ಹೊನ್ನಾಳಿ : ಕನ್ನಯ್ಯಲಾಲ್ ಹತ್ಯೆ ಮಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರಿಗೆ ಪ್ರಾಣ ಬೆದರಿಕೆ ಹಾಕಿದವರನ್ನು ಬಂಧಿಸಿದರೆ ಸಾಲದು, ಅವರನ್ನು ಗುಂಡಿಕ್ಕಿ ಕೊಲ್ಲ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕು ಬಿಜೆಪಿ ವತಿಯಿಂದ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಯ್ಯಲಾಲ್ ತನಗೆ ಜೀವ ಬೆದರಿಕೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಅವರು ಅದನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲಾ.ಕನ್ನಯ್ಯಲಾಲ್ ಹತ್ಯೆಗೆ ಕಾಂಗ್ರೇಸ್ ಸರ್ಕಾರವೇ ನೇರ ಕಾರಣ, ಕೂಡಲೇ ರಾಷ್ಟ್ರಪತಿಗಳು ರಾಜಸ್ತಾನದ ಕಾಂಗ್ರೇಸ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ಆಗ್ರಹಿಸಿದರು.
ಎಲ್ಲಾ ಮುಸ್ಲೀಂಮರು ದೇಶ ದ್ರೋಹಿಗಳಲ್ಲಾ, ದೇಶದ್ರೋಹದ ಕೆಲಸ ಮಾಡುವವರ ವಿರುದ್ದ ನಮ್ಮ ಹೋರಾಟ ಎಂದ ಶಾಸಕರು, ದೇಶದ ವಿಚಾರ ಬಂದಾಗ ನಮ್ಮ ಪ್ರಾಣವನ್ನು ನೀಡಲು ನಾವು ಸಿದ್ದ ಎಂದರು.
ರಾಹುಲ್ಗಾಂಧೀಯವರನ್ನು ಇಡಿ ಕಚೇರಿಗೆ ಕರೆದ ತಕ್ಷಣ ಪ್ರತಿಭಟನೆ ಮಾಡುವವರು ಕನ್ನಯ್ಯ ಲಾಲ್ ಹತ್ಯೆ ಮಾಡಿದಾಗ ಏಕೆ ಪ್ರತಿಭಟನೆ ಮಾಡಲಿಲ್ಲಾ ಎಂದು ಪ್ರಶ್ನಿಸಿದ ಶಾಸಕರು, ಕನ್ನಯ್ಯ ಲಾಲ್ ಹತ್ಯೆ ಮಾಡಿದವರನ್ನು ಗಲ್ಲಿಗೇರಿಸಿ ಎಂದು ಪ್ರತಿಭಟನೆ ಮಾಡದ ನಿಮಗೆ ನಾಚಿಕೆಯಾಗ ಬೇಕೆಂದರು.
ಭಾರತ ದೇಶದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲಾರೂ ನಾವೆಲ್ಲಾ ಭಾರತೀಯರು, ಭಾರತ್ ಮಾತಾಕೀ ಜೈ ಎಂದು ಹೇಳುವವರಿಗೆ ಮಾತ್ರ ಈ ನೆಲದಲ್ಲಿ ವಾಸಿಸಲು ಹಕ್ಕಿದೇ ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಇಲ್ಲಿರಲು ನೈತಿಕತೆ ಇಲ್ಲಾ ಎಂದ ಶಾಸಕರು ನಾವು ಎಂದೂ ಓಟ್ ಬ್ಯಾಂಕ್ ರಾಜಕಾರಣ ಮಾಡಿಲ್ಲಾ ಕಾಂಗ್ರೇಸ್ ನವರು ಓಟಿಗಾಗೀ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಕೆಲಸ ಮಾಡುತ್ತಿದೇ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಸಮಸ್ತೆ ಬಂದುಗಳ ಪರವಾಗಿ ರಾಷ್ಟ್ರಪತಿಗಳಿಗೆ ಮನವಿ ಮಾಡುತ್ತಿದ್ದು ಕನ್ನಯ್ಯಲಾಲ್ ಹತ್ಯೆ ಮಾಡಿದ ಕಟುಕರಿಗೆ ತಕ್ಕ ಶಿಕ್ಷೆಯಾಗ ಬೇಕು, ಅಷ್ಟೇ ಅಲ್ಲದೇ ರಾಷ್ಟ್ರಪತಿ ಆಡಳಿತ ಜಾರಿ ಮಾಡ ಬೇಕೆಂದು ಮನವಿ ಮಾಡುತ್ತೇವೆ ಎಂದರು.
ಮಾಜಿ ಶಾಸಕರ ವಿರುದ್ದ ಲೇವಡಿ : ಬೆಂಗಳೂರಿನಲ್ಲಿ ಒಬ್ಬರು ಕಾಮಿಡಿ ಪೀಸ್ ಇದ್ದರೇ ಹೊನ್ನಾಳಿಯಲ್ಲಿ ಒಬ್ಬರು ಕಾಮಿಡಿ ಪೀಸ್ ಇದ್ದಾರೆ ಎಂದು ಮಾಜಿ ಶಾಸಕರಿಗೆ ಲೇವಡಿ ಮಾಡಿ ರೇಣುಕಾಚಾರ್ಯ ಮಾಜಿ ಶಾಸಕರು ಅಧಿಕಾರಿಗಳಿಗೆ ಮೊದಲು ಸರಿಯಾಗಿ ಮಾತನಾಡುವುದನ್ನು ಕಲಿಯ ಬೇಕು ಎಂದರು.
ಅವರು ನನಗೆ ಎಷ್ಟೇ ಬೈಯಲಿ ನಾನು ಅದನ್ನು ಕ್ಷೇತ್ರದ ಜನರ ಪಾದ ಕಮಲಗಳಿಗೆ ಅರ್ಪಿಸುತ್ತೇನೆಂದ ಶಾಸಕರು ಈಗಾಗಲೇ ಅವಳಿ ತಾಲೂಕಿನ ಜನರು ಮೂರು ಬಾರೀ ಉತ್ತರ ನೀಡಿದ್ದ 2023 ಚುನಾವಣೆಯಲ್ಲಿ ಮತ್ತೆ ಉತ್ತರ ನೀಡುತ್ತಾರೆ ಎಂದರು.
ನನಗೆ ದಿ.ಬಸವನಗೌಡ್ರು, ದಿ.ಶಂಕ್ರಪ್ಪಗೌಡ್ರು ಬಗ್ಗೆ ಅಪಾರವಾದ ಗೌರವವಿದೆ, ಮೊದಲು ಮಾಜಿ ಶಾಸಕರು, ಸರಿಯಾಗಿ ಮಾತನಾಡುವುದನ್ನು ಕಲಿಯಲಿ ಎಂದರು.
ಶಾಸಕರ ನಿವಾಸದಿಂದ ತಹಶೀಲ್ದಾರ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ : ಹೊನ್ನಾಳಿಯ ಹಿರೇಕಲ್ಮಠ ನಿವಾಸದಲ್ಲಿರುವ ಶಾಸಕರ ಮನೆಯಿಂದ ಸಂಗೋಳಿರಾಯಣ್ಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಕಾರ್ಯಕರ್ತರು ಸಂಗೋಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಅಲ್ಲಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದ ಶಾಸಕರು ತಹಶೀಲ್ದಾರ್ ರಶ್ಮಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಶಾಂತರಾಜ್ ಪಟೇಲ್, ಜಿಲ್ಲಾಪ್ರಧಾನ ಕಾರ್ಯದರ್ಶಿ ಶಿವಾನಂದ್, ತಾಲೂಕು ಪ್ರಧಾನ ಕಾರ್ಯದರ್ಶಿ ಸಿಕೆ ರವಿ, ಪುರಸಭೆ ಅಧ್ಯಕ್ಷ ರಂಗಪ್ಪ ಸೇರಿದಂತೆ ಪುರಸಭೆ ಸದಸ್ಯರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು, ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರಿದ್ದರು.