ಹೊನ್ನಾಳಿ : ಮಲೆನಾಡು ಭಾಗಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಹೊನ್ನಾಳಿ ನಗರದ ಬಾಲರಾಜ್‍ಘಾಟ್‍ನ ಅಂಬೇಡ್ಕರ್ ಭವನದಲ್ಲಿ ಕಾಳಜಿ ಕೇಂದ್ರ ತೆರಯಲಾಗಿದ್ದು, ಅವಳಿ ತಾಲೂಕಿನ ಮೂರು ಕಡೆ ಕಾಳಜಿ ಕೇಂದ್ರ ತೆರೆಯಲು ಸಖಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದ ಬಾಲರಾಜ್ ಘಾಟ್‍ನಲ್ಲಿರುವ ಅಂಬೇಡ್ಕರ್ ಭವನದಲ್ಲಿರುವ ಹತ್ತು ಕುಟುಂಬಗಳಿಗೆ ತಲಾ ಹತ್ತು ಸಾವಿರ ಪರಿಹಾರದ ಚೆಕ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಬಾಲರಾಜ್‍ಘಾಟ್‍ನಲ್ಲಿರುವ ಅಂಬೇಡ್ಕರ್ ಭವದ ಕಾಳಜಿ ಕೇಂದ್ರದಲ್ಲಿ 20 ಕುಟುಂಬಗಳಿಂದ 111 ಜನರಿದ್ದು ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದ ಶಾಸಕರು, ಹೊನ್ನಾಳಿ ತಾಲೂಕಿನ ಗುರುಭವನ, ಸಾಸ್ವೇಹಳ್ಳಿಯ ವಿವೇಕಾನಂದ ಶಾಲೆ ಹಾಗೂ ಚೀಲೂರು ಗ್ರಾಮದ ಎಕೆ ಕಾಲೋನಿಯಲ್ಲಿರುವ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ಸೇರಿ ಒಟ್ಟು ಮೂರು ಕಡೆ ಕಾಳಜಿ ಕೇಂದ್ರ ತೆರಯಲು ಸಖಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ 9 ಮನೆಗಳಿಗೆ ತೀರ್ವ ಹಾನಿಯಾಗಿದ್ದು, 39 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದರು. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಬೆಳೆ ಹಾನಿಯ ಬಗ್ಗೆ ಅಧಿಕಾರಿಗಳು ಜಂಟಿ ಸರ್ವೇ ಮಾಡಲು ಸೂಚನೆ ನೀಡಿದ್ದೇನೆ ಎಂದರು.
ತುಂಗಭದ್ರಾ ನದಿಯ ಅಪಯಾದ ಮಟ್ಟ 11 ಮೀಟರ್ ಇದ್ದು, ಪ್ರಸ್ತುತ 11.3 ಮೀಟರ್ ನಷ್ಟು ನದಿ ಮೈದುಂಬಿ ಹರಿಯುತ್ತಿದ್ದು ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಮಾಹಿತಿ ನೀಡುವಂತೆ ಸೂಚನೆ ನೀಡಿದರು.
ಈ ಸಂದರ್ಭ ತಹಶೀಲ್ದಾರ್ ರಶ್ಮಿ, ಸಿಪಿಐ ದೇವರಾಜ್,ಪಿಎಸ್‍ಐ ಬಸವನಗೌಡ ಬಿರಾದರ್, ಪುರಸಭೆ ಅಧ್ಯಕ್ಷ ರಂಗನಾಥ್, ಮಾಜಿ ಅಧ್ಯಕ್ಷರು ಸದಸ್ಯರಾದ ಓಬಳದಾರ್ ಬಾಲು, ಕೆ.ವಿ.ಶ್ರೀಧರ್ ಸೇರಿದಂತೆ ಮತ್ತೀತತರರಿದ್ದರು.

Leave a Reply

Your email address will not be published. Required fields are marked *