ಸಾಸ್ವೆಹಳ್ಳಿ: ಪರಸ್ಪರ ಸಹಕಾರದ ಜೀವನವು ಸುಂದರವಾಗುತ್ತದೆ. ಸಹಕಾರ ತತ್ವದಲ್ಲಿ ನಾವು ಜೀವಿಸಿದರೆ, ನಾವು ಬೆಳೆಯುತ್ತೇವೆ ನಮ್ಮೊಂದಿಗೆ ಇರುವವರು ಬೆಳೆಯುತ್ತಾರೆ ಎಂದು ಶಿವ ಕ್ರೆಡಿಟ್ ಕೊ ಅಪರೇಟಿವ್‌ ಸೊಸೈಟಿಯ ಅಧ್ಯಕ್ಷ ಎಂ.ಸಿ ನಾಗೇಂದ್ರಪ್ಪ ಹೇಳಿದರು.

ಇಲ್ಲಿನ ಶಿವ ಕ್ರಡಿಟ್ ಕೊ ಅಪರೇಟಿವ್‌ ಸೊಸೈಟಿ ಲಿಮಿಟೆಡ್‌ ಹೊನ್ನಾಳಿ ಇದರ ಸಾಸ್ವೆಹಳ್ಳಿ ಶಾಖೆಯ ನೂತನ ಕಟ್ಟಡದ ಗುದ್ದಲಿ ಪೂಜೆ ನೆರೆವೇರಿಸಿ ಅವರು ಮಾತನಾಡಿದರು.

ಹನಿ ಹನಿ ಗೂಡಿದರೆ ಹಳ್ಳ ಎಂಬಂತೆ ಕೆಲವೇ ಮಂದಿಯಿಂದ ಪ್ರಾರಂಭವಾದ ಶಾಖೆಯು ಮೊದಲು ಹೊನ್ನಾಳಿ ನಂತರ ಸುರಹೊನ್ನೆಯಲ್ಲಿ ಸ್ವಂತ ಕಟ್ಟಡವನ್ನು ಹೊಂದಿದೆ. ಅದೇ ರೀತಿ ಸಾಸ್ವೆಹಳ್ಳಿಯಲ್ಲಿಯೂ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಹಂತಕ್ಕೆ ಶಾಖೆಯು ಲಾಭಾಂಶ ತಂದಿದೆ. ಇದಕ್ಕೆ ಸರ್ವ ಸದಸ್ಯರು ಕಾರಣರಾಗಿದ್ದಾರೆ. ಷೇರುದಾರರ ಸಹಕಾರವು ಇದೆ ಅದ್ದರಿಂದ ಕುಂದೂರಿನಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶವನ್ನು ಖರೀದಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಡಿ.ಎಸ್‌ ಸುರೇಂದ್ರ ಗೌಡ, ಉಪಾಧ್ಯಕ್ಷ ವಿಕಾಸ್‌, ನಿರ್ದೇಶಕರುಗಳಾದ ಪಿ.ಬಿ ಶೈಲೇಶ್‌, ಆರ್.ಸಿ ಶಂಕರಗೌಡ, ಕೆ.ಶಿವಕುಮಾರ್‌, ಬಸವಲಿಂಗಪ್ಪ, ನಾಗರಾಜಪ್ಪ, ಕಾಂತರಾಜ್‌, ಎಂ.ಜಿ ಬಸವರಾಜಪ್ಪ, ಸಿದ್ದೇಶ್ವರಪ್ಪ, ಶಕುಂತಲಮ್ಮ ಹಾಗೂ ಸಾಧು ವೀರಶೈವ ಸಮಾಜದ ಅವಳಿ ತಾಲ್ಲೂಕಿನ ಅಧ್ಯಕ್ಷರುಗಳಾದ ಕೆ.ಎಸ್‌ ಹಾಲಪ್ಪ, ಜಿ.ಶಿವಪ್ಪ, ಮುಖಂಡ ಎಚ್‌.ಎ ಗದ್ದಿಗೇಶ್‌, ಬ್ಯಾಂಕ್‌ ಕಾರ್ಯನಿರ್ವಹಣಾಧಿಕಾರಿ ರುದ್ರೇಶ್‌ ಹಾಗೂ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *