ಹುಣಸಘಟ್ಟ :ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಸಾಸ್ವೆಹಳ್ಳಿ, ಮಲ್ಲಿಕಟ್ಟೆ, ಹುಣಸಘಟ್ಟ, ಕ್ಯಾಸಿನಕೆರೆ, ಲಿಂಗಾಪುರ, ಹನಗವಾಡಿ, ಹೊಸಹಳ್ಳಿ, ರಾಂಪುರ ಸೇರಿದಂತೆ ಹೋಬಳಿ ವಿವಿಧಡೆ ಮುಸ್ಲಿಂ ಬಾಂಧವರು ಭಾನುವಾರ ಹೊಸ ಬಟ್ಟೆ ಧರಿಸಿ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹುಣಸಘಟ್ಟ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಭಾನುವಾರ ಬೆಳಿಗ್ಗೆ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಜಾಮಿಯಾ ಮಸೀದಿ ಧರ್ಮ ಗುರು ಮೌಲಾನಾ ಅನ್ಸರ್ ಆಲಿ ಮಾತನಾಡಿ ರಂಜಾನ್ ತಿಂಗಳ ಉಪವಾಸದ ಬಳಿಕ ಈ ದುಲ್ ಫಿತ್ರ್ ಹಬ್ಬ ಆಚರಿಸುವುದಾದರೆ ಇಸ್ಲಾಮಿಕ್ ಕ್ಯಾಲೆಂಡರಿನ ದುಲ್ ಹಜ್ಜ್ ತಿಂಗಳ10 ರಂದು ಬಕ್ರೀದ್ ಆಚರಣೆ ನಡೆಯುತ್ತದೆ. ನಾಲ್ಕು ಸಾವಿರ ವರ್ಷಗಳಿಗೂ ಹಿಂದೆ ಹುಟ್ಟಿದ ಪ್ರವಾದಿ ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸುವುದು ಬಕ್ರೀದ್ ನ ಮುಖ್ಯ ಆಶಯ. ಇಬ್ರಾಹಿಂ ಅವರು ಪ್ರವಾದಿ ಮಹಮ್ಮದ್ ಅವರಿಗಿಂತ ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದರು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಸೋದರತ್ವ ಬೆಳೆಸುವುದು ದೇವನಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ ಎಂದರು.
ಹೊನ್ನಾಳಿ ಪಿಎಸ್ಐ ಬಸನಗೌಡ ಕೋಟೂರು ಹುಣಸಘಟ್ಟ ಗ್ರಾಮದ ಜಾಮಿಯಾ ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿ, ಎಲ್ಲರೂ ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಸಾಸ್ವೆಹಳ್ಳಿ ಪಿಎಸ್ಐ ಪರಶುರಾಮಪ್ಪ, ಪೊಲೀಸ್ ಇಲಾಖೆಯ ಯೋಗೀಶ್, ಪ್ರಸನ್ ಕುಮಾರ್, ಜಗದೀಶ್, ರಂಗನಾಥ, ಜಾಮಿಯಾ ಮಸೀದಿ ಕಾರ್ಯದರ್ಶಿ ಹಿದಾಯಿತ್ ಗ್ರಾ ಪಂ ಸದಸ್ಯ ರೋಷನ್ ಜಮೀರ್ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಫೋಟೋ ಸುದ್ದಿ 1: ಹುಣಸಘಟ್ಟ ಗ್ರಾಮದ ಜಾಮಿಯಾ ಮಸೀದಿಗೆ ಭಾನುವಾರ ಹೊನ್ನಾಳಿ ಪಿಎಸ್ಐ ಬಸವನಗೌಡ ಕೋಟೂರು ಭೇಟಿ ನೀಡಿ ಮುಸ್ಲಿಂ ಬಾಂಧವರಿಗೆ ಶಾಂತಿಯುತವಾಗಿ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ತಿಳಿಸಿದರು.