ಜಿಲ್ಲಾ ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ
ಸೇವಾ ಇಲಾಖೆ ವತಿಯಿಂದ ರೈತ ಸ್ವ-ಸಹಾಯ ಗುಂಪಿನ ಮಹಿಳಾ
ಉತ್ಪಾದಕರ ಗುಂಪುಗಳ ಸಹಯೋಗದೊಂದಿಗೆ
ಪ್ರಸಕ್ತ ಸಾಲಿನ ರಾಷ್ಟ್ರೀಯ ಜಾನುವಾರು ಮಿಷನ್
ಯೋಜನೆಯಡಿ ರೈತರಿಗೆ ತಾಂತ್ರಿಕ ವಿಚಾರ ಸಂಕಿರಣವನ್ನು
ಜುಲೈ 26 ರ ಮಂಗಳವಾರ ಬೆ.10.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಜಿ.ಪಂ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಡಾ.ಎ.ಚನ್ನಪ್ಪ ಉದ್ಘಾಟಿಸುವರು,
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ
ನಿರ್ದೇಶಕ ಡಾ.ಚಂದ್ರಶೇಖರ್ ಸುಂಕದ್ ಅಧ್ಯಕ್ಷತೆ
ವಹಿಸುವರು.
ಮುಖ್ಯ ಅತಿಥಿಗಳಾಗಿ ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ.ವೀರೇಶ್
ಟಿ.ಆರ್, ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ
ವ್ಯವಸ್ಥಾಪಕ ರಮೇಶ್.ಪಿ, ಎನ್.ಆರ್.ಎಲ್.ಎಂ ಜಿಲ್ಲಾ ಕಾರ್ಯಕ್ರಮ
ವ್ಯವಸ್ಥಾಪಕ ಬೋಜರಾಜ್.ಎನ್.ಎಂ ಆಗಮಿಸುವರು. ಸಂಪನ್ಮೂಲ
ವ್ಯಕ್ತಿಗಳಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ
ತರಬೇತಿ ಕೇಂದ್ರದ ವೈದ್ಯಾಧಿಕಾರಿ ಡಾ.ಗುರುಶಾಂತಪ್ಪ ಬಿ.ಜಿ,
ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸತೀಶ್ ಕೆ.ಜಿ, ಕುಂದೂರು
ಪಶು ಚಿಕಿತ್ಸಾಲಯ ಹಿರಿಯ ಪಶು ವೈದ್ಯಾಧಿಕಾರಿ
ಡಾ.ಜಿ.ಟಿ.ನವೀನ್‍ಕುಮಾರ್ ಭಾಗವಹಿಸುವರು ಎಂದು ಪ್ರಕಟಣೆ
ತಿಳಿಸಿದೆ.