ಹೊನ್ನಾಳಿ ಜುಲೈ 23 ಪಟ್ಟಣದಲ್ಲಿರುವ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(TAPCMS) ವತಿಯಿಂದ ಇಂದು ಉಪಾಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಈ ಹಿಂದೆ ಉಪಧ್ಯಕ್ಷರಾಗಿದ್ದ ಬಸವರಾಜಪ್ಪ AK ಇವರ ಅಧಿಕಾರವಧಿ ಮುಗಿದಿರುವ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯಿತು. ಈ ಸಂಘದ ಸರ್ವ ಸದಸ್ಯರುಗಳ ಒಪ್ಪಿಗೆಯ ಮೇರೆಗೆ ಶ್ರೀಮತಿ ವಿಶಾಲಾಕ್ಷಿ ಮಲ್ಲಿಕಾರ್ಜುನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿಯಾದ ಮಂಜುನಾಥ ನವರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಹೊನ್ನಾಳಿ, ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ನಿರ್ದೇಶಕರುಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಆಡಳಿತ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.