ಹೊನ್ನಾಳಿ,20: ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು,ಅವುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಬೂತ್ ಕಮಿಟಿ ಅಧ್ಯಕ್ಷರು ಮಾಡ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ಭಾರತೀಯ ಜನತಾ ಪಾರ್ಟಿ ಹೊನ್ನಾಳಿ ಮಂಡಲ ವತಿಯಿಂದ ಹೊನ್ನಾಳಿಯ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವದನಲ್ಲಿ ಹಮ್ಮಿಕೊಳ್ಳಲಾಗಿದ್ದ ಶಕ್ತಿ ಕೇಂದ್ರಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪಕ್ಷ ಸಂಘಟನೆ ಎಲ್ಲರ ಜವಾಬ್ದಾರಿಯಾಗಿದ್ದು, ಪಕ್ಷ ಕೊಟ್ಟಂತಹ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಬಾಯಿಸುವಂತೆ ಬೂತ್ ಕಮಿಟಿ ಅಧ್ಯಕ್ಷರಿಗೆ ಸೂಚಿಸಿದ ಶಾಸಕರು, ಆಯ ಬೂತ್‍ಗಳಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆದವರ ಪಟ್ಟಿ ಮಾಡುವಂತೆ ಸೂಚನೆ ನೀಡಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ 243 ಬೂತ್‍ಗಳಿದ್ದು,52 ಶಕ್ತಿ ಕೇಂದ್ರಗಳನ್ನು ಮಾಡಲಾಗಿದೇ ಎಂದ ಶಾಸಕರು ಎಲ್ಲರೂ ಪಕ್ಷ ಸಂಘಟನೆಯ ಕಡೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಿದರು.
ಇನ್ನೇನು ಚುನಾವನೆ ಸಮೀಪವಿದ್ದು ಮಿಷನ್ 150 ಟಾರ್ಗೆಟ್ ಇದ್ದು, ಎಲ್ಲರೂ ಶಕ್ತಿ ಮೀರಿ ಕೆಲಸ ಮಾಡುವ ಮೂಲಕ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸ ಬೇಕೆಂದರು.
ಸ್ವಾತಂತ್ರೋತ್ಸವದ 75 ವರ್ಷದ ಅಂಗವಾಗಿ ಆಗಸ್ಟ್ 15 ರಂದು ದೇಶದಲ್ಲಿ 20 ಕೋಟಿ ಕಾರ್ಯಕರ್ತರ ಮನೆಯ ಮೇಲೆ ರಾಜ್ಯದಲ್ಲಿ ಒಂದು ಕೋಟಿ ಕಾರ್ಯಕರ್ತರ ಮನೆಯ ಮೇಲೆ ತ್ರಿವರ್ಣಧ್ವಜ ಆರಿಸಲು ತೀರ್ಮಾನಿಸಲಾಗಿದೆ ಅಷ್ಟೇ ಅಲ್ಲದೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಆಗಸ್ಟ್ 1 ರಿಂದ 15 ರವರೆಗೆ 75 ಕಿಲೋ ಮೀಟರ್ ಬೈಕ್ ರ್ಯಾಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದ್, ದಿಶಾಕಮಿಟಿ ಸದಸ್ಯರು, ಜಿಲ್ಲಾಉಪಾಧ್ಯಕ್ಷ ಮಂಜುನಾಥ್, ಪ್ರಬಾರೀ ಕುಬೇರಪ್ಪ, ಸುರೇಂದ್ರನಾಯ್ಕ, ಜಿಲ್ಲಾ ಕಾರ್ಯದರ್ಶಿ ನಾಗರಾಜ್, ಕೆ.ವಿ.ಚನ್ನಪ್ಪ,ದಿಡಗೂರು ಪಾಲಾಕ್ಷಪ್ಪ, ಹರ್ಷಪಾಟೀಲ್,ಕುಳಘಟ್ಟ ರಂಗಪ್ಪ, ಎಸ್.ಪಿ.ರವಿಕುಮಾರ್ ಸೇರಿದಂತೆ ಮತ್ತೀತತರರಿದ್ದರು.

Leave a Reply

Your email address will not be published. Required fields are marked *