ಹುಣಸಘಟ್ಟ: ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಿದ್ದು ರೈತರು ಬೆಳೆ ಸಮೀಕ್ಷೆ ಹ್ಯಾಪ್ ಮೂಲಕ ಕಳೆದ ಬಾರಿಯಂತೆ ಈ ಬಾರಿಯೂ ತಮ್ಮ ಜಮೀನಿನ ವಿವರಗಳನ್ನು ದಾಖಲಿಸಿ ನಿಗದಿತ ಅವಧಿಯೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕೆಂದು ಸಾಸ್ವೆಹಳ್ಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಶಶಿಧರ ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿ ಮಂಗಳವಾರ ರೈತರಿಗೆ ಮೊಬೈಲ್ ಹ್ಯಾಪ್ ಮೂಲಕ ಬೆಳೆ ಸಮೀಕ್ಷೆ ಜಾಗೃತಿ ಅರಿವು ಮೂಡಿಸಿ ರೈತರ ಜಮೀನುಗಳಿಗೆ ತೆರಳಿ ರೈತರ ಮೊಬೈಲ್ಗಳ ಮೂಲಕ ಬೆಳೆ ವರದಿ ದಾಖಲಿಸಿ ಮಾತನಾಡಿದ ಅವರು ಪ್ಲೇ ಸ್ಟೋರ್ ನಲ್ಲಿ ರೈತರ ಬೆಳೆ ಸಮೀಕ್ಷೆ 2022-23 ಹ್ಯಾಪ್ ಡೌನ್ ಮಾಡಿಕೊಂಡು ಆರ್ಥಿಕ ವರ್ಷ ಮತ್ತು ಋತು ದಾಖಲಿಸಬೇಕು. ರೈತರ ಹೆಸರು ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದು, ನಂತರ ನಮೂದಿಸಿದ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಓಟಿಪಿ ಯನ್ನು ದಾಖಲಿಸಿ ಬೇಳೆ ವಿವರ ಪಾಣಿ ಮತ್ತು ಮಾಲೀಕರ ವಿವರ ಮೊದಲಾದವುಗಳನ್ನು ಮಾಹಿತಿ ನೀಡಿ ಬೆಳೆ ಸರ್ವೆ ಪ್ರಾರಂಭಿಸಲು ಕ್ಲಿಕ್ ಮಾಡುವುದು ಜಿಲ್ಲೆ ತಾಲೂಕು ಗ್ರಾಮ ಆಯ್ಕೆಮಾಡಿ ಸರ್ವೇ ನಂಬರ್ ನಮೂದಿಸಿ ಮಾಲೀಕರ ಪರ ಇನ್ನೊಬ್ಬರು ಬೆಳೆ ದಾಖಲೆ ಮಾಡುತ್ತಿದ್ದರೆ, ರೈತರ ಪರವಾಗಿ ಬೆಳೆ ಮಾಹಿತಿ ದಾಖಲಿಸುತ್ತಿದ್ದೇನೆ ಎಂದು ಆಯ್ಕೆ ಮಾಡಬೇಕು ಎಂದರು.
ಸದರಿ ರೈತರ ಮೊಬೈಲ್ ನಂಬರ್ ದಾಖಲಿಸಿ ಮಾಹಿತಿಯನ್ನು ಡೌನ್ಲೋಡ್ ಮಾಡಿ ಸದರಿ ರೈತರ ಹೊಲಕ್ಕೆ ಹೋಗಿ ಸರ್ವೇ ನಂಬರ್ ಗಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಸೇರಿಸಬೇಕು ಎಂದರು.
ಸಮೀಕ್ಷೆ ಏಕೆ ಬೇಕು?: ಬೆಳೆ ಸಾಲ ಬೆಳೆ ವಿಮೆ ಬೆಂಬಲ ಬೆಲೆ ಸಮೀಕ್ಷೆ ಬಳಸಲಾಗುತ್ತದೆ. ಮೊಬೈಲ್ ಹ್ಯಾಪ್ ಬಳಸಲು ನಿಮ್ಮ ಗ್ರಾಮಕ್ಕೆ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆಯಬಹುದು ಎಂದರು.
ಮೊಬೈಲ್ ಹ್ಯಾಪ್ ಸಮೀಕ್ಷೆಯಲ್ಲಿ ಕಂದಾಯ ಇಲಾಖೆಯ ಮಹಾಬಲೇಶ್, ಕೃಷಿ ಇಲಾಖೆಯ ಸಿಬ್ಬಂದಿಗಳಾದ ಸುಮಾ ಕುಬೇರ ನಾಯಕ, ಅಬ್ದುಲ್ ಗನಿ, ರೈತ ಮುಖಂಡರುಗಳಾದ ಆರ್ ಜಿ ಪರಮೇಶ್ವರಪ್ಪ ಪ್ರಕಾಶಯ್ಯ ಹಾಲೇಶಯ್ಯ ನರಸಿಂಹಪ್ಪ, ಆನಂದಪ್ಪಉಪಸ್ಥರಿದ್ದರು.