ದಾವಣಗೆರೆ: ಕರೋನಾಕ್ಕಿಂತ ಮುಂಚಿನ ದಿನಗಳಲ್ಲಿ ದಾವಣಗೆರೆಯಲ್ಲೂ ಅತ್ಯುತ್ತಮವಾದ ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದ್ದು, ಕರೋನಾ ನಂತರ ಪ್ರಥಮವಾಗಿ ಇಂತಹ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಿರುವುದನ್ನು ದಾವಣಗೆರೆ ಜಿಲ್ಲಾ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ದಿನೇಶ್‍ಕೆ.ಶೆಟ್ಟಿ ಅವರು ಪ್ರಶಂಶಿಸಿದರು.
ದಾವಣಗೆರೆ ನಗರದ ಕಲಾಕಲ್ಪ ಆರ್ಟ್ ಅಕಾಡೆಮಿ ಮತ್ತು ವಿ-ಯೂನಿಯನ್ ಇವೆಂಟ್ ಅವರುಗಳು ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನನ್ನಮ್ಮ ನಂ-1 ಅಂತಿಮ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂತಹ ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕಲಾಕಲ್ಪ ಆರ್ಟ್ ಅಕಾಡೆಮಿ ಮತ್ತು ವಿ-ಯೂನಿಯನ್ ಇವೆಂಟ್ ಅವರುಗಳು ಉತ್ತಮ ಅಡಿಪಾಯ ಹಾಕಿದ್ದು, ದಾವಣಗೆರೆಯಲ್ಲಿ ನಡೆವ ಕಾರ್ಯಕ್ರಮಗಳು ವಿಶ್ವದ ಗಮನ ಸೆಳೆಯುವಂತಾಗಲಿ ಎಂದು ಆಶಿಸಿದರು.
ದಾವಣಗೆರೆ ಕಲಾವಿದರಿಗೆ, ಕ್ರೀಡಾಪಟುಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ನಗರ. ಇಲ್ಲಿನ ನಾಗರೀಕರ ಪ್ರೋತ್ಸಾಹವನ್ನು ಅನೇಕ ಕಲಾವಿದರು, ಕ್ರೀಡಾಪಟುಗಳು ನೆನಪಿಸಿಕೊಳ್ಳುತ್ತಾರೆ. ಸ್ಪರ್ಧಾ ಕಾರ್ಯಕ್ರಮಗಳು ದಾವಣಗೆರೆಯಲ್ಲಿ ಅವಶ್ಯಕತೆ ಇದ್ದು, ನನ್ನಮ್ಮ ನಂ-1 ಹೆಸರಿನಲ್ಲಿ ಕಾರ್ಯಕ್ರಮ ಜನರ ಮನಸ್ಸನ್ನು ಗೆದ್ದಿದೆ. ಇಂತಹ ಕಾರ್ಯಕ್ರಮಗಳಿಂದ ಪ್ರತಿಭೆಗಳನ್ನು ಗುರುತಿಸಬಹುದಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಶಕುಂತಲಾ ಗುರುಸಿದ್ದಯ್ಯ ಮಾತನಾಡಿ ಕಲಾಕಲ್ಪ ಆರ್ಟ್ ಅಕಾಡೆಮಿ ಮತ್ತು ವಿ-ಯೂನಿಯನ್ ಇವೆಂಟ್‍ನವರು ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮಾಲೀಕರಾದ ಟಿಎಸ್‍ಎಸ್ ಸ್ವಾಮಿ, ರವಿ ಶಾಮನೂರು ಫಿಲ್ಮ್ಸ್ ಪದವಿಪೂರ್ವ ಚಿತ್ರತಂಡದ ನಿರ್ಮಾಪಕರಾದ ಡಾ. ರವಿ ಶಾಮನೂರು ಹಾಗೂ ನಿರ್ದೇಶಕರಾದ ಹರೀಶ್, ನಟ ಪೃಥ್ವಿ ಶಾಮನೂರು, ಕಲಾಕಲ್ಪ ಕಲಾ ಶಾಲೆಯ ಅಧ್ಯಕ್ಷರಾದ ಐನಹಳ್ಳಿ ವಿಶ್ವಪ್ರಕಾಶ್ ರವರು ಉಪಸ್ಥಿತರಿದ್ದರು.

ನನ್ನಮ್ಮ ನಂಬರ್ 1 ಗ್ರ್ಯಾಂಡ್ ಫಿನಾಲೆ ಸ್ಪರ್ಧೆಯಲ್ಲಿ ಇಪ್ಪತ್ತು ಜನ ಸ್ಪರ್ಧಿಸಿದ್ದು, ಇದರಲ್ಲಿ ವಿಜೇತರಾಗಿ ಸೌಮ್ಯ ಹರೀಶ್ ಹಾಗೂ ಪ್ರಥಮ ರನ್ನರ್ ಅಪ್ ವಿಜಯಲಕ್ಷ್ಮೀ ಕೆ ಬಿ ಹಾಗೂ 2ನೇ ರನ್ನರ್ ಅಪ್ ಮಾಲಾ ರವಿ, ಶ್ವೇತಾ ಎಸ್, ಪದ್ಮಪ್ರಿಯ. ಸ್ವೀಕರಿಸಿದರು.

ತೀರ್ಪುಗಾರರಾಗಿ ಶ್ರೀಮತಿ ರೇಖಾ ನಾಗರಾಜ್, ಶ್ರೀಮತಿ ಹೇಮಾ ಶ್ರೀನಿವಾಸ್, ಶ್ರೀಮತಿ ಪ್ರೀತಿ ಮಾಗನಳ್ಳಿ, ಶ್ರೀಮತಿ ಭಾರತಿ ಕೇಶವ್, ಶ್ರೀಮತಿ ಪ್ರಸನ್ನ ಬಿ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವೃದ್ಧರಿಗೆ ಹಾಗೂ ಬಾಪೂಜಿ ಹಾಸ್ಪಿಟಲ್ ನರ್ಸ್‍ರವರಿಗೆ (ಅoviಜ ತಿoಡಿಡಿieಡಿ ) ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ವಿಜಯಕುಮಾರ್ ಬಿ ಜೆ ಹಾಗೂ ಜ್ಞಾನಿಕ ಐನಹಳ್ಳಿ ಅವರು ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಕಲಾಕಲ್ಪ ಕಲಾಶಾಲೆಯ ಶುಭಾ ಐನಹಳ್ಳಿ ವಿಶ್ವಪ್ರಕಾಶ್, ವಿ- ಯೂನಿಯನ್ ಇವೆಂಟ್ಸ್‍ನ ವಿವೇಕ್ ಎಂಪಿ, ಹ್ಯಾಪಿ ಈವೆಂಟ್ಸ್‍ನ ಕಾರ್ತಿಕ್ ಹಿರೇಮಠರವರು ನಡೆಸಿಕೊಟ್ಟರು.

Leave a Reply

Your email address will not be published. Required fields are marked *