ಹೊನ್ನಾಳಿ ಜುಲೈ 5 ಕೇಂದ್ರ ಮತ್ತು ರಾಜ್ಯ ಸರ್ಕಾರ ಆದೇಶದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಸಂಕ್ರಾಮಿಕ ಆರೋಗ್ಯ ತಪಾಸಣೆ ಕಾರ್ಯಕ್ರಮದ ಯೋಜನೆಯ ಅಡಿಯಲ್ಲಿ ಮಹಿಳಾ ಶಿಕ್ಷಕಿಯರಿಗೆ ಹಾಗೂ ಅಡುಗೆ ಮಾಡುವ ಸಿಬ್ಬಂದಿ ವರ್ಗಗಳಿಗೆ ಆರೋಗ್ಯ ತಪಾಸಣೆಯ ಶಿಬಿರವನ್ನು ನಡೆಸಲಾಯಿತು.
ಹೊನ್ನಾಳಿ ಪಟ್ಟಣದ ಜನತಾ ಉರ್ದು ಪ್ರೌಢಶಾಲೆಯಲ್ಲಿ ಇಂದು ಕ್ಲಸ್ಟರ್ 1 ಮತ್ತು ಕ್ಲಸ್ಟರ್ 2 ಸುಮಾರು 10ಕ್ಕೂ ಹೆಚ್ಚು ಶಾಲೆಗಳ ಮಹಿಳಾ ಶಿಕ್ಷಕಿಯರಿಗೆ ಹಾಗೂ ಅಡುಗೆಯ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆಯನ್ನ ನಡೆಸಲಾಯಿತು. ಆರೋಗ್ಯ ತಪಾಸಣೆಯ ಬಗ್ಗೆ ವೈದ್ಯರಾದ ನರೇಂದ್ರ ಅವರು ನಂತರ ಮಾತನಾಡಿ, ರಕ್ತದ ಒತ್ತಡ ,ಸಕ್ಕರೆ ಕಾಯಿಲೆ ಹಾಗೂ ಕ್ಯಾನ್ಸರ್ ನಂತಹ ರೋಗಗಳು ಬಂದರೂ ಸಹ ನಮಗೆ ಗೊತ್ತಾಗುವುದಿಲ್ಲ, ಹಾಗಾಗಿ ಅದಕ್ಕೆ ಮುಂದಾಲೋಚನೆ ಇಟ್ಟುಕೊಂಡು ಮುಂದೆ ಬರುವ ಕಾಯಿಲೆಗಳು ನಮ್ಮ ದೇಹಕ್ಕೆ ಒಳ ಸೇರುವ ಮುಂಚೇನೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ನಮ್ಮಗಳ ಆರೋಗ್ಯವನ್ನು ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶಕೀಲ್ಅಹಮದ್, ಗೀತಾಂಜಲಿ ಪಿ ಎಚ್ ಸಿ ಓ, ಕವಿತಾ ಸಿ ಎಚ್ ಓ ,ತಿಪ್ಪೇಸ್ವಾಮಿ ಎಚ್ಐಒ ,ವಿಶ್ವನಾಥ್ ಎಚ್ ಐ ಓ, ಆಶಾ ಕಾರ್ಯಕರ್ತೆಯರಾದ ಮಂಗಳ, ವಿಜಯ್ ಕುಮಾರಿ, ಶಾಲಾ ಶಿಕ್ಷಕರಾದ ಶಂಶದ್ ಬೇಗಂ, ಆಯತ್ಉಲ್ಲಾ, ಕುಮಾರ, ಸುತಾರ್, ರಫಿಉಲ್ಲಾ ಇನ್ನು ಮುಂತಾದವರು ಉಪಸ್ಥಿತರಿದ್ದರು.