ನೇಪಾಳ : ಯೂತ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್‌ ಆರ್ಗನೈಜೇಶನ್ ಆಫ್ ನೇಪಾಳ & ಯೂತ್ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಅಸೋಸಿಯೇಷನ್ ಆಫ್ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ನೇಪಾಳ ಆರ್ಮಿ ಸ್ಟೇಡಿಯಂನಲ್ಲಿ ಜು. 19, 20ರಂದು ನಡೆದ ಇಂಡಿಯಾ ಮತ್ತು ನೇಪಾಳ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ 12 ರಿಂದ 16ನೇ ಬಾಲಕಿಯರ ವಿಭಾಗದಲ್ಲಿ ಹರಿಹರದ ಶ್ರೀ ಹರಿಹರೇಶ್ವರ ಯೋಗ ಮತ್ತು ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥೆಯ ಯೋಗಪಟು ಕು|| ಪ್ರಿಯಾ .ಕೆ.ಆರ್. ಇವಳು ಪ್ರಥಮ ಸ್ಥಾನಗಳಿಸುವುದರ ಮೂಲಕ ಸ್ವರ್ಣ ಪದಕವನ್ನು ಗಳಿಸಿದ್ದಾಳೆ.
ನೇಪಾಳ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಮತ್ತು ಸ್ಯಾನ್ ಅಧ್ಯಕ್ಷರಾದ ಭರತ್ ಖಡಕ ಇವರು ಕು|| ಪ್ರಿಯಾ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಯೋಗ ಶಿಕ್ಷಕರಾದ ಶ್ರೀಮತಿ ಸ್ವಪ್ನ ತರಬೇತಿಯನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಅಮಿತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಕು|| ಪ್ರಿಯಾ ಇವರಿಗೆ ಹರಿಹರದ ಕಾಳಿದಾಸ ವಿದ್ಯಾಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ.

Leave a Reply

Your email address will not be published. Required fields are marked *