ಹೊನ್ನಾಳಿ,12: ಹೊನ್ನಾಳಿ ಶ್ರೀಮಾರಿಕಾಂಬ ಜಾತ್ರೆಯ ವಿಶೇಷತೆಯು ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಮಾರಿಗದ್ದಿಯಲ್ಲಿ ದೇವಿಗೆ ದೃಷ್ಟಿಬಟ್ಟು ಇಡುವ ಮೂಲಕ ಹಬ್ಬದ ಪ್ರಕ್ರಿಯೇ ಚಾಲನೆ ನಡೆಯಿತು.ಗೌಡರ ಮನೆಯಿಂದ ವಿವಿಧ ವಾದ್ಯಗಳ ಮೆರವಣಗೆ ಸಾಗಿ ನಂತರ ಗಾಳಿ ದುರ್ಗಮ್ಮ ದೇವರ ದರ್ಶನ ಪಡೆದು ನಾಡಿಗೆರ ಮನೆಗೆ ನಂತರ ಬುದ್ದಿವಂತರ ಮನೆತನದವರನ್ನು ದುರ್ಗಮ್ಮ ದೇವಾಸ್ಥಾನಕ್ಕೆ ಮೆರವಣಗೆಯಲ್ಲಿ ಕರೆತರಲಾಯಿತು.ನಂತರ ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮತಿ ಪದಧಿಕಾರಿಗಳು ಎಲ್ಲಾ ಸಮಾಜದ ಗಣ್ಯರು ಭಕ್ತರ ಸಮ್ಮುಖದಲ್ಲಿ ದೇವಿಗೆ ಮಾಂಗ್ಯಲ್ಯಧಾರಣೆಯನ್ನು ಗೌಡರ ಮನೆತನದವರು ನೆರವೇರಿಸಿದರು.
ವಿವಿಧ ಕಾರ್ಯಕ್ರಮ ನಡೆದ ನಂತರ ವಿವಿಧ ಮನೆತನಕ್ಕೆ ಸೇರಿದ ಜೋಗಮ್ಮ,ಜೋಗಪ್ಪಗಳನ್ನು ವಾದ್ಯಗಳೊಂದಿಗೆ ಗೌಡರ ಮನೆಗೆ ಕರೆತಂದು ಪಡ್ಲಿಗಿ ತುಂಬಿಸಲಾಯಿತು. ರಾತ್ರಿ 10 ಗಂಟೆ ನಂತರ ಶ್ರೀಮಾರಿಕಾಂಬ ದೇವಿಯನ್ನು ಕುಂಬಾರಕೇರಿ ದುರ್ಗಾಂಬಿಕ ದೇವಾಸ್ಥಾನದಿಂದ ವಿವಿಧ ವಾದ್ಯಗಳೋಮದಿಗೆ ನಗರದ ರಾಜಬೀದಿಗಳಲ್ಲಿ ಶ್ರೀಹಳದಮ್ಮ ದೇವಾಸ್ಥಾನ ಹಿಂಬಾಗದಲ್ಲಿರುವ ಗದ್ದಿಗೆ ಮಂಟಪಕ್ಕೆ ಕರೆ ತಂದು ಶ್ರೀ ದೇವಿಯನ್ನು ಮಹಾಮಂಗಳಾರತಿಯೊಂದಿಗೆ ಗದ್ದಿಗೆಗೊಳಿಸಲಾಗುವುದು. ನಂತರ ಮುಖಂಡರು ಹುಲುಸಿನ ಜೋಳವನ್ನು ರಾಶಿಹಾಕುವ ಕಾರ್ಯಕ್ರಮ ನಡೆಯಿತು, ಈ ದಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಮಾರಿಕಾಂಬ ದೇವಿ ಜಾತ್ರೆ ಮಹೋಹತ್ಸವ ಸಮಿತಿ ಗೌರವಧ್ಯಕ್ಷರಾದ ಬಿ.ಸಿದ್ದಪ್ಪ,ಹೆಚ್.ಎ.ಉಮಾಪತಿ,ಅಧ್ಯಕ್ಚಷ ಹೆಚ್.ಬಿ.ಶಿವಯೋಗಿ,ಬುದ್ದಿವಂತರ ರಮೇಶ್,ಮೂಲಿ ರೇವಣಸಿದ್ದಪ್ಪ ಇತರರು ಇದ್ದರು.ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತಂ ಗೌಡ್ರವರ ಹಿರಿಯ ಪುತ್ರರಾದ ಡಿ ಎಸ್ ಪ್ರದೀಪ್ ಗೌಡ್ರು ರವರು ಸಹ ಈ ಶ್ರೀಮಾರಿಕಾಂಬ ದೇವಿಯ ಪೂಜಾ ಕೈಂ ಕಾರ್ಯದಲ್ಲಿ ಭಾಗಿಯಾಗಿ ದೇವಿ ದರ್ಶನವನ್ನು ಪಡೆದರು.