ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ
ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಇವರು ಜುಲೈ-2022ನೇ
ಮಾಹೆಯಲ್ಲಿ ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಜು.18 ರಂದು ಬೆಂಗಳೂರಿನಿಂದ ಸಂಜೆ 5 ಗಂಟೆಗೆ ಹೊರಟು
ರಾತ್ರಿ 8 ಗಂಟೆಗೆ ದಾವಣಗೆರೆಗೆ ಆಗಮಿಸಿ ವಾಸ್ತವ್ಯ
ಮಾಡುವರು.
ಜು.19 ರಂದು ಬೆ.11 ಗಂಟೆಗೆ ಜಿಲ್ಲಾಡಳಿತ ಭವನದ
ತುಂಗಾಭದ್ರ ಸಭಾಂಗಣದಲ್ಲಿ ದಾವಣಗೆರೆ ಜಿಲ್ಲಾಡಳಿತ
ಸಂಯುಕ್ತ ಆಶ್ರಯದಲ್ಲಿ ಚುನಾವಣಾ ಸುಧಾರಣಾ
ಕ್ರಮಗಳ ಬಗ್ಗೆ ಸಂವಾದ ನಡೆಸುವರು. ಮ.3.30ಕ್ಕೆ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ
ರವೀಂದ್ರನಾಥ್ ಇವರ ಕುರಿತಾದ ಪುಸ್ತಕ ಬಿಡುಗಡೆ
ಸಮಾರಂಭದಲ್ಲಿ ಭಾಗವಹಿಸುವರು. ನಂತರ ಸಂಜೆ 5
ಗಂಟೆಗೆ ರಾಣೆಬೆನ್ನೂರುಗೆ ಪ್ರಯಾಣ ಬೆಳೆಸುವರೆಂದು
ಅವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.