ಬೆಂಗಳೂರು ಜುಲೈ 7 ದಾವಣಗೆರೆ ಜಿಲ್ಲೆ, ದಾವಣಗೆರೆಯಲ್ಲಿ ಆಗಸ್ಟ್ 3ನೇ ತಾರೀಖಿನಂದು ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಸಿದ್ದರಾಮಯ್ಯನವರ 75ನೇ ವರ್ಷದ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕೆ ಎನ್ ರಾಜಣ್ಣನವರು ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿಜಿ ಶಾಂತನಗೌಡರವರನ್ನ 3 /8/ 2022ನೇ

ಬುಧವಾರದಂದು ನಡೆಯುವ ಕಾರ್ಯಕ್ರಮದ ಆಹಾರ ಸಮಿತಿಯ 14 ಜನರ ಕಮಿಟಿಯಲ್ಲಿ ಸದಸ್ಯರನ್ನಾಗಿ ಶ್ರೀಯುತರನ್ನ ಆಯ್ಕೆ ಮಾಡಿ ಮಾನ್ಯ ಗೌರವ ಅಧ್ಯಕ್ಷರು ಅಧ್ಯಕ್ಷರು ಅನುಮೋದನೆ ಮೇರೆಗೆ ಆದೇಶ ಹೊರಡಿಸಿ ಜವಾಬ್ದಾರಿಯನ್ನು ನೀಡಿದೆ ಎಂದು ಶ್ರೀ ಸಿದ್ದರಾಮಯ್ಯ 75ನೇ ಅಮೃತ ಮಹೋತ್ಸವ ಸಮಿತಿಯ ಕಾರ್ಯದರ್ಶಿಯವರಾದ ಸನ್ಮಾನ್ಯ ಶ್ರೀ ಬಸವರಾಜ್ ರಾಯರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ.
