ನ್ಯಾಮತಿ : ನಾನು ಹುಲಿನೂ ಅಲ್ಲಾ, ಸಿಂಹನೂ ಅಲ್ಲಾ, ನಾನು ಅವಳಿ ತಾಲೂಕಿನ ಜನರ ಸೇವಕ. ಕೊನೆ ಉಸಿರಿರುವವರೆಗೂ ಅವಳಿ ತಾಲೂಕಿನ ಸೇವಕನಾಗೇ ಇರುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕುಂಕುವ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೇ ಕಾರ್ಯಕ್ರಮವಾಗಿದ್ದು ಅಧಿಕಾರಿಗಳು ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಬದಲು ಜನರ ಮನೆ ಬಾಗಿಲಿಗೆ ಬಂದು ಅವರ ಕಷ್ಟವನ್ನು ಕೇಳಿ ಸ್ಥಳದಲ್ಲೇ ಅವುಗಳಿಗೆ ಪರಿಹಾರ ನೀಡುವ ಮೂಲಕ ಜನರು ಸರ್ಕಾರಿ ಕಚೇರಿ ಅಲೆಯುವುದನ್ನು ತಪ್ಪಿಸಿದಂತಾಗಿದೆ ಎಂದರು.
ಸಾಮಾನ್ಯ ಶಿಕ್ಷಕನ ಮಗನನ್ನು ಅವಳಿ ತಾಲೂಕಿನ ಜನರು ಮೂರು ಬಾರೀ ಶಾಸಕನ್ನಾಗಿ ಮಾಡಿದ್ದೀರಿ, ನಾನು ಅವಳಿ ತಾಲೂಕಿನ ಅಭಿವೃದ್ದಿಗೆ ಹಿಂದೆ ಏನು ಕೆಲಸ ಮಾಡಿದ್ದೇನೆ, ಮುಂದೆ ಏನು ಕೆಲಸ ಮಾಡ ಬೇಕೆಂದು ನನು ಗುರಿಯೊಂದಿದ್ದು, ನನಗೆ ಓಟು ಹಾಕಿದ್ದು ಮನೆಗೆ ಮಲಗಲು ಅಲ್ಲಾ ನಾನು ಹಾಗೇ ಮಾಡಿದರೆ ಅದು ಮತದಾರರಿಗೆ ದ್ರೋಹ ಮಾಡಿದಂತೆ ಎಂದರು.
ರೇಣುಕಾಚಾರ್ಯನಿಗೆ ಅವಳಿ ತಾಲೂಕಿನ ಜನರು ಡಬಲ್ ಗುಂಡಿಗೆ ಕೊಟ್ಟಿದ್ದು, ಅವಳಿ ತಾಲೂಕಿನ ಅಭಿವೃದ್ದಿಗೆ ಮುಖ್ಯಮಂತ್ರಿಗಳ ಬಳಿ, ಸಚಿವರ ಬಳಿ ಜಗಳವಾಡಿ ಅನುದಾನವನ್ನು ಕೇಳುವ ಶಕ್ತಿ ಕೊಟ್ಟಿದ್ದೀರಿ, ನಾನು ಮುಖ್ಯಮಂತ್ರಿಗಳ ಬಳಿ ನನಗೆ ಮಂತ್ರಿ ಸ್ಥಾನ ಬೇಡ, ನನಗೆ ಕ್ಷೇತ್ರದ ಅಭಿವೃದ್ದಿಗೆ ಹಣ ಕೊಡಿ ಎಂದು ಕೇಳಿದ್ದೇನೆ ಎಂದರು.
ನನ್ನ ಬಗ್ಗೆ ಟೀಕೆ ಮಾಡುವವರು ಮಾಡಲಿ ನಾನು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲಾ, ನಾನು ನಿಮ್ಮ ಪ್ರೀತಿಯ ಪಳಗಿಸಿದ ಆನೆ ಎಂದರು, ಅವಳಿ ತಾಲೂಕಿನ ಜನರೇ ನನಗೆ ಅಂಕುಶ ಎಂದರು.
ಕೋವಿಡ್ ಸೆಂಟರ್‍ನಲ್ಲಿ ನಾನು ಜನರ ಮಧ್ಯೆ ಇದ್ದು ಅವರ ಜೊತೆ ಓಡಾಡಿಕೊಂಡು, ಅಲ್ಲೇ ವಾಸ್ತವ್ಯ ಮಾಡಿದ್ದೇ. ನಾನು ನನ್ನ ಕುಟುಂಬ ಅಂತಾ ಎಂದು ನೋಡಲಿಲ್ಲಾ ಅವಳಿ ತಾಲೂಕಿನ ಜನರು ಚೆನ್ನಾಗಿರ ಬೇಕೆಂದು ವಾಸ್ತವ್ಯ ಮಾಡಿದ್ದೇ,ನಾಟಕವಾಡುವುದಾಗಿದ್ದರೇ ನಾನು ಮಾಡ ಬಹುದಿತ್ತು, ಆದರೇ ನನಗೆ ಇಚ್ಚಾಶಕ್ತಿ ಇದ್ದು, ನನ್ನ ಪ್ರಾಣ ಇರುವವರೆಗೆ ಅವಳಿ ತಾಲೂಕ ಜನರ ಮನೆ ಮಗನಾಗಿರುತ್ತೇನೆಂದರು.
ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಅವಳಿ ತಾಲೂಕಿನಾಧ್ಯಂತ 4162.5 ಎಕರೆ ಬೆಳೆ ನಷ್ಟ ಉಂಟಾಗಿದ್ದು, ಸೋಮವಾರ ಅಧಿಕಾರಿಗಳ ಸಭೆ ಕರೆದಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬೆಳೆ ಕಳೆದುಕೊಂಡವರಿಗೆ, ಮನೆ ಹಾನಿಯಾದವರಿಗೆ ಸೂಕ್ತ ಪರಿಹಾರ ಕೊಡಿಸುವ ಬರವಸೆ ನೀಡಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಈಗಾಗಲೇ ಸಾವಿರಾರು ಕೋಟಿ ಅನುದಾನವನ್ನು ತಂದು ಅಭಿವೃದ್ದಿ ಮಾಡಿದ್ದು, ರಾಜ್ಯದ ಭೂಪಟದಲ್ಲಿ ಅವಳಿ ತಾಲೂಕಿನ ಚಿತ್ರಣವನ್ನೇ ಬದಲಿಸುವ ಗುರಿ ಹೊಂದಿದ್ದೇನೆಂದರು.
ಈಗಾಗಲೇ ನ್ಯಾಮತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ್ದು, ಶುದ್ದಕುಡಿಯುವ ನೀರು ಪೂರೈಕೆ ಮಾಡಲು 44 ಕೋಟಿ ಹಾಗೂ ಒಳಚರಂಡಿ ವ್ಯವಸ್ಥೆಗೆ 30 ಕೋಟಿ ಅನುದಾನ ಬಿಡುಗಡೆಯಾಗಿದೇ ಎಂದ ಶಾಸಕರು, ನ್ಯಾಮತಿ ಆಸ್ಪತ್ರೆಯನ್ನು 10 ಬೆಡ್‍ನಿಂದ 30 ಬೆಡ್‍ಗೆ ಮೇಲ್ದರ್ಜೆ ಗೇರಿಸಿದ್ದೇ, ಇದೀಗ 100 ಹಾಸಿಗೆ ಆಸ್ಪತ್ರೆ ಕೇಳಿದ್ದೇನೆ, ಅದೇ ರೀತಿ ಹೊನ್ನಾಳಿ ಆಸ್ಪತ್ರೆಯನ್ನು 250 ಬೆಡ್‍ಗೆ ಮೇಲ್ದರ್ಜೆಗೇರಿಸಲು ಮನವಿ ಮಾಡಿದ್ದು ಸದ್ಯದರಲ್ಲದೇ ಮೇಲ್ದರ್ಜೇಗೇರಿಸಲಾಗುವುದು ಎಂದ ಶಾಸಕರು ಕುಂಕುವ ಗ್ರಾಮದ ದಾಸರಹಟ್ಟಿ ದೇವಸ್ಥಾನದ ಯಾತ್ರಿ ನಿವಾಸಕ್ಕೆ 50 ಲಕ್ಷ ಅನುದಾನ ನೀಡುವ ಬರವಸೆ ನೀಡಿದ್ದು ಈಗಾಗಲೇ ಸಂಬಂಧ ಪಟ್ಟ ಸಚಿವರಿಗೆ ಮನವಿ ಮಾಡಿದ್ದು ಸದ್ಯದರಲ್ಲದೇ ಅನುದಾನ ಬಿಡುಗಡೆಯಾಗಲಿದೆ ಎಂದರು.
ನ್ಯಾಮತಿ ಪಟ್ಟಣದಲ್ಲಿ ನಾಲ್ಕು ರಸ್ತೆಗಳ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು ಸುಂದರವಾದ ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸುವ ಮೂಲಕ ನ್ಯಾಮತಿಯನ್ನು ಸುಂದರ ಪಟ್ಟಣವನ್ನಾಗಿಸುವುದು ನನ್ನ ಗುರಿ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 118 ಕೆರೆಗಳನ್ನು ತುಂಬಿಸುವ 518 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು ಸದ್ಯದರಲ್ಲದೇ ಅವಳಿ ತಾಲೂಕಿನ ಕರೆಗಳು ತುಂಬಲಿವೆ ಎಂದರು.
ವಸತಿ ಸಚಿವರಾದ ವಿ.ಸೋಮಣ್ಣ ಅವರ ಬಳಿ 2130 ಹೆಚ್ಚುವರಿ ಮನೆಗಳನ್ನು ಕೇಳಿದ್ದು, ಸೋಮಣ್ಣನವರು ಹೆಚ್ಚುವರಿ ಮನೆಗಳನ್ನು ನೀಡಿದ್ದಾರೆ ಎಂದರು.
ಅದ್ದೂರಿ ಮೆರವಣಿಗೆ : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಗಮಿಸುತ್ತಿದ್ದಂತೆ ಎತ್ತಿನಬಂಡಿಯಲ್ಲಿ ಅವರನ್ನು ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತರಲಾಯಿತು. ಮೆರವಣಿಗೆಯಲ್ಲಿ 200 ಜನ ಮಹಿಳೆಯರು ಪೂರ್ಣಕುಂಬದೊಂದಿಗೆ ಶಾಸಕರನ್ನು ಬರ ಮಾಡಿಕೊಂಡಿದರೆ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಾಗಳು ಗಮನ ಸೆಳೆದವು. ಕಾರ್ಯಕ್ರಮದಲ್ಲಿ 70 ಜನ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಾಲತ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭ ಉಪವಿಭಾಗಾಧಿಕಾರಿ ತಿಮ್ಮಣ್ಣ ಹುಲುಮನಿ,ತಹಶೀಲ್ದಾರ್ ರೇಣುಕಾ, ಇಓ ರಾಮಾಬೋವಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗ್ರಾ.ಪಂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರಿದ್ದರು.