ಹೊನ್ನಾಳಿ:
ತ್ಯಾಗ-ಬಲಿದಾನಗಳ ಸಂಕೇತ ಬಕ್ರೀದ್ ಹಬ್ಬವನ್ನು ಮುಸ್ಲಿಮರು ತಾಲೂಕಿನ ವಿವಿಧೆಡೆಗಳಲ್ಲಿ ಪಾರಂಪರಿಕ ಶ್ರದ್ಧಾ-ಭಕ್ತಿಗಳಿಂದ ಆಚರಿಸಿದರು.
ತಾಲೂಕಿನ ಕುಂದೂರು ಗ್ರಾಮದ ಹೊರವಲಯದಲ್ಲಿ ಮುಸ್ಲಿಮರು ಭಾನುವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಯಸ್ಕರು-ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
ಮೌಲಾನಾ ಹಾಶಿಮ್ ರಝಾ, ಹಜರತ್ ಮಸೀದಿಯ ಅಧ್ಯಕ್ಷರಾದ ಡಾ. ಅಬು ಸಲೇಹ, ಕಾರ್ಯದರ್ಶಿ ಮಹಮ್ಮದ್ ರಫಿ, ನೂರಾನಿ ಮಸೀದಿಯ ಅಧ್ಯಕ್ಷರಾದ ಫಾತ ಮಹಮ್ಮದ್, ಕಾರ್ಯದರ್ಶಿ-ಕುಂದೂರು ಗ್ರಾಪಂ ಅಧ್ಯಕ್ಷರಾದ ರಹಮತ್ ಉಲ್ಲಾ ಖಾನ್ ಇತರರು ಇದ್ದರು.