ನ್ಯಾಮತಿ ಜುಲೈ 5 ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಾಮಾನ್ಯ ಸಭೆಯನ್ನು ಕರೆಯಲು ತೀರ್ಮಾನಿಸಲಾಗಿತ್ತು .ಆ ಸಾಮಾನ್ಯ ಸಭೆಯು ಅಧ್ಯಕ್ಷರ ನೇತೃತ್ವದಲ್ಲಿ ಪ್ರಾರಂಭವಾಗುವುದಕ್ಕಿಂತ ಮುಂಚೆನೇ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್ ನಾಯ್ಕ್ ಈ ಸಾಮಾನ್ಯ ಸಭೆಯು ಪ್ರಾರಂಭವಾಗದಕ್ಕಿಂತ ಮುಂಚೇನೆ ಅಧ್ಯಕ್ಷರಿಗೆ ನನ್ನದೊಂದು ಪ್ರಶ್ನೆ ವಿಷಯ ಏನಂದರೆ 15 ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಐದು ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ, ಐದು ಜನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದರು. ಚುನಾವಣಾ ಪ್ರಕ್ರಿಯೆ ಮುಗದ ನಂತರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಗಾದೆಗೆ ಚುನಾವಣೆ ನಡೆಯಿತು.
ಆ ಸಂದರ್ಭದಲ್ಲಿ ಎರಡು ಪಕ್ಷದ ಅಭ್ಯರ್ಥಿಗಳಿಗೆ ಬಹುಮತ ಇಲ್ಲದ ಕಾರಣ ,ಒಮ್ಮನಸಿನಿಂದ ಚುನಾವಣಾ ಪ್ರಕ್ರಿಯೆಯು ಲಾಟರಿ ಮೂಲಕ ನಡೆಯಿತು. ಆ ಲಾಟರಿಯಲ್ಲಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಆಯ್ಕೆಯಾದರು. ನಂತರ ಬಿಜೆಪಿ ಬೆಂಬಲಿತ ಸದಸ್ಯರಾದ ಶ್ರೀಮತಿ ಅನಿತಾ ರವರು 15 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಮಾತಿನ ಒಡಂಬಡಿಕೆಯುಂತೆಯೂ ಸಹ , ಅದೇ ಪ್ರಕಾರ ಅಧ್ಯಕ್ಷರು 15 ತಿಂಗಳಾದ ನಂತರ ರಾಜೀನಾಮೆ ಕೊಡಬೇಕಾಗಿತ್ತು. ನಾವು ರಾಜೀನಾಮೆಯನ್ನು ಕೊಡುತ್ತೇವೆ .ನೀವು ಉಪಾಧ್ಯಕ್ಷರ ಸ್ಥಾನನಕ್ಕೆ ಮೊದಲು ರಾಜೀನಾಮೆ ಕೊಡಿ ಎಂದು ಹೇಳಿದಾಗ ಉಪಾಧ್ಯಕ್ಷರಾದ ನಾಗೇಶ್ ನಾಯಕ್ ಅವರಿಂದ ವಾರದ ಮುಂಚೆನೇ ರಾಜೀನಾಮೆಯನ್ನು ಪಡೆದಿದ್ದರು. ನಾಗೇಶ್ ನಾಯಕ್ ತದಾದ ನಂತರ ನಾನು ಉಪಾಧ್ಯಕ್ಷರು ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ, ನೀವು ಅಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಹೇಳಿದಾಗ ಅಧ್ಯಕ್ಷರಾದ ಅನಿತಾ ರವರು ತಾಲೂಕು ಮಟ್ಟದ ಉಪ ವಿಭಾಗಾಧಿಕಾರಿ ಹುಲ್ಲು ಮನೆ ತಿಮ್ಮಣ್ಣನವರಿಗೆ ರಾಜೀನಾಮೆಯನ್ನು ಕೊಟ್ಟು ಬಂದಿದ್ದರು. ನಿಯಮಾನುಸಾರ ಹತ್ತು ದಿನಗಳ ಕಾಲ ಸಮಯ ಇರುತ್ತದೆ .ಆದರೆ 9 ದಿನಗಳ ಆದ ನಂತರ ರಾಜೀನಾಮೆಯನ್ನು ಕೊಟ್ಟಿದ್ದ ಪತ್ರವನ್ನು ವಾಪಾಸ್ ಪಡೆದು ಯಾವ ಸದಸ್ಯರಿಗೆ ಗೊತ್ತಿಲ್ಲದೆ ತೆಗೆದುಕೊಂಡು ಬಂದಿದ್ದರು.
ಈ ಸಾಮಾನ್ಯ ಸಭೆಯಲ್ಲಿ ಪ್ರಾರಂಭವಾದ ಹಂತದಲ್ಲಿ ಮುಸ್ಸನಾಳ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ನಾಯ್ಕ್ ರವರು ಬಿಜೆಪಿ ಪಕ್ಷದ ಗೋವಿಂದರಾಜ ಅನ್ನುವ ಸದಸ್ಯರಿಗೆ ಮತ್ತು ಅಧ್ಯಕ್ಷರಿಗೆ ನೀವು ಮಾತಿನ ತಕ್ಕಂತೆ ಅಧ್ಯಕ್ಷರ ಗಾದಿಗೆ ರಾಜೀನಾಮೆ ಕೊಡಬೇಕಾಗಿತ್ತು. ಯಾಕೆ ಕೊಡಲಿಲ್ಲ ಎಂದು ಪ್ರಶ್ನೆಗೆ ಕೇಳಿದಾಗ ಅಧ್ಯಕ್ಷರು ನಾನು ರಾಜೀನಾಮೆ ಕೊಡಲ್ಲ ಅಂತ ಅಂದ ತಕ್ಷಣ ಪ್ರಕಾಶ್ ನಾಯಕರು ನೀವು ರಾಜೀನಾಮೆ ಕೊಡಲಿಲ್ಲ ಅಂದರೆ ಈ ಸಾಮಾನ್ಯ ಸಭೆಯು ನಡೆಯುವುದು ಬೇಡ ಎಂದು, ಈ ಸಾಮಾನ್ಯ ಸಭೆಯಿಂದ ಹೊರಗಡೆ ನಡೆದರು. ಗ್ರಾಮ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ಅವರು ಮಧ್ಯಪ್ರವೇಶಿಸಿ, ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರನ್ನು ಸಾಮಾನ್ಯ ಸಭೆಗೆ ಕರೆದರು, ಬಂದಾದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು ಮದ್ಯ ಮಾತಿನ ಚಕಮುಕಿ ನಡೆಯಿತು.
ಮಾತನ್ನು ಮುಂದುವರಸಿ ಪ್ರಕಾಶ್ ನಾಯ್ಕ್ ನೇರವಾಗಿ ಅಧ್ಯಕ್ಷರನ್ನ ನೀವು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೀರಿ, ನೀವು ಈಗ ರಾಜೀನಾಮೆ ಕೊಡಬೇಕು ಎಂದು ಪ್ರಶ್ನೆ ಕೇಳಿದಾಗ, ಅಧ್ಯಕ್ಷರಾದ ಶ್ರೀಮತಿ ಅನಿತಾ ರವರು ನಾನು ರಾಜೀನಾಮೆ ಕೊಡಲ್ಲ ಎಂದು ಖಡ ಖಂಡಿತವಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರುಗಳಿಗೆ ಹೇಳಿದಾಗ, ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳು ನಾವು ಕೂಡ ರಾಜಕೀಯ ಮಾಡುತ್ತೇವೆ ಕಾನೂನು ರೀತಿಯಿಂದ ಮಾತು ತಪ್ಪಿದವರಿಗೆ ನಾವೆಲ್ಲ ಸೇರಿ ಪಾಠವನ್ನು ಕಲಿಸುತ್ತೇವೆ ಇನ್ನು ಮುಂದೆ ಎಂದು ಈ ಸಭೆಯಿಂದ ಹೊರ ನಡೆದ ಘಟನೆ ನಡೆಯಿತು. ಈ ಸಾಮಾನ್ಯ ಸಭೆಯು ಸಹ ಅಲ್ಲಿಗೆ ಮೊಟಕು ಗೊಂಡಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀಮತಿ ಅನಿತಾ ,ಮಾಜಿ ಉಪಾಧ್ಯಕ್ಷರಾದ ನಾಗೇಶ್ ನಾಯಕ್, ಮುಸನಾಳ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ನಾಯಕ್, ಗಂಜಿನಳ್ಳಿ ಪ್ರವೀಣ್ ,ಪ್ರೀತಿ, ಗೋವಿಂದರಾಜ್, ಪಿಡಿಒ ವಿಜಯಕುಮಾರ್, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *