ಸ್ಮಾರ್ಟ್ ಸಿಟಿ ಕಾಮಗಾರಿಗಳು ಎಂದರೆ ಕಳಪೆ ಕಾಮಗಾರಿಗಳು ಹಾಗೂ ಮೂಲಭೂತ ಸೌಕರ್ಯ ಒದಗಿಸದೆ ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆಗೊಂಡ ಯೋಜನೆಗಳು ಎಂಬ ಆಕ್ರೋಶಕ್ಕೆ ಸಾರ್ವಜನಿಕರಿಂದ ಒಳಗಾಗಿರುವ ಯೋಜನಯೇ……. ಹಳೆ ದಾವಣಗೆರೆಯಲ್ಲಿ ನಿರ್ಮಾಣಗೊಂಡಿರುವ ನೂತನ ಬಸ್ ಸ್ಟ್ಯಾಂಡ್.

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಪ್ರವಾಸಕ್ಕೆ ಬಂದಾಗ ನಾಲ್ಕೈದು ಯೋಜನೆಗಳನ್ನು ಎಲ್ಲೋ ಒಂದು ಕಡೆ ನಿಂತು ಉದ್ಘಾಟನೆ ಮಾಡುವ ಪರಿಪಾಠ ಪ್ರಾರಂಭಿಸಿದ್ದು ಇದರಿಂದ ತಾವು ಉದ್ಘಾಟನೆ ಮಾಡುತ್ತಿರುವ ಕಾಮಗಾರಿಗಳು ಪೂರ್ಣಗೊಂಡಿವೆಯೇ??? ಉತ್ತಮ ಗುಣಮಟ್ಟದಿಂದ ಕೂಡಿವೆಯೇ??? ಎಂಬ ಅರಿವೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರುವುದಿಲ್ಲ.

ಹಳೆ ದಾವಣಗೆರೆಯಲ್ಲಿ ತಿಂಗಳ ಹಿಂದೆಯೇ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಸ್ ಸ್ಟ್ಯಾಂಡ್ ನಿರ್ಮಾಣಗೊಂಡಿದ್ದು, ತಿಂಗಳುಗಳು ಕಳೆಯುತ್ತಾ ಬಂದರು ಶೌಚಾಲಯ ಮಾತ್ರ ಬೀಗ ತೆರೆದಿಲ್ಲ. ದಿನಕ್ಕೆ ಸಾವಿರಾರು ಪ್ರಯಾಣಿಕರು ಈ ಬಸ್ ಸ್ಟ್ಯಾಂಡ್ ಗೆ ಬರುತ್ತಿದ್ದು ಸುತ್ತಮುತ್ತ ವಾಣಿಜ್ಯ ಮಳಿಗೆಗಳು, ಶಾಲಾ-ಕಾಲೇಜುಗಳು ಇರುವುದರಿಂದ ಮೂತ್ರ ವಿಸರ್ಜನೆಗೆ ಹೋಗಲು ಪ್ರಯಾಣಿಕರು ಕಷ್ಟ ಪಡುತ್ತಿದ್ದಾರೆ, ಪಾಪ ಅಧಿಕಾರಿಗಳಿಗೆ, ಸಚಿವರುಗಳಿಗೆ ಇಂತಹ ಸಾರ್ವಜನಿಕರ ಕಷ್ಟ ಎಲ್ಲಿ ಅರ್ಥವಾಗಬೇಕು ಎಂದು ಪ್ರಯಾಣಿಕರು ಇಡಿ ಶಾಪ ಹಾಕುತ್ತಿರುವುದು ಈ ಬಸ್ಟಾಂಡ್ ಆವರಣದಲ್ಲಿ ಸಾಮಾನ್ಯವಾಗಿದೆ.

ಕೇವಲ ಪ್ರಚಾರಕ್ಕಾಗಿ ಉದ್ಘಾಟನೆ ಮಾಡುವ ಬದಲು ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕಾಗಿದೆ.

*ಕೆ.ಎಲ್.ಹರೀಶ್ ಬಸಾಪುರ

Leave a Reply

Your email address will not be published. Required fields are marked *