ಹೊನ್ನಾಳಿ:
ತಾಲೂಕಿನ ಅರಬಗಟ್ಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಟಿ. ನಾಗರತ್ನ “ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್ ನರ್ಸಸ್ ಪ್ರಶಸ್ತಿ”ಗೆ ಭಾಜನಾರಾಗಿದ್ದಾರೆ.
ದ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ, ದ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸಹಯೋಗದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಆರೋಗ್ಯ ಇಲಾಖೆಯ ಅತ್ಯಮೂಲ್ಯವಾದ ಕೊಡುಗೆ, ಪ್ರಾಮಾಣಿಕ ಸೇವೆ, ರೋಗಿಗಳ ಬಗ್ಗೆ ತೆಗೆದುಕೊಂಡ ಕಾಳಜಿ, ಸರಕಾರಿ ಸೌಲಭ್ಯಗಳ ನೀಡುವಿಕೆ, ಮೆಡಿಕಲ್ ಹೆಲ್ತ್ ಕಮ್ಯೂನಿಟಿಯಲ್ಲಿ ಉತ್ತಮ ಭಾಗವಹಿಸುವಿಕೆ ಸೇರಿದಂತೆ ಇತರ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಟಿ. ನಾಗರತ್ನ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಇಂಟರ್‍ನ್ಯಾಷನಲ್ ನರ್ಸಸ್ ಡೇ ಸೆಲೆಬ್ರೇಷನ್ ಅಂಗವಾಗಿ ಬೆಂಗಳೂರಿನ ಬಿಎಂಸಿಆರ್‍ಐ ಆಡಿಟೋರಿಯಂನಲ್ಲಿ ಭಾನುವಾರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಟಿ. ನಾಗರತ್ನ ಅವರು ಫ್ಲಾರೆನ್ಸ್ ನೈಟಿಂಗೇಲ್ ನರ್ಸಸ್ ಪ್ರಶಸ್ತಿ-2022ನ್ನು ಸ್ವೀಕರಿಸಿದರು. ಪ್ರಶಸ್ತಿಯೊಂದಿಗೆ ಚಿನ್ನದ ಪದಕ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.
ಅಭಿನಂದನೆ:
ಟಿ. ನಾಗರತ್ನ ಅವರು ಉತ್ತಮ ಕೆಲಸಗಾರರು. ಅವರ ನೈಜ ಕಾಯಕಕ್ಕೆ ಪ್ರಶಸ್ತಿ ಲಭಿಸಿದೆ. ಇದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.