ಹೊನ್ನಾಳಿ ಜುಲೈ 20 ತಾಲೂಕ್ ದಿಡಗೂರು ಗ್ರಾಮಸ್ಥ,ರಿಂದ ಸ.ನಂ 17, 19, 20, 22 ರ ಸ.ನಂ ಗೋಮಾಳ ಜಮೀನಾಗಿದ್ದು, ಸುಮಾರು 30 ರಿಂದ 40 ಎಕರೆ ಜಮೀನು ಇದ್ದ. ಈ ಜಮೀನಿನಲ್ಲಿ ಧನ ಕರುಗಳು ಮೇಯಲಿಕ್ಕೆ ಹಾಗೂ ರುದ್ರಭೂಮಿಗೆ ಅನುಕೂಲವಾಗುತ್ತಿದ್ದು. ಅಲ್ಲದೆ ದಿಡಗೂರು ಗ್ರಾಮದಲ್ಲಿ ಮಳೆ ಬಂದಾಗ ತುಂಗ ಭದ್ರ ನದಿಯಿಂದ ನೀರು ಬಂದು ಊರು ಮುಳುಗುತ್ತದೆ, ಹಾಗಾಗಿ ಅಲ್ಲಿನ ವಾಸಿಗಳಿಗೆ ವಾಸಿಸಲು ಗೋಮಾಳ ಜಮೀನು ಯೋಗ್ಯವಾಗಿರುವುದರಿಂದ ಈ ಸರ್ವೇ ನಂಬರ್ ನಲ್ಲಿ ಕೆಲವೊಬ್ಬರು ಅಡಿಕೆ ಸಸಿಯನ್ನು ನೆಟ್ಟು ಅಕ್ರಮವಾಗಿ ಉಳಿಮೆ ಮಾಡಲಿಕ್ಕೆ ಪ್ರಯತ್ನಿಸಿದ್ದು, ಆ ಜಾಗದಿಂದ ಅವರನ್ನು ತೆರವುಗೊಳಿಸಿ ಅದನ್ನು ತಡೆದು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಉದ್ದೇಶವನ್ನು ಇಟ್ಟುಕೊಂಡು ಸುಮಾರು ನೂರಾರು ದಿಡಗೂರು ಗ್ರಾಮಸ್ಥರು ಬಂದು ತಾಲೂಕ್ ಆಫೀಸ್ ಕಚೇರಿ ಎದುರುಗಡೆ ಪ್ರತಿಭಟನೆ ಮಾಡಿದ ಘಟನೆ ನಡೆಯಿತು. ನಂತರ ಪ್ರತಿಭಟನೆ ಸ್ಥಳಕ್ಕೆ ತಾಲೂಕು ಉಪ ವಿಭಾಗಾಧಿಕಾರಿಗಳಾದ ಹುಲ್ಲುಮನೆ ತಿಮ್ಮಣ್ಣನವರು ಬಂದು ಮನವಿ ಪತ್ರವನ್ನು ಸ್ವೀಕರಿಸಿ ಸ್ಥಳ ಪರಿಶೀಲನೆ ಮಾಡುವುದಾಗಿ ಹೇಳಿದ ನಂತರ ಪ್ರತಿಭಟನನ್ನು ವಾಪಸ್ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿಡಗೂರು ಪಾಲಾಕ್ಷಪ್ಪ ಎಜಿ ಪ್ರಕಾಶ್ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದೇಶ್ ಹಾಗೂ ದಿಡಗೂರು ಗ್ರಾಮದ ಗ್ರಾಮಸ್ಥರು ಸಹ ಭಾಗಿಯಾಗಿದ್ದರು.