ಹೊನ್ನಾಳಿ : ದಾವಣಗೆರೆ ಜಿಲ್ಲೆಯಲ್ಲೇ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಅತಿಹೆಚ್ಚು ಮಳೆಯಾಗುತ್ತಿದ್ದು ಅಧಿಕಾರಿಗಳು ಯಾವುದೇ ನಿರ್ಲಕ್ಷ ತೋರೆದೆ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾ ಉಸ್ತವಾರಿ ಸಚಿವ ಭೈರತಿ ಬಸವರಾಜ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಬುಧುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ಮಳೆಹಾನಿ ಬಗ್ಗೆ ವಿವಿಧ ಇಲಾಖಾವಾರು ಮಾಹಿತಿ ಪರಿಶೀಲ ನಡೆಸಿ ಅವರು ಮಾತನಾಡಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಹಾಗೂ ಯಾವುದೇ ಸಮಯದಲ್ಲಿ ಭದ್ರಾ ಜಲಾಶಯದಿಂದ ಸಭವವಿದ್ದು ತುಂಗಭದ್ರಾ ನದಿ ಪಾತ್ರದಲ್ಲಿರುವ ಜನರನ್ನು ತಕ್ಷಣವೇ ಸೂಕ್ತ ಸ್ಥಳಕ್ಕೆ ಸ್ಥಳಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಜೂನ್ 30 ವರೆಗೆ ಹೊನ್ನಾಳಿಯಲ್ಲಿ 194.5 ಮೀಮೀ ಇದ್ದು,ಆದರೇ ಇದೂವರೆಗೂ 437.2 ಮಿ.ಮೀ ಮಳೆಯಗಿರುತ್ತದೆ, ನ್ಯಾಮತಿ ತಾಲೂಕಿನಲ್ಲಿ ವಾಡಿಕೆ ಮಳೆ 236 ಮಿ.ಮೀ ಇದ್ದು 464.1 ರಷ್ಟು ಮಳೆಯಾಗಿದ್ದು ಎರಡು ತಾಲೂಕಿ ಸರಾಸರಿ ವಾಡಿಕೆ ಮಳೆ 175 ಮಿಮೀ ಇದ್ದು, 375.5 ರಷ್ಟುಯಾಗಿದ್ದು ಶೇ 114 ರಷ್ಟು ಹೆಚ್ಚು ಮಳೆಯಾಗಿದ್ದು, ಇನ್ನು ಹೆಚ್ಚು ಮಳೆಯಾಗುವ ಸಂಬಂಧವಿದ್ದು ಎಲ್ಲಾ ಅಧಿಕಾರಗಳು ಕರ್ತವ್ಯ ನಿಷ್ಟೇ ತೋರಿ ಪ್ರಾಮಾಣಿಕವಾಗಿ ಕೆಲಸ ಮಾಡ ಬೇಕೆಂದು ಸೂಚಿಸಿದರು.
ಇದೇ ವೇಳೆ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ,ತೀರ್ವ ಮಳೆಯಿಂದ ಈಗಾಗಲೇ ರೈತರು ಬಿತ್ತಿದ್ದ ಬೆಳೆಯನ್ನು ಕಳೆದಕೊಂಡಿದ್ದಾರೆ. ಮೂರು ಬಾರೀ ಬಿತ್ತನೆ ಕಾರ್ಯ ಮಾಡಿದ್ದು ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾದ ರೀತಿಯಲ್ಲಿ ಅಧಿಕಾರಿಗಳು ಸಮೀಕ್ಷೆ ಮಾಡಿ ವರದಿ ಸಲ್ಲಿಸ ಬೇಕೆಂದರು.
ಈ ಹಿಂದೆ ಮಳೆಯಾದಾಗ ಅಧಿಕಾರಿಗಳು ನನ್ನ ಜೊತೆ ಸಮರ್ಪಕ ಕೆಲಸ ಮಾಡಿದ್ದರು,ಆದರೇ ಅದರಲ್ಲಿ ಒಂದಿಬ್ಬರೂ ಮೈಗಳ್ಳರಿದ್ದು ಅವರು ಇದೇ ರೀತಿ ಮುಂದುವರೆದರೆ ನಾನು ಸಹಿಸುವುದಿಲ್ಲಾ ಎಂದು ಎಚ್ಚೆರಿಕೆ ನೀಡಿದ ಶಾಸಕರು, ಈ ಬಾರೀಯೂ ಮಳೆಯಾಗುತ್ತಿದ್ದು ಅಧಿಕಾರಿಗಳು ಭಾನುವಾರ,ಶನಿವಾರ,ಹಬ್ಬದ ದಿನ ಎನ್ನದೇ ಸೋಮಾರಿತನ ತೋರಿಸದೇ ಪ್ರಾಮಾಣಿಕ ಕೆಲಸ ಮಾಡ ಬೇಕೆಂದು ಖಡಕ್ ಎಚ್ಚರಿಕೆ ನೀಡಿದರು.
ಹೊನ್ನಾಳಿ ತಾಲೂಕಿನಲ್ಲಿ ಮಳೆಯಿಂದಾಗಿ ಮೂರು ಮನೆಗಳು ಸಂಪೂರ್ಣ ಧರೆಶಾಯಿಯಾಗಿದ್ದು,18 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದರು. ನ್ಯಾಮತಿ ತಾಲೂಕಿನಲ್ಲಿ 19 ಮನೆಗಳಿಗೆ ಭಾಶಃ ಹಾನಿಯಾಗಿದ್ದು ಈ ಎಲ್ಲಾ ಹಾನಿಯಾದ ಮನೆಗಳಿಗೆ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದರು.
ಕಳೆದ ಬಾರೀ ಉಂಟಾದ ಅವಳಿ ತಾಲೂಕಿನಲ್ಲಿ ಸಾಕಷ್ಟು ಹಾನಿಯಾಗಿದ್ದು ಈಗಾಗಲೇ ಹಾನಿಗೊಳಗಾದವರಿಗೆ ಸರ್ಕಾರದಿಂದ ಪರಿಹಾರವನ್ನು ನೇರವಾಗಿ ಅವರ ಖಾತೆಗೆ ಹಣ ಜಮ ಮಾಡಲಾಗಿದೆ ಎಂದ ಶಾಸಕರು, ಯಾವುದೇ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.
ಈಗಾಗಲೇ ತುಂಗಭದ್ರಾ ನದಿಮಟ್ಟ ಅಪಾಯದ ಮಟ್ಟಕ್ಕೆ ತಲುಪಿದ್ದು ನದಿಪಾತ್ರದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಅಗತ್ಯ ಬಿದ್ದರೇ ಕಾಳಜಿ ಕೇಂಧ್ರ ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ರೈತರಿಗೆ ಗೊಬ್ಬರದ ಬಗ್ಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೃಷಿ ಅಧಿಕಾರಿಗಳು ಕ್ರಮ ಕೈಗೊಳ್ಳುವುವಂತೆ ಸೂಚಿಸಿದ ಶಾಸಕರು, ಇದರಲ್ಲಿ ಪ್ರಮಾದ ಎಸಗಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ತರಾಟೆ : ತಾಲೂಕಿನ ಸಿಂಗಟಗೆರೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಬಳಿ ರಸ್ತೆಗೆ ಅಡ್ಡಲಾಗಿ ಮರದ ರೆಂಬೆ ಬಿದ್ದಿದ್ದು ಇದನ್ನು ತೆರವು ಮಾಡುವಂತೆ ಎಇಇ ಗಂಗಪ್ಪನವರಿಗೆ ಸೂಚಿಸಿದ್ದರೂ, ಅದನ್ನು ಕಾರ್ಯಗತ ಗೊಳಿಸಿರಲಿಲ್ಲಾ. ಇದಕ್ಕೆ ಕೆಂಡಾಮಂಡಲವಾದ ಶಾಸಕರು, ಏರು ಧ್ವನಿಯಲ್ಲಿ ಎಇಇಯನ್ನು ತರಾಟೆಗೆ ತೆಗದುಕೊಂಡದ್ದು ನಡೆಯಿತು.
ಜಿಲ್ಲಾಧಿಕಾರಿಗಳಿಗೆ ಸನ್ಮಾನ : ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಇದೀಗ ವರ್ಗಾವಣೆಯಾದ ಪ್ರಯುಕ್ತ ಇದೇ ಸಂದರ್ಭ ಅವರನ್ನು ಸನ್ಮಾನಿಸಿ ಬೀಳ್ಕೋಡಲಾಯಿತು.
ಈ ವೇಳೆ ಎಸ್ಪಿ ರಿಷ್ವಂತ್, ಸಿಇಓ ಡಾ|| ಚನ್ನಪ್ಪ, ಇಓ ರಾಮಬೋವಿ, ಅವಳಿ ತಾಲೂಕಿನ ತಹಶೀಲ್ದಾರ್‍ಗಳಾದ ರಶ್ಮಿ, ರೇಣುಕಾ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.