ಸಾಸ್ವೆಹಳ್ಳಿ: ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಗ್ರಾಮದ ಕೆ.ಎನ್.ದೇವರಾಜ್ (23) ಡಿಪ್ಲೋಮೊ ಮುಗಿಸಿ ಕೆಲಸ ಮಾಡುವಾಗ ಅನಾರೋಗ್ಯ ಕಾಣಿಸಿಕೊಂಡಿದೆ. ಆ ಯುವಕನನ್ನು ಕಸ್ತೂರಿ ಬಾ ಅಸ್ಪತ್ರೆ ಮಣಿಪಾಲ್ ನಲ್ಲಿ ದಾಖಲಿಸಿ, ಪರೀಕ್ಷಿಸಿದಾಗ ಎರಡೂ ಕಿಡ್ನಿಗಳು ವಿಫಲವಾಗಿರುವುದು ತಿಳಿದು ಬಂತು.
ಆತನ ತಂದೆ ನಂಜುಡಪ್ಪ ಬಡವನಾಗಿದ್ದು ಕೇವಲ ಒಂದುಕಾಲು ಎಕರೆ ಭೂಮಿಯಲ್ಲಿ ಒಣ ಬೇಸಾಯವನ್ನೆ ನಂಬಿಕೊಂಡಿದ್ದಾರೆ. ತನ್ನ ಮಗ ಬದುಕಿದರೆ ಸಾಕು ಎನಿಸಿ ತನ್ನ ಕಿಡ್ನಿಯನ್ನು ಮಗನಿಗೆ ನೀಡಿದ್ದಾರೆ. ಡಯಲಿಸೀಸ್ ಸೇರಿ ಇತರೆ ಒಟ್ಟು ಈಗ Rs 15 ಲಕ್ಷಕ್ಕೂ ಅಧಿಕ ಖರ್ಚಾಗಿರುತ್ತದೆ.


ದೇವರಾಜ್ ನ ತಾಯಿ ಬಸಮ್ಮ ಹನುಮನಹಳ್ಳಿ ಗ್ರಾಮದವರಾಗಿದ್ದು, ತನ್ನ ತವರೂರಿನ ಜನರ ಸಹಾಯಹಸ್ತ ಕೇಳಿದಾಗ ಗ್ರಾಮದ ಕೂಲಿ ಕಾರ್ಮಿಕ, ಶಿಕ್ಷಕ, ಟೈಲರ್, ರೈತ,ಎಲ್ಲಾ ಶ್ರಮಿಕ ವರ್ಗದವರು ತಮ್ಮ ಕೈಲಾದ ಹಣ ಸಹಾಯ ಮಾಡಿ ಹಾವೇರಿ ಜಿಲ್ಲೆಯ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ ಚಂದ್ರಶೇಖರ್ ನೇತೃತ್ವದಲ್ಲಿ ಹಣ ನೀಡಿದರು.
ಡಿವೈಎಸ್ಪಿ ಚಂದ್ರಶೇಖರ್ ಬಿ.ಪಿ ಮಾತನಾಡಿ, ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿದರೆ ನಮ್ಮ ಅರ್ಪಣೆಯು ನೇರವಾಗಿ ದೇವರಿಗೆ ಸಂದಾಯವಾಗುತ್ತದೆ. ಬಡತದಲ್ಲಿರುವ ದೇವರಾಜ್ ಆರೋಗ್ಯದಿಂದ ಮರಳಲಿ ಅವರಿಗೆ ನಿಮ್ಮ ಕೈಲಾದ ಸಹಾಯ ಮಾಡಿ, ಸಹಾಯ ಮಾಡಲು ಇಚ್ಛೆ ಉಳ್ಳವರು. ಆತನ ಬ್ಯಾಂಕ್ ಖಾತೆ ಸಂಖ್ಯೆ 0584119015160, ಐಎಫ್ ಎಸ್ ಸಿ ಕೋಡ್ : CNRB 0000584, ಕೆನರಾಬ್ಯಾಂಕ್ ಚೀಲೂರು ಶಾಖೆಗೆ ಅಥವಾ ಪೋನ್ ಫೇ ನಂಬರ್ 9148626425 ಸಂದಾಯ ಮಾಡಿ ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *