆಚ್ ಕೆ ಹಾಲೇಶ್, ತಾಲೂಕು ಯುವ ಮುಖಂಡ ಆರ್ ಕುಬೇರ್, ಶಿಕ್ಷಕ ರಘು, ಹೋಬಳಿ ಪದಾಧಿಕಾರಿಗಳಾದ ಪುಟ್ಟಸ್ವಾಮಿ, ಪ್ರಭು ಮುಜೀಬ್ ಉಲ್ಲಾ, ಪ್ರವೀಣ್, ಹನುಮಂತಪ್ಪಹಾಗೂ ಹೋಬಳಿ ಮುಖಂಡರು ಉಪಸ್ಥಿತರಿದ್ದರು.