2022-23ನೇ ಸಾಲಿಗೆ ಸಾಮಾನ್ಯ ನಿಧಿ ಕಾಯ್ದಿರಿಸಿದ ಶೇ.24.1210, ಶೇ.7.25, ಶೇ.5ರ ಅನುದಾನದಡಿ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ನೀಡಲು ಪ.ಜಾತಿ/ಪ.ಪಂಗಡಗಳ ಫಲಾನುಭವಿಗಳಿಂದ ಹಾಗೂ ಇತರೆ ಬಡ ಜನರ ಫಲಾನುಭವಿಗಳಿಂದ ಮತ್ತು ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ.ಜಾತಿಯ ಪಲಾನುಭವಿಗಳಿಗೆ ಪ.ಪಂಗಡದ ಫಲಾನುಭವಿಗಳಿಗೆ ತಾಲ್ಲೂಕು/ಜಿಲ್ಲಾ/ರಾಜ್ಯ/ರಾಷ್ಟ್ರಮಟ್ಟದ ಕ್ರೀಡೆ, ಕಲೆ, ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಹಧನ ಹಾಗೂ ವಿಕಲಚೇತನರಿಗೆ ಅವಶ್ಯವಿರುವ ಸಾಧನ/ಸಾಮಗ್ರಿಗಳನ್ನು ಒದಗಿಸುವ ಕಾರ್ಯಕ್ರಮಗಳನ್ನು ನೀಡಲಿದ್ದು, ಅರ್ಹ ಮತ್ತು ಆಸಕ್ತಿಯುಳ್ಳ ಫಲಾನುಭವಿಗಳು ತಮ್ಮ ಅರ್ಜಿಗಳನ್ನು ಆ.05 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದು. ನಿಗಧಿಗೊಳಿಸಿದ ದಿನಾಂಕ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಹಾಗೂ ಈ ಹಿಂದೆ ಸೌಲಭ್ಯ ಪಡೆದ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಎಂದು ಹೊನ್ನಾಳಿ ಪುರಸಭೆಯ ಮುಖ್ಯಾಧಿಕಾರಿ ಎಸ್.ಆರ್ ವೀರಭದ್ರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.