ಹೊನ್ನಾಳಿ ಜುಲೈ 3 ಪಟ್ಟಣ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇಂದು ತಾಲೂಕು ಪಂಚಮಸಾಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಡಾಕ್ಟರ್ ರಾಜಕುಮಾರ್ ಅವರ ಉಪಸ್ಥಿತಿ, ಪಿ ವೀರಣ್ಣ ಅಧ್ಯಕ್ಷತೆಯಲ್ಲಿ 2021 /22 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪಿಯುಸಿ ಮತ್ತು ಡಿಗ್ರಿ ಡಿಪ್ಲೋಮೋ ಐಟಿಐ ಇನ್ನು ಮುಂತಾದ ಕೋರ್ಸ್ ಗಳಲ್ಲಿ 85/; ಡಿಸ್ಟಿಂಕ್ಷನ್ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವ ವಿಚಾರವಾಗಿ ಪೂರ್ವಭಾವಿ ಸಭೆಯನ್ನು ಕರೆಯಲಾಯಿತು.
ಸರ್ವರಿಗೂ ಸ್ವಾಗತ ಕೋರಿದ ಚನ್ನ ಮುಂಭಾಪುರ ಚಂದ್ರಶೇಖರ್ ರವರು ನಿರ್ವಹಿಸಿದರು.
ಪ್ರಸ್ತಾವಿಕ ಮುನ್ನುಡಿಯನ್ನು ಕುಂಕುದ ಹಾಲೆಶಣ್ಣನವರು ನೆರವೇರಿಸಿ ಕೊಟ್ಟರು .
ಪಂಚಮಸಾಲಿ ಸಮಾಜದ ಗೌರವ ಅಧ್ಯಕ್ಷರಾದ ಡಾ// ರಾಜಕುಮಾರ್ ನಂತರ ಮಾತನಾಡಿ, ಹೊನ್ನಾಳಿ ತಾಲೂಕಿನಲ್ಲಿರುವ ವೀರಶೈವ ಪಂಚಮಸಾಲಿ ಲಿಂಗಾಯತ ಸಮಾಜದ ಶಾಲಾ ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಸಾಮಾಜಿಕ ರಾಜಕೀಯ ಹಾಗೂ ವಿಶೇಷವಾಗಿ ಸಾಧನೆ ಮಾಡಿದಂತವರಿಗೆ ಇದೇ ತಿಂಗಳು ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಉಪಾಧ್ಯಕ್ಷರು ಗಳಿಗೆ ಇದೇ ಸಂದರ್ಭದಲ್ಲಿ ಗೌರವ ಸನ್ಮಾನವನ್ನು ಮಾಡಲಾಗುವುದು ಎಂದು ಹೇಳಿದರು. ಇದರ ಜೊತೆಗೆ ಈ ಕಾರ್ಯಕ್ರಮಕ್ಕೆ ಹೊನ್ನಾಳಿ ತಾಲೂಕಿನ ಪಂಚಮಸಾಲಿ ಸಮಾಜದ ಹಿರಿಯರು ಮತ್ತು ಕಿರಿಯರು ಮಹಿಳೆಯರು ಮಕ್ಕಳು ಬಂದು ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಸಮಾಜ ಬಾಂಧವರಲ್ಲಿ ಮನವಿ ಮಾಡಿ ದರು.
ತಾಲೂಕ್ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಪಿ ವೀರಣ್ಣ ಮಾತನಾಡಿ ಪ್ರತಿ ತಿಂಗಳು ಮೀಟಿಂಗ್ ಮಾಡುವಾಗ ಸರಿಯಾದ ಸಮಯಕ್ಕೆ ಬಂದು ಸಮಾಜದ ಬಾಂಧವರು ಭಾಗವಹಿಸಬೇಕು ಮನವಿಯ ಜೊತೆಗೆ ಪಂಚಮಸಾಲಿ ಸಮಾಜದ ಪ್ರತಿಯೊಬ್ಬ ಬಾಂಧವರು ಕೈಜೋಡಿಸಿ 24 ನೇ ತಾರೀಕು ನಂದು ನಡೆಯುವ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ್ ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷರಾದ ಡಾ// ರಾಜಕುಮಾರ್ ರಾಜ್ಯ ಪಂಚಮಸಾಲಿ ಸಮಾಜದ ರಾಜ ಉಪಾಧ್ಯಕ್ಷರಾದ ಪಟ್ಟಣಶೆಟ್ಟಿ ಪರಮೇಶಣ್ಣ, ತಾಲೂಕ್ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಪಿ ವೀರಣ್ಣ, ಕುಂಕುವ ಹಾಲೇಶ್ ,ಮೆಸ್ಕಾಂ ಸದಸ್ಯರಾದ ರುದ್ರೇಶ್, ನಗರ ಘಟಕದ ಅಧ್ಯಕ್ಷರಾದ ಗಿರೀಶ್, ಮಹಿಳಾ ಘಟಕದ ಅಧ್ಯಕ್ಷರಾದ ಶಿಲ್ಪ ರಾಜುಗೌಡ, ಕಾರ್ಯದರ್ಶಿಯಾದ ಕವಿತಾ ಚೆನ್ನೇಶ್, ಅನುರಾಧ ಚಂದ್ರಶೇಖರ್, ಉಪಾಧ್ಯಕ್ಷ ಸಿದ್ದೇಶ ,ಬಳ್ಳೇಶ್ವರದ ಹಾಲೇಶಣ್ಣ ಶಿವಮೊಗ್ಗ ಜಿಲ್ಲಾ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಚಂದ್ರಪ್ಪ, ರಾಜ್ಯ ಪಂಚಮ ಸಾಲಿ ಸಂಘಟನಾ ಕಾರ್ಯದರ್ಶಿಯಾದ ಬೇಗೂರ್ ಸಿದ್ದೇಶ್, ಇಡ್ಲಿ ಶಿವಣ್ಣ, ಇನ್ನು ಮುಂತಾದ ಸಮಾಜದ ಮುಖಂಡರು ಸಹ ಭಾಗಿಯಾಗಿದ್ದರು.