ಹೊನ್ನಾಳಿ : ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೇಸ್ ಮುಳುಗಿದ ಹಡಗು, ಮುಳುಗಿದ ಹಡಗಿಗೆ ಸಿದ್ದರಾಮಯ್ಯ,ಡಿಕೆಶಿ ಹಾಗೂ ಮಲ್ಲಿಕಾರ್ಜುನ್ ಖರ್ಗೆ ನಾವಿಕರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದರು.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೇಸ್ ಅಡ್ರಸ್ ಇಲ್ಲಾ ಕೇವಲ ಎರಡೇ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರದಲ್ಲಿದೇ ಎಂದ ಶಾಸಕರು, ರಾಜ್ಯದಲ್ಲಿ ಕಾಂಗ್ರೇಸ್ ನೂರಕ್ಕೆ ನೂರು ಮುಳುಗಿದ ಹಡಗು ಎಂದರಲ್ಲದೇ 2023 ಕ್ಕೆ ಬಿಜೆಪಿ ಮತ್ತೇ ಅಧಿಕಾರಕ್ಕೆ ಬರಲಿದೆ ಎಂದರು.
ನಾನು ಮುಚುಣಿಯಲ್ಲಿ ಬರ ಬೇಕೆಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಕನಸು ಕಾಣುತ್ತಿದ್ದು,
ಸಿದ್ದರಾಮಯ್ಯನವರಿಗೆ ಡಿ.ಕೆ.ಶಿವಕುಮಾರ್ ಅಡ್ಡಿಗಾಲಾಗುತ್ತಿದ್ದು, ನಿಮ್ಮ ನಾಯಕತ್ವದಲ್ಲಿ ಕಾಂಗ್ರೇಸ್ ಚುನಾವಣೆ ಎದುರಿಸೊಲ್ಲಾ ಏಕೆ ಕಾಂಗ್ರೇಸ್ ಅನ್ನು ಡಿಪೇಡ್ ಮಾಡಿಕೊಳ್ಳುತ್ತೀರಿ ಎಂದರು.
ಸಿದ್ದರಾಮಯ್ಯನವರ ದೇಹ ಕಾಂಗ್ರೇಸ್ ನಲ್ಲಿ ಇದ್ದರೇ ಮನಸ್ಸು ಬೇರೆ ಕಡೆ ಇದೇ ಕಾಂಗ್ರೇಸ್ ರಾಜ್ಯದಲ್ಲಿ ಕಿತ್ತೋಗೆಯ ಬೇಕೆಂದು ಸಾಕಷ್ಟು ಬಾರೀ ಸಿದ್ದರಾಮಯ್ಯನವರೇ ಹೇಳಿದ್ದು,
ಕಾಂಗ್ರೇಸ್ ಬಿಟ್ಟು ಹೊರ ಬಂದು ನಿಮ್ಮ ದಾರಿ ನೀವು ನೋಡಿ ಕೊಳ್ಳಿ ಎಂದರು.
ಬಿಜೆಪಿಯನ್ನ ಬಿಟ್ಟು ಯಾವೊಬ್ಬ ಕಾರ್ಯಕರ್ತನೂ ಹೋಗುವುದಿಲ್ಲಾ, ಮುಳುಗಿದ ಅಡಗಿಗೇ ಯಾರು ಹೋಗ್ತಾರೆ ಎಂದ ರೇಣುಕಾಚಾರ್ಯ ಕಾಂಗ್ರೇಸ್ ಜೆಡಿಎಸ್ ಮುಖಂಡರು ಬಿಜೆಪಿ ಬರಲು ಸಿದ್ದರಿದ್ದಾರೆಂದು ಹೊಸ ಬಾಂಬ್ ಸಿಡಿಸಿದರು.
ಎಲ್ಲವೂ ನನಗೆ ಗೊತ್ತಿದೇ ಎನ್ನಲು ನಾನು ಪ್ರವೀಣ ಅಲ್ಲಾ ನಮ್ಮ ಪಕ್ಷದಲ್ಲಿ ಹಿರಿಯರಿಗೆ ಕೊರತೆ ಇಲ್ಲಾ, ಸಿದ್ದರಾಮಯ್ಯನವರು ಹಿರಿಯರಿದ್ದು ಅವರು ಪಕ್ಷಕ್ಕೆ ಬಂದರೆ ತಪ್ಪೇನಿದೆ ಎಂದರು.
ಹಿಂದೂ ದೇವಾನು ದೇವತೆಗಳಿಗೆ ದೇಶ ವಿರೋಧಿಗಳು ಅಪಮಾನ ಮಾಡುತ್ತಿದ್ದು, ಮೀನಾ ಎಂಬ ಕ್ರಿಶ್ಚಿಯನ್ ಮಾಹಿಳೆ ಕಾಳಿ ಪ್ರತಿಮೆಗೆ ಅವಮಾನ ಮಾಡಿದ್ದು ನಾವೆಲ್ಲಾ ಹಿಂದುಗಳು ಅದನ್ನು ಖಂಡಿಸುತ್ತೇವೆ ಅಷ್ಟೇ ಅಲ್ಲದೇ ಆಕೆಯನ್ನು ಬಂಧಿಸುವಂತೆ ಆಗ್ರಹಿಸುತ್ತೇವೆ ಎಂದರು.

Leave a Reply

Your email address will not be published. Required fields are marked *