ಹೊನ್ನಾಳಿ,20: ತಾಲೂಕಿನ ಪ್ರತಿಯೊಬ್ಬ ಕಾರ್ಯಕರ್ತನೂ ಪಕ್ಷ ಸಂಘಟನೆಗೆ ಸಿಪಾಯಿ ಮತ್ತು ಸೈನಿಕನಂತೆ ಟೊಂಕ ಕಟ್ಟಿ ಹೋರಾಡಬೇಕು, ಆಗ ಮಾತ್ರ ತಾಲೂಕಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಕಾಂಗ್ರೆಸ್ ನ ಜಿಲ್ಲಾ ಉಸ್ತುವಾರಿ ಹಾಗೂ ಮಾಜಿ ಶಾಸಕ ಎಂ.ಸಿ.ವೇಣುಗೋಪಾಲ್ ಅವಳಿ ತಾಲೂಕು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಬುಧವಾರ ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದಿಂದ ಏರ್ಪಡಿಸಿದ ನವ ಸಂಕಲ್ಪ ಚಿಂತನಾ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದರು.
ಪಕ್ಷವನ್ನು ತಳಮಟ್ಟದಿಂದ ಪ್ರಬಲವಾಗಿ ಸಂಘಟಿಸಬೇಕು ಆ ಮುಖಾಂತರ 2023 ರ ಚುನಾವಣೆಯಲ್ಲಿ ಹೊನ್ನಾಳಿಯಿಂದಲ್ಲೂ ಕಾಮಗ್ರೆಸ್ ಶಾಸಕರಾಗಿ ಆಯ್ಕೆಯಾಗಬೇಕು, ಆ ನಿಟ್ಟಿನಲ್ಲಿ ನಾವುಗಳು ಹಗಲು ರಾತ್ರಿ ಎನ್ನದೆ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ವಿಶೇಷವಾಗಿ ಅವಳಿ ತಾಲೂಕಿನಲ್ಲಿ ಸೇವಾದಳ,ಮಹಿಳಾಮೋರ್ಚಾ,ಯುವ ಮೋರ್ಚಾ ಹಾಗೂ ಎನ್‍ಎಸ್‍ಯುಐ ಘಟಕಗಳು ಆಯಾಯ ಮೋರ್ಚಾಗಳ ಅಧ್ಯಕ್ಷಕರು ಪಕ್ಷ ಸಂಘಟನಗೆ ತೊಡಗಿಸಿಕೊಳ್ಳಬೇಕು, ಮುಂದಿನ ಸಭೆಗಳಲ್ಲಿ ನಡೆಯುವ ಕಾಂಗ್ರೆಸ್ ಸಭೆಯಲ್ಲಿ ಅತೀ ಹೆಚ್ಚು ಮಹಿಳೆಯರು ಉಪಸ್ಥಿತರಿರಬೇಕು, ಇವತ್ತಿನ ಸಭೆಯಲ್ಲಿ ಕೇವಲ ಇಬ್ಬರು ಮಾತ್ರ ಇರುವುದು ವಿಷಾಧನಿಯ ಎಂದರು.
ರಾಜ್ಯ ಪ್ರಧಾನಕಾರ್ಯದರ್ಶಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ಹೊನ್ನಾಳಿಯಲ್ಲಿ ಕಾಂಗ್ರೆಸ್ ಗೆಲವು ಸುಲಭ ಆದರೆ ನಮ್ಮ ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಎಲ್ಲರೂ ಒಟ್ಟಾಗಿ ಚುನಾವಣೆಯನ್ನು ಎದುರಿಸಿದರೆ ನಮ್ಮ ಪಕ್ಷದ ವತಿಯಿಂದ ಶಾಸಕರಾಗುವುದು ನಿಶ್ಚಿತ ಎಂದರು.
ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಚುನಾವಣೆಗೆ ಮುಂಚೆ ಭರವಸೆ ನೀಡಿದ್ದ ಎಲ್ಲಾ 166 ಪ್ರಣಾಳಿಕೆಯನ್ನು ಇಡೇರಿಸಿದ್ದು ದೇಶದಲ್ಲೇ ಮೊಟ್ಟಮೊದಲ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು,ಇಡೀ ದೇಶದಲ್ಲೇ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಇಡೇರಿಸಿದ್ದು ನಮ್ಮ ಪಕ್ಷದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು, ಇಡೀ ದೇಶದಲ್ಲೇ ಮೊದಲ ರಾಜ್ಯ ನಮ್ಮದು ಎಂಬ ಹೆಗ್ಗಳಿಕೆ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ತಿನ್ನುವ ಅನ್ನಕ್ಕೂ ( ಆಹಾರಕ್ಕೂ) ಜಿಎಸ್‍ಟಿ ತೆರಿಗೆ ಹಾಕಿ ಸಮಾನ್ಯ ನಾಗರಿಕರಿಗೂ ಕೇಂದ್ರ ಸರ್ಕಾರ ತೊಂದರೆಯನ್ನು ನೀಡುತ್ತಿದೆ,ಇಂಥ ಕೆಟ್ಟ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ನಾವು ನಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ನೋಡಿರಲಿಲ್ಲ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಎಲ್ಲಾ ರಂಗದಲ್ಲೂ ವಿಫಲವಾಗಿರುವುದರ ಜತೆಗೆ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ, ಈಗಲಾದರೂ ಯುವಕರು ಎಚ್ಚೆತ್ತುಕೊಂಡು ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಬೇಕು ಎಂದು ಕೇಂದ್ರದೆ ವಿರುದ್ಧ ಹಾರಿಹಾಯ್ದರು.
ದೇಶದಲ್ಲಿ ಆರ್ಥಿಕ ಪರಿಸ್ಥತಿ ಹದೆಗೆಡಲಿಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಕಾರಣ,ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ರುಪಾಯಿ ಮೌಲ್ಯ ಕುಸಿದಿರಲಿಲ್ಲ,ಈಗ ಡಾಲರ್ಸ್ ಮುಂದೆ ನಮ್ಮ ರುಪಾಯಿ ಬಾರೀ ಪಾತಾಳಕ್ಕೆ ಕುಸಿದಿದೆ,ಇದಕ್ಕೆ ಕೇಂದ್ರ ಸರ್ಕಾರದ ಆರ್ಥಿಕ ನೀತಿ ಕಾರಣ ಬಿಜೆಪಿ ಸರ್ಕಾರವನ್ನು ಟೀಕಿಸಿದರು.
ಬಾಕ್ಸ್ ; ಮುಂದಿನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸರಾಯಿ ಮರಾಟವನ್ನು ಮರು ಜಾರಿಗೆ ತರುತ್ತೇವೆ ಎಂದು ಘೋಷಣೆ ಮಾಡಿ ಎಂದು ತಾಲೂಕಿನ ಕೂಲಂಬಿ ಕಾಂಗ್ರೆಸ್ ಕಾರ್ಯಕರ್ತ ಮುಖಂಡರಿಗೆ ಒತ್ತಾಯಿಸಿದರು.ಜನ ಈ ಹಿಂದೆ ಕೂಲಿಗೆ ಬರುವವರು ದಿನಕ್ಕೆ 50 ರಿಂದ 100 ತೆಗೆದುಕೊಳ್ಳುತ್ತಿದ್ದರು, ಸರಾಯಿ ನಿಷೇದ ಮಾಡಿದ ಮೇಲೆ ಬ್ರಾಂದಿ ವಿಸ್ಕಿ ಕುಡಿಯುವುದಕ್ಕೆ ಪ್ರಾರಂಭಿಸಿದ ಮೇಲೆ ಕೂಲಿಗೆ ಬರುವವರಿಗೆ 400 ರಿಂದ 500 ವರೆಗೆ ಕೂಲಿ ಕೊಡಬೇಕಾಗಿದೆ,ಕಡಿಮೆ ಕೂಲಿ ಕೊಟ್ಟರೆ ಕೆಲಸಕ್ಕೆ ಬರುವುದಿಲ್ಲ ಆದ್ದರಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸರಾಯಿ ಮಾರಾಟವನ್ನು ಮರು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಬಾಕ್ಸ್ ; ಕೆಪಿಸಿಸಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅಥವಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರಿಗೆ ಕೊಟ್ಟರೂ ಕಾರ್ಯಕರ್ತರು ಹಾಗೂ ಮುಖಂಡರುಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿ ಗೆಲ್ಲಿಸಬೇಕು,ಲತಾ ಮಲ್ಲಿಕಾರ್ಜುನ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ.
ಕಾಂಗ್ರೆಸ್ ನ ರಾಜ್ಯ ವಕ್ತಾರ ನಿಖಿತ್ ಮೌರ್ಯ, ಮುಖಂಡರಾದ ಡಿ.ಬಸವರಾಜ್,ಎಚ್.ಎ.ಉಮಾಪತಿ,ಬಿ.ಸಿದ್ದಪ್ಪ,ಜಿ.ಪಂ. ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ್,ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಣ್ಣಕ್ಕಿ ಬಸವನಗೌಡ,ಗದ್ದಿಗೇಶ್,ಯುವ ಮುಖಡರಾದ ಮಧುಗೌಡ,ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ,ಎನ್‍ಎಸ್‍ಯುಐ ಅಧ್ಯಕ್ಷ ಮನು ವಾಲಜ್ಜಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಪುಷ್ಪಾ ಸೇರಿದಂತೆ ಅನೇಕ ಮುಖಂಡರು ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *