ಹೊನ್ನಾಳಿ: ಎಲ್ಲಾ ಸಮಾಜಗಳಲ್ಲೂ ವಿದ್ಯಾವಂತರ ಸಂಖ್ಯೆ ಹೆಚ್ಚುತಿರುವುದು ಸಂತೋಷದ ಸಂಗತಿಯಾದರೂ ಕಲಿತವರಲ್ಲಿ ವಿನಯವಂತಿಕೆ ಬಾರದಿದ್ದರೆ ಸಮಾಜಕ್ಕೆ ಅವರು ಅಷ್ಟೇ ಅಪಾಯಕಾರಿಗಳು ಎಂಬುದಾಗಿ ರಾಜ್ಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಜಿಪಿ ಪಾಟೀಲ್ ಹೇಳಿದರು.
ಹೊನ್ನಾಳಿ ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜವು ಭಾನುವಾರ ಪಾಂಡುರಂಗ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಹೊನ್ನಾಳಿ ತಾಲ್ಲೂಕು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಸಮಾಜ ಸಂಘಟನೆ ಬಲಗೊಂಡಿದೆ ಎಂಬುದಕ್ಕೆ ಪ್ರೇರಣೆಯಂತೆ ಹರಿಹರ ಪೀಠಕ್ಕೆ ಸ್ಥಳಿಯರಾದ ಹೊನ್ನಾಳಿ ಜ್ಯೋತಿಪ್ರಕಾಶ್, ಹರಿಹರ ಹೆಚ್‍ಪಿ ಬಾಬಣ್ಣ, ರಾಜ್ಯ ಮಹಿಳಾ ಕಾರ್ಯದರ್ಶಿಯನ್ನಾಗಿ ದಾವಣಗೆರೆ ಲಕ್ಷ್ಮೀನಾಗರಾಜ್‍ರವರನ್ನು ನೀಡಿರುವುದು ರಾಜ್ಯ ಸಂಘಟನೆಗೆ ಪ್ರೇರಣೆಯಾಗಿದೆ ಎಂದರು.
ಅನೇಕ ಕಾರಣಗಳಿಂದ ಮೂರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಅನೇಕ ಕಾರ್ಯಯೋಜನೆಗಳ ನಿರೀಕ್ಷೆಯಲ್ಲಿದ್ದು ರಾಜ್ಯಮಟ್ಟದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವು ಸೇರಿದೆ ಎಂದರು.
ತಾವು ಸಮಾಜದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಹೊಂದಿದ ಮೇಲೆ ಸಮಾಜ ಸಂಘಟನೆಗೆ ಸಂಬಂಧಿಸಿದಂತೆ ಅನೇಕ ಕಾರ್ಯಯೋಜನೆಗಳ ಸಿದ್ದಪಡಿಸಿಕೊಂಡಿರುವೆ ತಾಲ್ಲೂಕು ಹಾಗೂ ಜಿಲ್ಲಾ ಸಂಘಟನೆಗಳಿಂದ ಸಹಕಾರ ಪಡೆದು ಸಮಾಜವನ್ನು ಮುಖ್ಯವಾಹಿನಿಗೆ ತರಬಯಸುವೆ ಎಂದರು.
ತಾಲ್ಲೂಕು ಪಂಚಮಸಾಲಿ ಸಮಾಜದ ಗೌರವ ಅಧ್ಯಕ್ಷರಾದ ಡಾ ರಾಜಕುಮಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ 2003ರಂದಲೂ ಸಮಾಜವು ಹಮ್ಮಿಕೊಂಡು ಬಂದಿದ್ದ ಸಮಾಜ ಸಂಘಟನೆಗೆ ಸಭೆಗಳು, ಶಿಬಿರಗಳು ಹಾಗೂ ಮುಂದೆ ಹಮ್ಮಿಕೊಳ್ಳುವ ವ್ಯಕ್ತಿತ್ವ ವಿಕಸನ ಶಿಬಿರಗಳ ಬಗ್ಗೆ ವಿವರಿಸಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಪ್ಪ ಪಟ್ಟಣಶೇಟ್ಟಿಯವರು ಮಾತನಾಡಿ ಇಂದು ಮಕ್ಕಳ ಪ್ರತಿಭಾ ಪುರಸ್ಕಾರದೊಂದಿಗೆ ವಿವಿದ ಕ್ಷೇತ್ರಗಳಲ್ಲಿ ಸಾಧನೆಗೈದ 16 ಜನ ಸಮಾಜ ಬಾಂದವರನ್ನು ಸನ್ಮಾನಿಸಲಾಗುತ್ತಿದೆ ವಿವಿಧ ಘಟಕಗಳ ರಚನೆಯೊಂದಿಗೆ ತಾಲ್ಲೂಕಿನಲ್ಲಿ ಸದೃಡ ಸಮಾಜ ಸಂಘಟನೆಗೆ ಮುಂದಾಗುವುದಾಗಿ ವಿವರಿಸುತ್ತ.ನಮ್ಮ ಸಮಾಜದ ವಿದ್ಯಾರ್ಥಿಗಳು ಕೆಎಎಸ್, ಐಎಎಸ್ ಐಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುವಂತೆ ಕರೆ ನೀಡಿದರು. ಇನ್ಫೋಸಿಸ್ ಸುಧಾ ಮೂರ್ತಿ ಅವರಂತಹ ಸಾಧಕರನ್ನ ವಿದ್ಯಾರ್ಥಿಗಳು ಪ್ರೇರಣೆ ಮಾಡಿಕೊಳ್ಳಬೇಕೆಂದರು. ಡಾ/ ರಾಜಕುಮಾರ್ ಅವರು ಸಮಾಜದ ಸಂಘಟನೆಯಲ್ಲಿ ಹಾಕಿಕೊಟ್ಟ ಭದ್ರಬುನಾದಿಯಲ್ಲಿ ಸಮಾಜವನ್ನು ಮೇಲಕ್ಕೆ ಎತ್ತುವ ಹಾಗೂ ಮುಖ್ಯವಾಹಿನಿಗೆ ತರಲು ಎಲ್ಲಾ ಹಂತದ ಪ್ರಯತ್ನ ನಡೆಸುವುದಾಗಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪರಮೇಶ್ ಪಟ್ಟಣಶೆಟ್ಟಿ, ಮಾಲತೇಶ್, ಪದ್ಮಾಪ್ರಶಾಂತ್, ರುದ್ರೇಶ್‍ಹೊಸೂರ್, ಸವಿತಾನಾಡಿಗ್, ಕರಿಬಸಪ್ಪಶುಂಠಿ, ವಸಂತ್, ಉಷಾಸಂತೋಷ್, ರಮೇಶ್, ಸಂದೀಪ್, ಪ್ರದೀಪ್, ಎಸ್‍ಕೆ ಕೊಟ್ರೇಶ್, ಪ್ರವೀಣ್, ವಿಜಯಕುಮಾರ್, ಹಾಲೇಶನಾಡಿಗ್‍ರವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಪರವಾಗಿ ಶ್ರೀನಿಧಿಪಾಟೀಲ್‍ರವರು ಮಾತÀನಾಡಿದರು. ಅತಿಥಿಗಳಾಗಿ ಸಮಾಜದ ರಾಜ್ಯ ಉಪಾಧ್ಯಕ್ಷರಾದ ಪರಮೇಶ್‍ಪಟ್ಟಣಶೆಟ್ಟಿ, ಹರಿಹರ ಪೀಠದ ಬಾಬಣ್ಣ, ದಾವಣಗೆರೆಯ ಲಕ್ಷ್ಮೀ ನಾಗರಾಜ್, ಸುಷ್ಟಾಪಾಟೀಲ್, ನ್ಯಾಮತಿ ಪಂಚಾಕ್ಷರಪ್ಪ, ಜಿ ದೊಡ್ಡಪ್ಪ, ಗುರುಶಾಂತಪ್ಪ, ಜಿದೊಡ್ಡಪ್ಪ, ಶಿಲ್ಪಾರಾಜುಗೌಡ, ಹಾಲೇಶ್, ಗಿರೀಶ್, ಭಾರತಿ ಇನ್ನಿತರರಿದ್ದರು.
ಹಾಲೇಶ್ ಸ್ವಾಗತಿಸಿ, ಕೆವಿಪ್ರಸನ್ನ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸುಮಾರವಿಕುಮಾರ ನಿರೂಪಿಸಿ, ಶಶಿದಿವಾಕರ್ ಕವಿತಾಚನ್ನೇಶ್ ಪ್ರಾರ್ಥಿಸಿ, ರಾಜುಹಿರೇಮಠ ವಂದಿಸಿದರು.

Leave a Reply

Your email address will not be published. Required fields are marked *