ಹೊನ್ನಾಳಿ,22: ಭೋವಿ ಸಮಾಜದ ಲಿ.ಸಿದ್ದರಾಮೇಶ್ವರ ಸ್ವಾಮೀಜಿಯವರ 60 ವರ್ಷದ ರಾಜ್ಯ ಮಟ್ಟದ ವಜ್ರಮಹೋತ್ಸವ ಕಾರ್ಯಕ್ರಮ ಆಗಸ್ಟ್ 1 ರಂದು ದಾವಣಗೆರೆ ವೆಂಕಾಬೋವಿ ಕಾಲೋನಿಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಅಂತರ ರಾಜ್ಯದ ಬೋವಿ ಸಮಾಜದ ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ ಎಂದು ಬೋವಿ ಸಮಾಜದ ಚಿತ್ರದುರ್ಗ ಮತ್ತು ಬಾಗಲಕೋಟೆ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಅವರು ಹೊನ್ನಾಳಿ ನಗರದ ಬಸವರಾಜು ಅವರ ಮನೆಗೆ ಬೇಟಿ ನೀಡಿ ಮುಖಂಡರ ಜೊತೆ ಸಮಲೋಚನೆ ಸಭೆ ನಡೆಸಿ ಸುದ್ದಿಗಾರರ ಜೋತೆ ಮಾತನಾಡಿದ ಅವರು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಭೋವಿ ಸಮಾಜ ನೆಲಸಿರುವ ಗ್ರಾಮಗಳಿಗೆ ಬೇಟಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡುತ್ತಾ ದೇಶದ 20ಕ್ಕೂ ರಾಜ್ಯ ಮತ್ತು ಜಿಲ್ಲಾ ಹಾಗೂ ತಾಲೂಕುಗಳ ಲಕ್ಷೋಪಾದಿಯಲ್ಲಿ ಜನರು ಭಾಗವಹಿಸಲಿದ್ದು ಅನೇಕ ಕಲಾತಂಡಗಳಿಂದ ಕೂಡಿ ಒಂದು ರೀತಿ ಮೈಸೂರು ದಸರಾ ವೈಭವ ರೀತಿ ಲಿ.ಸಿದ್ದರಾಮೇಶ್ವರ ಸ್ವಾಮೀಜಿಯವರ 60 ವರ್ಷದ ರಾಜ್ಯ ಮಟ್ಟದ ವಜ್ರಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.
ಭಾರತದ ಪ್ರಾಚೀನ ಕಾಲದಿಂದೂ-ನಾಗರೀಕತೆ ನಾಗರೀಕರಣಕ್ಕೆ ಭೋವಿ ಸಮಾಜದ ಕೋಡಿಗೆ ಆಪಾರವಾದದ್ದು. ಪ್ರಾಚೀನ ಕಾಲದಿಂದಲೂ ಬೋವಿ ಸಮಾಜದವರು ರಸ್ತೆ,ಕೆರೆ ನಿರ್ಮಾಣ,ಮಠ.ಮಂದಿರ,ಮಹಾಲ್ ನಿರ್ಮಾಣ ಮಾಡಲು ಪ್ರಮುಖ ಪಾತ್ರವಹಿಸಿದ್ದಾರೆ,ವಚನ ಸಾಹಿತ್ಯದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಕಿಕೊಟ್ಟ ಕಾಯಕ ಯೋಗಿ ಫಥ. ಶರಣರು ಧರ್ಮದ ಹಾದಿಯಲ್ಲಿ ಹಾಕಿಕೊಟ್ಟಿರುವುದು ದಿಕ್ಸೂಚಿಯಾಗಿದೆ ಇದರಿಂದ ಮಧ್ಯ ಕರ್ನಾಟಕದಲ್ಲಿ ಭೋವಿ ಸಮಾಜದ ಜಾಗೃತಿಗೊಳಿಸಲು ಸಮಾಜದ ಕಟ್ಟಕಡೆ ಸಮಾಜವನ್ನು ಸಮ-ಸಮಾಜದಂತೆ ಡಾ.ಅಂಬೇಡ್ಕರ ಕೊಟ್ಟ ಸಾಮಾಜಿಕ,ಆರ್ಥಿಕ,ದಾರ್ಮಿಕ,ಸಾಂಸ್ಕøತಿಕ ನಿರ್ಮಾಣ ಮಾಡಲು ಮತ್ತು ಶಿಕ್ಷಣ ಮತ್ತು ಸಂಘಟನೆ ಗೋಳಿಸಲು ವಜ್ರಮಹೋತ್ಸ ಕಾರ್ಯಕ್ರಮ ನಾಎಂದಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬೋವಿ ಅಭಿವೃದ್ದಿ ನಿಗಮದ ನಿದೇರ್ಶಕ ಅಜ್ಜಯ್ಯ,ಬೋವಿ ಸಮಾಜದ ಜಿಲ್ಲಾಧ್ಯಕ್ಷ ಜಯಪ್ಪ,ಕಾರ್ಯಧ್ಯಕ್ಷ ಗೋಪಾಲಪ್ಪ,ಉಪಾಧ್ಯಕ್ಷ ಚಂದ್ರಪ್ಪ,ಜಗಳೂರು ತಾಲೂಕು ಅಧ್ಯಕ್ಷ ದೇವರಾಜ್,ಹೊನ್ನಾಳಿ ಘಟಕದ ಅಧ್ಯಕ್ಷ ನಾಗಪ್ಪ,ಯುವ ಮುಖಂಡ ಬಸವರಾಜ,ದಿನೇಶ್,ಕಾಂತರಾಜ,ಮಂಜಪ್ಪ,ಮೂರ್ತಪ್ಪ,ಟಿ.ಶ್ರೀನಿವಾಸ್,ಎ.ಬಿ.ನಾಗರಾಜ ಮುಖಮಡರು ಇದ್ದರು.

Leave a Reply

Your email address will not be published. Required fields are marked *