ನ್ಯಾಮತಿ : ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಡಿಸೆಂಬರ್ ಒಳಗಾಗೀ ಕಾಮಗಾರಿಯನ್ನು ಮುಗಿಸುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಪಟ್ಟಣದ ವಾಲ್ಮೀಕಿಬೀದಿ, ಕುಂಬಾರ್ ಬೀದಿ, ವೀರಭದ್ರೇಶ್ವರ ದೇವಾಸ್ಥಾನದ ಬೀದಿ, ಆಂಜನೇಯ ದೇವಸ್ಥಾನದ ಬೀದಿಗಳ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕವಾಗೀ ದೂರು ಬಂದ ಹಿನ್ನೆಲೆಯಲ್ಲಿ, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದು, ಡಿಸೆಂಬರ್‍ನಲ್ಲಿ ನ್ಯಾಮತಿ ಪಟ್ಟಣದಲ್ಲಿ ಊರ ಹಬ್ಬ ಇದ್ದು, ಡಿಸೆಂಬರ್ ಒಳಗಾಗೀ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಇದ್ದ ನ್ಯಾಮತಿಯನ್ನು ಪಟ್ಟಣಪಂಚಾಯಿತಿಯಾಗಿ ಮೇಲ್ಡರ್ಜೆಗೇರಿಸಿದ್ದು ನ್ಯಾಮತಿ ಪಟ್ಟಣವನ್ನು ಸುಂದರ ಪಟ್ಟಣವನ್ನಾಗಿಸಲು ಪಣ ತೊಟ್ಟಿದ್ದೇನೆ ಎಂದರು.
ನ್ಯಾಮತಿ ಪಟ್ಟಣಕ್ಕೆ ಶಾಶ್ವತವಾಗಿ ಶುದ್ದ ಕುಡಿಯುವ ನೀರು ಪೂರೈಕೆ ಮಾಡ ಬೇಕೆಂಬ ಉದ್ದೇಶದಿಂದ ಈಗಾಗಲೇ 45 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಗೆ 33 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದರು.
ಅದೇ ರೀತಿ ನಗರೋತ್ತಾನ ಯೋಜನೆಯಡಿ ನ್ಯಾಮತಿ ಪಟ್ಟಣಕ್ಕೆ ಆರು ಕೋಟಿ ಅನುದಾನ ಬಿಡುಗಡೆಯಾಗಿದ್ದು ನ್ಯಾಮತಿಯನ್ನು ಸುಂದರ ಪಟ್ಟಣವನ್ನಾಗಿಸುವುದು ನನ್ನ ಗುರಿ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳು ನನ್ನ ಎರಡು ಕಣ್ಣುಗಳು ಅವುಗಳ ಸಮಗ್ರ ಅಭಿವೃದ್ದಿ ನನ್ನ ಕನಸು ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದು ಅವಳಿ ತಾಲೂಕನ್ನು ರಾಜ್ಯದಲ್ಲೇ ಮಾದರಿ ತಾಲೂಕುಗಳನ್ನಾಗಿ ಮಾಡಲು ಪಣ ತೊಟ್ಟಿದ್ದೇನೆ ಎಂದರು.
ಈ ಸಂದರ್ಭ ಮಾಜಿ ತಾ.ಪಂ.ಅಧ್ಯಕ್ಷ ಎಸ್.ಪಿ.ರವಿಕುಮಾರ್, ಮುಖಂಡರಾದ ಎಸ್.ಕೆ.ರವಿಕುಮಾರ್, ಜಯರಾಂ ಸೇರಿದಂತೆ ಮತ್ತೀತತರಿದ್ದರು.

Leave a Reply

Your email address will not be published. Required fields are marked *