ದಾವಣಗೆರೆ: ದಾವಣಗೆರೆ ನಗರದ ಸಂತಪೌಲರ
ವಿದ್ಯಾಸಂಸ್ಥೆಯು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ
ಅಮೃತ ಮಹೋತ್ಸವದ ಅಂಗವಾಗಿ ಎಸ್.ಎಸ್.ಕೇರ್ ಟ್ರಸ್ಟ್
ಹಾಗೂ ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯ ಮತ್ತು
ಬಾಪೂಜಿ ಆಸ್ಪತ್ರೆ ಹಾಗೂ ಎಸ್.ಎಸ್.ವೈದ್ಯಕೀಯ
ಮಹಾವಿದ್ಯಾಲಯ ಮತ್ತು ಎಸ್.ಎಸ್. ಆಸ್ಪತ್ರೆ ಮತ್ತು ಬಾಪೂಜಿ
ಡೆಂಟಲ್ ಕಾಲೇಜು, ಕಾಲೇಜು ಆಫ್ ಡೆಂಟಲ್ ಸೈನ್ಸ್ ವತಿಯಿಂದ ಉಚಿತ
ಆರೋಗ್ಯ ತಪಾಸಣಾ ಶಿಬಿರವನ್ನು ಇಂದು ಮತ್ತು ನಾಳೆ
ಸಂತಪೌಲರ ವಿದ್ಯಾಸಂಸ್ಥೆಯ ಆವರಣದಲ್ಲಿ
ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರಕ್ಕೆ ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕರಾದ
ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರು ಚಾಲನೆ ನೀಡಿ
ಮಾತನಾಡಿ ಶಿಬಿರದಲ್ಲಿ ರಕ್ತ ತಪಾಸಣೆ, ಕಣ್ಣಿನ ತಪಾಸಣೆ,
ಸ್ತನ ಆರೋಗ್ಯ ತಪಾಸಣೆ, ದಂತ ತಪಾಸಣೆ ಹಾಗೂ
ಡಯಾಬಿಟಿಕ್ ನ್ಯೂರೋ ಥೆರಪಿ ಚಿಕಿತ್ಸೆ ಮಾಡಲಾಗುವುದು
ಎಂದರು.
ಈಗಾಗಲೇ ದಾವಣಗೆರೆ ನಗರ ಮತ್ತು ಗ್ರಾಮಾಂತರ
ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಶಿಬಿರಗಳನ್ನು
ನಡೆಸುವ ಮೂಲಕ ಆರೋಗ್ಯ ದಾವಣಗೆರೆ ಮಾಡಲಾಗಿದೆ.
ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡುವುದರ ಜೊತೆಗೆ
ಔಷದೋಪಚಾರವನ್ನು ಉಚಿತವಾಗಿ ಒದಗಿಸಲಾಗಿದೆ ಎಂದ
ಅವರು ಇಂದು ಮತ್ತು ನಾಳೆ ನಡೆವ ಈ ಶಿಬಿರದ
ಸದುಪಯೋಗವನ್ನು ನಾಗರೀಕರು
ಪಡೆದುಕೊಳ್ಳುವಂತೆ ವಿನಂತಿಸಿದರು.
ಸಂತಪೌಲರ ವಿದ್ಯಾಸಂಸ್ಥೆಯ ಹಳೇ ವಿದ್ಯಾರ್ಥಿಗಳ
ಸಂಘದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ
ಅಧ್ಯಕ್ಷತೆಯಲ್ಲಿ ನಡೆದ ಈ ಶಿಬಿರದಲ್ಲಿ 300ಕ್ಕೂ ಹೆಚ್ಚು
ಜನರನ್ನು ತಪಾಸಣೆಗೊಳಪಡಿಸಲಾಯಿತು. ಹೆಚ್ಚಿನ
ಚಿಕಿತ್ಸೆಗೂ ಸಹ ಶಿಫಾರಸ್ಸು ಮಾಡಲಾಗಿದೆ.
ಈ ಸಂದರ್ಭದಲ್ಲಿ ಜೆ.ಜೆ.ಎಂ.ವೈದ್ಯಕೀಯ
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ಎಸ್.ಬಿ.ಮುರುಗೇಶ್,
ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ||
ಕುಮಾರ್, ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯದ
ವೈದ್ಯಕೀಯ ನಿರ್ದೇಶಕ ಡಾ|| ಅರುಣಕುಮಾರ್,
ಪ್ರಾಂಶುಪಾಲರಾದ ಡಾ|| ಬಿ.ಎಸ್.ಪ್ರಸಾದ್, ಡಾ|| ಲತಾ, ಡಾ||
ಸುಶಾಂತ್, ಡಾ|| ಪ್ರಶಾಂತ್, ವಿದ್ಯಾಸಂಸ್ಥೆಯ ಸಿಸ್ಟರ್ ಅಲ್ಬಿನಾ,
ಸಿಸ್ಟರ್ ಮಾರ್ಜರಿ, ಸಿಸ್ಟರ್ ಸಮಂತಾ, ಶ್ರೀಮತಿ ಮೋನಿಕಾ,
ರವೀಂದ್ರ ಸ್ವಾಮಿ ಶ್ರೀಮತಿ ಎನ್.ಕೆ.ಮಂಜುಳಾ, ಫಿಲೋಮಿನಾ
ಮತ್ತಿತರರಿದ್ದರು.