ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಕಷ್ಟಕ್ಕೆ ಸಿಲುಕಬೇಡಿ ಹಿರೇಕಲ್ಮಠ ಶ್ರೀಗಳು ಹೊನ್ನಾಳಿ ಶ್ರೀ ಚನ್ನಪ್ಪ ಸ್ವಾಮಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹೊನ್ನಾಳಿ ಇದರ ಪ್ರಥಮ ವರ್ಷದ ಸಾಮಾನ್ಯ ಸಭೆಯನ್ನು ಹೊನ್ನಾಳಿಯ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ನಡೆಸಲಾಯಿತು ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಹಿರೇಕಲ್ಮಠದ ಪೀಠಾಧಿಪತಿಗಳು ಹಾಗೂ ಸಹಕಾರಿ ಸಂಘದ ಅಧ್ಯಕ್ಷರು ಆಗಿರುವ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ಸೌಹಾರ್ದ ಸಹಕಾರಿ ಸಂಘವನ್ನು ತಾಲೂಕಿನ ಎಲ್ಲ ಜನತೆಗೂ ಅನುಕೂಲವಾಗಲಿ ಎಂದು ಸ್ಥಾಪಿಸಲಾಗಿದೆ ತಲುಕಿನ ಜನರು ಇದರಲ್ಲಿ ಶೇರುದಾರರಾಗಿ ಸೇರಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಅವರಿವರ ಬಳಿ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವ ಬದಲು ನಮ್ಮ ಸೌಹಾರ್ದ ಸಹಕಾರಿ ಸಂಘದಲ್ಲಿ ಸೇರಿಕೊಂಡು ತಮಗೆ ಅವಶ್ಯಕತೆ ಇದ್ದಲ್ಲಿ ಸಾಲ ಪಡೆದು ಕಡಿಮೆ ಬಡ್ಡಿ ದರದಲ್ಲಿ ತೀರಸುವ ವ್ಯವಸ್ಥೆ ಇರುತ್ತದೆ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಸಹಕಾರಿ ಸಂಘವನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಕನಸು ಹೊಂದಿದ್ದೇವೆ ಎಂದು ಶ್ರೀಗಳು ತಿಳಿಸಿದರು ನಂತರ ಸಹಕಾರಿ ಸಂಘದ ಉಪಾಧ್ಯಕ್ಷರಾದ ಸುರೇಶ್ ಹೊಸಕೇರಿ ಮಾತನಾಡಿ ಈ ಸಹಕಾರಿ ಸಂಘದ ಎಲ್ಲಾ ನಿರ್ದೇಶಕರು ಸಂಘದ ಏಳಿಗೆಗಾಗಿ ಸಂಘದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮವಹಿಸಿ ದುಡಿಯುತ್ತಿದ್ದಾರೆ ನಿಮ್ಮೆಲ್ಲರ ಸಹಕಾರದಿಂದ ಸಂಘವನ್ನು ಮುಂದಿನದಿನಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿಯತ್ತ ಕೊಂಡೊಯ್ಯುವ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕರುಗಳಾದ ಡಿಎಲ್ ಕುಮಾರಸ್ವಾಮಿ. ಕೋರಿ ಗುರುಲಿಂಗಪ್ಪ. ಚನ್ನವೀರಪ್ಪ ಡಿಎಂ. ಸುರೇಶ್ ಬಿ. ಗಂಗಪ್ಪ. ರಾಮಚಂದ್ರಪ್ಪ. ಅಜ್ಜಪ್ಪ. ಕುಮಾರ್ ಹೆಚ್. ಸಂತೋಷ್ ಹೆಚ್ ಎಂ. ರವಿಕುಮಾರ್. ಶ್ರೀಮತಿ ರೇ ವಮ್ಮ. ಮಂಜುಳ ಹೆಚ್. ಸುನಿತಾ. ಶಾಂತ ಸುರೇಶ್. ವಿದ್ಯಾ ಸಂತೋಷ್. ಇನ್ನೂ ಹಲವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *